ಬಯಲು ಸೀಮೆ ಹಸಿರುಕರಣ ಮಾಡಿದ ಶಾಸಕ ಟಿ.ರಘುಮೂರ್ತಿಗೆ ಅಭಿನಂಧನೆ
ಚಳ್ಳಕೆರೆ : ಬರಪೀಡಿತ ಪ್ರದೇಶ ಎಂಬ ಅಣೆ ಪಟ್ಟಿಯನ್ನು ಹೋಗಲಾಡಿಸಿದ ಶಾಸಕ ಟಿ. ರಘುಮೂರ್ತಿಗೆ ಅಭಿನಂಧನೆ ಸಲ್ಲಿಸಲು ಅಖಂಡ ಕರ್ನಾಟಕ ರಾಜ್ಯ ಸಂಘದವತಿಯಿAದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅಖಂಡ ಕರ್ನಾಟಕ ರಾಜ್ಯ ಸಂಸ್ಥಾಪನಾ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾಗಿ 10 ವರ್ಷಗಳ ಅವಧಿಯಲ್ಲಿ ವೇದಾವತಿ ನದಿಗೆ ಬ್ಯಾರೇಂಜ್, ಬ್ರಿಜ್ ಕಂ ಬ್ಯಾರೇಜ್, ನಿರ್ಮಿಸಿ ಮಳೆಗಾಲದಲ್ಲಿ ಮಾತ್ರ ವೇದಾವತಿ ನದಿಯಲ್ಲಿ ನೀರು ಕಾಣುವಂತಹ ಪರಿಸ್ಥಿತಿಯಲ್ಲಿ ವಾಣಿವಿಲಾಸ ಸಾಗರದಿಂದ ನೀರು ಹರಿಸುವ ಮೂಲಕ ಸದಾ ನೀರನ್ನು ನೋಡುವಂತಾಗಾಗಿ ಅಂತರ್ಜಲ ಹೆಚ್ಚಳದಿಂದ ರೈತರ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಿ ಈಗ ರೈತರು ಅಡಿಕೆ, ತೆಂಗು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಮಾಡಿ ಬರಪೀಡಿತ ಪ್ರದೇಶ ಎಂಬ ಅಣೆಪಟ್ಟಿಯಿಂದ ದೂರ ಮಾಡಿದ್ದಾರೆ.
ಸರಕಾರಿ ಇಂಜಿನಿಯರಿAಗ್ ಕಾಲೇಜ್, ಜಿಟಿಟಿಸಿ ಕೇಂದ್ರ, ಸಾರಿಗೆ ಬಸ್ ನಿಲ್ದಾಣ, ಸಾರಿಗೆ ಡಿಪೋ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿ , ಕುಡಿಯುವ ನೀರು, ವಸತಿ, ಸ್ಮಶಾನ ಅಭಿವೃದ್ಧಿ, ಸೇರಿಂತೆ ಸಾಕಷ್ಟು ಅಭಿವೃದ್ದಿ ಮಾಡಲಾಗಿದೆ ಈಗೇ ಹತ್ತು ಹಲವು ಕಾರ್ಯಗಳನೊಳಗೊಂಡ ಇವರಿಗೆ ಅಭಿನಂದನೆ ಸಲ್ಲಿಸುವುದು ಸಂತಸ ತಂದಿದೆ ಎಂದರು.
ರೈತ ಸಂಘದವತಿಯಿAದ ಸೋಮವಾರ ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಸುಮಾರು 2 ಸಾವಿರ ರೈತ ಕಾರ್ಯಕರ್ತರು ಸೇರಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಇನ್ನೂ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಕೃಷ್ಣಮೂರ್ತಿ, ಭಾಷಾ, ಸೇರಿತದಂತೆ ಇತರರಿದ್ದರು.

About The Author

Namma Challakere Local News
error: Content is protected !!