ನಾಯಕನಹಟ್ಟಿ :: 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗ ಸ್ಟೀಪ್ ಸಮಿತಿ ವಿವಿಧಡೆ ಜಾಗೃತಿ ಮೂಡಿಸುತ್ತದೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿದ್ದಾರೆ

ಅವರು ಬುಧವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಹಾಗೂ ಮತದಾನದ ಪ್ರತಿಜ್ಞ ಜಾಗೃತಿ ಮೂಡಿಸಿ ಮಾತನಾಡಿದ್ದಾರೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನವನ್ನು ಮಾಡಬೇಕು
2023ರ ವಿಧಾನಸಭಾ ಚುನಾವಣೆಯಲ್ಲಿ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗದ ಸ್ಕಿಪ್ ಸಮಿತಿ ಜಾಗೃತಿ ಮೂಡಿಸುತ್ತದೆ ಎಂದರು.
ಇದು ವೇಳೆ ಸಮುದಾಯ ಸಂಘಟನಾ ಅಧಿಕಾರಿ ಪಿ ಬಸಣ್ಣ ಮಾತನಾಡಿ ನಮ್ಮ ಮತದಾನ ನಮ್ಮ ಹಕ್ಕು ಅದರಿಂದ ಯಾರು ಕೂಡ ವಂಚಿತರಾಗಬಾರದು ಅದನ್ನು ನಿಮ್ಮ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು ಈ ಮತದಾನ ಜಾಗೃತಿಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಸಮುದಾಯ ಸಂಘಟನಾ ಅಧಿಕಾರಿ ಪಿ ಬಸಣ್ಣ, ಸಮುದಾಯ ಸಂಘಟಕರು ನಾಗರತ್ನಮ್ಮ, ಸುರೇಶ್, ಟಿ ಟಿ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಟಿ ರುದ್ರಮುನಿ, ಶಿವಕುಮಾರ್, ಸಂದೀಪ್, ರೇಣುಕಾ, ಗುಡ್ಡದಯ್ಯ, ಅಭಿಷೇಕ್, ಮಧು, ಮತ್ತು ಬಿ ಎಲ್ ಓ ಗಳು , ಆಶಾ ಕಾರ್ಯಕರ್ತರಾದ ಪಾರಿಜಾತ, ದ್ರಾಕ್ಷಾಯಿಣಿ, ಪರಂಜೋತಿ ,ಅನುಸೂಯಮ್ಮ, ರತ್ನಮ್ಮ, ಶಿವರುದ್ರಮ್ಮ, ಅಂಗನವಾಡಿ ಶಿಕ್ಷಕಿ ಎಂ ಬಿ ವಿಮಲಾಕ್ಷಿ ಆರ್. ಸರಸ್ವತಿ, ವಿ. ನಾಗರತ್ನಮ್ಮ, ಶೀಲಾ ಬಾಯಿ, ಎಚ್ ಶೈಲಾ, ವೀಣಮ್ಮ, ಅರ್ಚನಾ ,ಲತಾಬಾಯಿ, ಸೇರಿದಂತೆ ಸಾರ್ವಜನಿಕರು ಇದ್ದರು ಇದ್ದರು

About The Author

Namma Challakere Local News
error: Content is protected !!