ಚಳ್ಳಕೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಖಡ ನೂರಕ್ಕೆ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗದ ಸ್ವೀಪ್ ಸಮಿತಿ ವಿವಿಧ ಆಯಾಮಗಳಲ್ಲಿ ಕಸರತ್ತು ನಡೆಸುತ್ತಿದೆ ಅದರಂತೆ ಇಂದು ಆಯಿಲ್ ಸಿಟಿಯ ಚಳ್ಳಕೆರೆ ಕ್ಷೇತ್ರದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ ರವರ ಮಾರ್ಗದರ್ಶನದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಇಓ.ಹೊನ್ನಯ್ಯ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.
ನಗರದ ವಾಲ್ಮೀಕಿ ವೃತ್ತದ ಬಳಿ ಆಯೋಜಿಸಿದ್ದ ನಾಗರೀಕರಿಗೆ ಮತದಾನದ ಜಾಗೃತಿ ಸಹಿ ಹಾಗೂ ಮತದಾನದ ಪ್ರತಿಜ್ಞೆ ಮಾಡಿಸುವ ಮೂಲಕ ಜಾಗೃತಿ ಮೂಡಿಸಿರು.
ಚುನಾವಣೆ ಅಧಿಕಾರಿ ಬಿ.ಆನಂದ್ ಮಾತನಾಡಿ, ಸ್ವಿಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿಯಲ್ಲಿ ಸಾರ್ವಜನಿಕರ ಸಹಿ ಸಂಗ್ರಹ ಮಾಡುವ ಮೂಲಕ ಸಾರ್ವಜನಿಕರು ಜಾಗೃತರಾಗಬೇಕು, 2023ರ ವಿಧಾನಸಭೆ ಚುನಾವಣೆ ಮೆ.10 ರಂದು ನಡೆಯುತ್ತಿದ್ದು ತಮ್ಮ ಸಹಿಯೊಂದಿಗೆ ತಾವು ಕೂಡ ಜಾಗೃತರಾಗಿ ತಮ್ಮ ಒಡನಾಡಿಗಳನ್ನು ಕರೆತಂದು ಮತದಾನ ಮಾಡಿಸಬೇಕು, ಆದ್ದರಿಂದ ಮತದಾನ ಜಾಗೃತಿ ಸಹಿ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದರು.
ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಇಓ.ಹೊನ್ನಯ್ಯ ಮಾತನಾಡಿ, ನಗರದಲ್ಲಿ ಮೊದಲ ಬಾರಿಗೆ ನಾಗರೀಕರ ಸಹಿ ಸಂಗ್ರಹಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತದೆ, ಇನ್ನೂ ನಾಗರೀಕರು ಮತದಾನ ಅಮೂಲ್ಯವಾದದ್ದು ಎಂಬುದು ಮನಗಾಣಬೇಕು, ಸಹಿ ಮಾಡುವ ಮೂಲಕ ತಮ್ಮ ಕಡ್ಡಾಯ ಮತದಾನ ನಾನು ಮತ್ತು ನಮ್ಮವೊರೊಂದಿಗೆ ಮತದಾನ ಮಾಡಿಸುತ್ತೆನೆ ಎಂಬ ಪ್ರತಿಜ್ಞೆ ಮಾಡಿರುವುದು 2023ಕ್ಕೆ ಹೆಚ್ಚಿನ ಮತದಾನ ಮಾಡುವ ನೀರಿಕ್ಷೆ ಇದೆ ಎಂದರು.
ತಹಶೀಲ್ದಾರ್ ರೋಷನ್ ಬಾಷ ಮಾತನಾಡಿ, ನಮ್ಮ ಮತದಾನ ನಮ್ಮ ಹಕ್ಕು ಅದರಿಂದ ಯಾರು ಕೂಡ ವಂಚಿತರಾಗಬಾರದು ಆದನ್ನು ನಿಮ್ಮ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು, ಈ ಮತದಾನ ಜಾಗೃತಿಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಪೌರಾಯುಕ್ತರಾದ ರಾಮಕೃಷ್ಣ, ಕಂದಾಯ ಅಧಿಕಾರಿ ಲಿಂಗೇಗೌಡ, ಪ್ರಕಾಶ್, ದಿವಾಕರ್, ಪಿಡಿಓ ರಜನಿಕಾಂತ್, ಶ್ರೀಧರ್, ತಾಪಂ.ಸಿಬ್ಬAದಿ ಇತರರು ಇದ್ದರು.
ಪೋಟೋ,ಚಳ್ಳಕೆರೆ ನಗರದ ವಾಲ್ಮಿಕಿ ವೃತ್ತದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹದಲ್ಲಿ ಚುನಾವಣೆ ಅಧಿಕಾರಿ ಬಿ.ಆನಂದ್ ಸಹಿ ಮಾಡಿದರು.
ಪೋಟೋ,ಚಳ್ಳಕೆರೆ ನಗರದ ವಾಲ್ಮಿಕಿ ವೃತ್ತದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹದ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಮಾಡಿದರು.