ಚಿತ್ರದುರ್ಗ. ನಗರದ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಐಕ್ಯೂಎಸಿ ವತಿಯಿಂದ ವಿಶ್ವಯೋಗ ದಿನವನ್ನು ಆಚರಿಸಲಾಯಿತು.
ಮುಖ್ಯಅತಿಥಿ ಯೋಗಗುರು ರುದ್ರಸ್ವಾಮಿ ಅವರು ಮಾತನಾಡಿ, ಮನುಷ್ಯನ ಹುಟ್ಟು ಮತ್ತು ಸಾವು ಹೇಗೆ ನಿಗೂಢವೋ ಹಾಗೆಯೆ ಅವನ ಶರೀರ, ಮನಸ್ಸು ಚಿಂತನೆಗಳೂ ಕೂಡ. ಇವುಗಳನ್ನು ಸರಿಯಾದ ಮಾರ್ಗದಲ್ಲಿ ಉದ್ದೀಪನಗೊಳಿಸಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಯೋಗ ಮಾಡುವುದರಿಂದ ಅಸಮರ್ಪಕ ಮತ್ತು ಒತ್ತಡ ಸಂದರ್ಭಗಳನ್ನು ಸಮಚಿತ್ತದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾAಶುಪಾಲರಾದ ಡಾ.ಕೆ.ಸಿ. ರಮೇಶ್ ಸ್ವಾಗತಿಸುತ್ತ, ದೇಹ, ಅಂತರAಗ ಪ್ರಶಾಂತತೆಯಿAದ ಕೂಡಿರಲು ಪ್ರತಿನಿತ್ಯ ಯೋಗವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯೋಗ ಪ್ರದರ್ಶನದಲ್ಲಿ 60ಕ್ಕು ಹೆಚ್ಚು ವಿದ್ಯಾರ್ಥಿಗಳು, , ಐಕ್ಯೂಎಸಿ ಸಂಚಾಲಕರಾದ ಡಾ. ಹರ್ಷವರ್ಧನ್, ಎನ್‌ಸಿಸಿ ಅಧಿಕಾರಿ ಡಾ. ಸತೀಶ್‌ನಾಯ್ಕ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಬಿ. ರೇವಣ್ಣ, ಪ್ರೊ. ನಾಗರಾಜ್, ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ. ಜಿ.ಎನ್. ಬಸವರಾಜಪ್ಪ, ಪ್ರೊ. ಎಲ್. ಶ್ರೀನಿವಾಸ್, ಪ್ರೊ. ಆರ್.ಕೆ. ಕೇದಾರನಾಥ್, ಪ್ರೊ. ಚಂದಮ್ಮ, ಪ್ರೊ. ಮಂಜುನಾಥಸ್ವಾಮಿ, ಪ್ರೊ. ಬಿ.ಎಂ. ಸ್ವಾಮಿ ಹಾಗು ಬೋಧಕೇತರ ವರ್ಗದವರು ಭಾಗವಹಿಸಿದ್ದರು.
ಕೊನೆಯಲ್ಲಿ ಉಪಪ್ರಾಚಾರ್ಯ ಹೆಚ್.ಕೆ. ಶಿವಪ್ಪನವರು ವಂದಿಸಿದರು.