ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಗರದ ತಾಲ್ಲೂಕು ಕಛೇರಿಯಲ್ಲಿ ನೆಡೆದ 4ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಲಾಂಛನಾ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಚ್ 12ರಂದು ನೆಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಸಾಹಿತ್ಯ ಕೊಡುಗೆಯನ್ನು ಕೊಟ್ಟಿದೆ. ಈ ಲಾಂಛನದಲ್ಲಿ ಇರುವ ತರಾಸು ಅವರು ಕನ್ನಡ ಸಾಹಿತ್ಯಕ್ಕೆ 107 ಕೃತಿಗಳನ್ನು ಕೊಟ್ಟು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ.
ಅವರ ಚಿತ್ರದುರ್ಗ ಪಾಳೇಗಾರರ 5ನೇ ಮದಕರಿನಾಯಕರ ಐತಿಹಾಸಿಕ ಕಾದಂಬರಿಯಾದ ದುರ್ಗಾಸ್ತಮಾನ ಸೇರಿದಂತೆ ಸಾಮಾಜಿಕ ಕಾದಂಬರಿಗಳು ಚಲನಚಿತ್ರಗಳಾಗಿವೆ.
ಇನ್ನು ಬೆಳೆಗೆರೆ ಕೃಷ್ಣ ಶಾಸ್ತ್ರೀಗಳು, ಚಂದ್ರಶೇಖರ ಶಾಸ್ತ್ರಿ, ಸಾಹಿತಿ ಮರಿಕುಂಟೆ ತಿಪ್ಪಣ್ಣ, ನೇಮಿಚಂದ್ರ, ಅವರು ಪ್ರಮುಖರಾಗಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ 10 ವರ್ಷಗಳ ನಂತರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಥಿತ್ಯ ನಮಗೆ ಸಿಕ್ಕಿದ್ದು ಈ ಬಾರಿ ಚಳ್ಳಕೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನೆಡೆಯುತ್ತಿದ್ದು. ಶಾಸಕರ ಮಾರ್ಗದರ್ಶನದಲ್ಲಿ ಈ ಸಮ್ಮೇಳನವನ್ನು ನೆಡೆಸುತ್ತೇವೆ ಜೊತೆಗೆ ತಾಲ್ಲೂಕು ಆಡಳಿತ ಹಾಗೂ ಅಧಿಕಾರಿ ವರ್ಗ ಮತ್ತು ತಾಲ್ಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಗಳು ಸಂಸ್ಥೆಗಳ ಮುಖಂಡರು, ಕನ್ನಡಿಗರ ಸಹಕಾರ ಸೇರಿ ನಮ್ಮಕನ್ನಡ ಭಾಷಾ ಹಬ್ಬವೆಂದು ಭಾಗವಹಿಸಿ ಆಚರಿಸಲು ನಿಮ್ಮೆಲ್ಲರ ಬೆಂಬಲ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ತಹಸೀಲ್ದಾರ್ ರೇಹನ್ ಪಾಷಾ, ಕನ್ನಡ ಸಾಹಿತ್ಯ ಪರಿಷತ್ ಸಲಹಾ ಸಮಿತಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ, ಕಸಾಪ ತಾಲ್ಲೂಕು ಕೋಶಧ್ಯಕ್ಷ ಜನಾರ್ಧನ್, ಚಳ್ಳಕೆರೆ ಕಸಬಾ ಹೋಬಳಿ ಕೋಶಧ್ಯಕ್ಷ ಮೃತ್ಯುಂಜಯ, ಕ.ಸಾ.ಪ ನಿರ್ದೇಶಕ ದುರ್ಗಾವರ ತಿಪ್ಪೇಸ್ವಾಮಿ, ಸಾಹಿತ್ಯ ಪರಿಚಾರಕ ವಿಷ್ಣು ಮೂರ್ತಿ ರಾವ್, ಕವಿ ದ್ಯಾವರನಹಳ್ಳಿ ಆನಂದ್ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!