ಚಳ್ಳಕೆರೆ : ದಲಿತರ ಏಳಿಗೆಗೆ ಆಶಾಕಿರವಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರಲ್ಲಿ ಯುವಕ ಸಂಘ ಸ್ಥಾಪಿಸಿರುವುದು ಸಂತಸ ತಂದಿದೆ ಎಂದು ದಲಿತ ಮುಖಂಡ ಕೋಡಿಹಳ್ಳಿ ಎಂ.ಶಿವಮೂರ್ತಿ ಅಭಿಪ್ರಾಯ ವ್ಯಕ್ರಪಡಿಸಿದರು.
ಅವರು ತಾಲೂಕಿನ ಕೋಡಿಹಳ್ಳಿ ಗ್ರಾಮದ ದಲಿತ ಕೊಲೋನಿಯ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಯುವಕರು ಒಟ್ಟಾಗಿ ತಮ್ಮ ಏಳಿಗೆಗೆ ಹಾಗೂ ಸಮುದಾಯದ ಒಗ್ಗಟ್ಟು ಪ್ರದರ್ಶಸಿಸಲು ಸಂಘಟನೆ ಹಾಗೂ ಸಂಘ ಅನಿವಾರ್ಯ ಆದ್ದರಿಂದ ಅಂತಹ ಮಹತ್ವದ ನಿರ್ಣಯಕ್ಕೆ ಕೋಡಿಹಳ್ಳಿ ಯುವಕರು ಸಂಘ ರಚಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಟ್ಟಿಯ ಮುಖಂಡರು, ಯಜಮಾನರು ಮತ್ತು ಯುವಕರು, ಸರ್ಕಾರಿ ಹಾಗೂ ಖಾಸಗಿ ಎಲ್ಲ ನೌಕರರು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು,
ನೂತನ ಸಂಘದ ಅಧ್ಯಕ್ಷ ಡಿ.ವಿಜಯಕುಮಾರ್. ಉಪಾಧ್ಯಕ್ಷರಾದ ರುದ್ರಮುನಿ ಎಚ್, ಮುಖ್ಯ ಪ್ರಧಾನ ಕಾರ್ಯದರ್ಶಿಗಳಾದ ಶಿವಮೂರ್ತಿ. ಓ, ಮಾರ್ಗದರ್ಶಿಗಳಾದ ರಾಜಶೇಖರ್.ಕೆ ಖಜಾಂಚಿಯಾದ ತಿಪ್ಪೇಸ್ವಾಮಿ. ಕಾನೂನು ಸಲಹೆಗಾರರು ಆದ ರಮೇಶ. ಎಂ, ನಿರ್ದೇಶಕರಾದ ಮಂಜುನಾಥ್ ಎಂ.ಟಿ ಹಟ್ಟಿಯ ಮುಖಂಡರಾದ ಸಣ್ಣ ನಾಗಯ್ಯ, ಎಂ.ಏಚ್ ತಿಪ್ಪೇಸ್ವಾಮಿ, ಪುಟ್ಟಣ್ಣ, ಓಬಣ್ಣ, ಗಂಗಣ್ಣ, ಲಿಂಗರಾಜ್. ಡಿ ಮಲ್ಲಿಕಾರ್ಜುನಯ್ಯ.ಟಿ ಪದಾಧಿಕಾರಿಗಳಾದ ನಂದೇಶ್ , ಪರಮೇಶ್, ಮಲ್ಲಿಕಾರ್ಜುನ.ಜಿ,.ರಾಜು.ಟಿ, ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..