16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬೃಹತ್ ಶಾಮಿಯಾನ ಹಾಕುತ್ತಿರುವುದು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಪಟ್ಟಣದ ಹಟ್ಟಿ ಮಲ್ಲಪ್ಪ ನಾಯಕ ವೃತ್ತವನ್ನು ಹಳದಿ ಕೆಂಪು ಬಣ್ಣಗಳಿಂದ ಅಲಂಕಾರ ಮಾಡಿರುವುದು.

16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಚಳ್ಳಕೆರೆ : 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ನಾಯಕನಹಟ್ಟಿ ಪಟ್ಟಣದಲ್ಲಿ ಜ.21 ಮತ್ತು 22ರಂದು ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆಗಳು ಬರದಿಂದ ಸಾಗಿದೆ.
ನಾಯಕನಹಟ್ಟಿ ಪಟ್ಟಣವು ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ತುಂಬಾ ಮಹತ್ವ ಪಡೆದಿದೆ. ಸಮ್ಮೇಳನಕ್ಕಾಗಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.
ಯಶಸ್ಸು ಕಂಡಿದ್ದ ತಾಲೂಕು ಸಮ್ಮೇಳನ
ನಾಯಕನಹಟ್ಟಿ ಪಟ್ಟಣದಲ್ಲಿ 2003 ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಮಿರಾಸಾಬಿಹಳ್ಳಿ ಡಾ.ಪಿ.ಬಿ.ಶಿವಣ್ಣ ಅವರು ವಹಿಸಿದ್ದರು. ಅದೇ ಮೊದಲ ಬಾರಿಗೆ ನಾಯಕನಹಟ್ಟಿಯಲ್ಲಿ ಕನ್ನಡ ಸಾಹಿತ್ಯದ ಗೀಳು ಹತ್ತಿತು. ಅಂದಿನಿAದ ನಾಯಕನಹಟ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಲೆ ಸಾಗಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೋಬಳಿ ಮಟ್ಟದಲ್ಲಿ ಅತಿ ಹೆಚ್ಚು ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಇರುವ 2ನೇ ಹೋಬಳಿಯಾಗಿ ನಾಯಕನಹಟ್ಟಿ ಪ್ರಸಿದ್ಧಿ ಪಡೆಯಿತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿಯೂ ನಾಯಕನಹಟ್ಟಿಯು ನಿರ್ಣಾಯಕ ಪಾತ್ರವಹಿಸಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರ ಸ್ವಂತ ಗ್ರಾಮ ನಾಯಕನಹಟ್ಟಿಯಾಗಿದ್ದು, ಚುನಾವಣೆಯ ಪೂರ್ವದಲ್ಲಿ ಹೋಬಳಿ ಮಟ್ಟದಲ್ಲಿ ಜಿಲ್ಲಾ ಸಮ್ಮೇಳನವನ್ನು ನಡೆಸಲು ಆಸ್ವಾಸನೆ ನೀಡಿದ್ದರು. ಅದರಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಯಕನಹಟ್ಟಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹಿಂದೆ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ಯಶಸ್ಸು ಸಾಧಿಸಿತ್ತು. ಅದೇ ಹಿನ್ನೆಲೆಯಲ್ಲಿ 19ವರ್ಷಗಳ ನಂತರ ನಾಯಕನಹಟ್ಟಿ ಪಟ್ಟಣದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸುವ ಮೂಲಕ ಅರ್ಥಗರ್ಭಿತ ಹಾಗೂ ಅದ್ದೂರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ರಥವನ್ನು ಎಳೆಯುವ ಕೈಂಕರ್ಯಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ.
ಸಮ್ಮೇಳನದ ಸಿದ್ಧತೆ
ಪಟ್ಟಣದ ವಾಲ್ಮೀಕಿ ವೃತದಿಂದ ತೇರು ಬೀದಿಯ ಕಡೆಗೆ ಬೃಹತ್ ಶಾಮಿಯಾನ ಹಾಕಲಾಗಿದೆ. ಹಾಗೂ ತೇರು ಬೀದಿಯಲ್ಲಿ ಪುಸ್ತಕ ಮಳಿಗೆಗಳಿಗೆ ಸ್ಥಳಾವಕಾಶವನ್ನು ಒದಗಿಸಲಾಗಿದೆ. ಹಟ್ಟಿ ಮಲ್ಲಪ್ಪ ನಾಯಕ ವೃತ್ತ ಸೇರಿದಂತೆ ಪಟ್ಟಣದ ತುಂಬೆಲ್ಲ ಹಳದಿ ಕೆಂಪು ಬಣ್ಣದ ಬಾವುಟಗಳನ್ನು ಕಟ್ಟಲಾಗಿದೆ. ಪ್ರಧಾನ ವೇದಿಕೆ ಮತ್ತು ಪ್ರಧಾನ ರಸ್ತೆಗಳಲ್ಲಿ ಇರುವ ಎಲ್ಲಾ ರಸ್ತೆ ಬದಿಯ ವಿದ್ಯುತ್ ಕಂಬಗಳು ಹಾಗೂ ಇತರೆ ಕಂಬಗಳಿಗೂ ಕೆಂಪು ಹಳದಿ ಬಣ್ಣವನ್ನು ಬಳೆದು ಸಿಂಗಾರ ಮಾಡಲಾಗಿದೆ. ಸಮ್ಮೇಳನಕ್ಕೆ ಹಾಜರಾಗುವ ಎಲ್ಲಾ ಸಾಹಿತ್ಯಾಸಕ್ತರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಾಗೂ ಗುರುತಿಪ್ಪೇರುದ್ರಸ್ವಾಮಿ ಒಳಮಠ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನಕ್ಕೆ ಭಾಗವಹಿಸುವ ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ಒಒಡಿ ಸೌಲಭ್ಯವನ್ನು ಕಲ್ಪಿಸಿದ್ದು, ಸಮರ್ಪಕವಾಗಿ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸಮ್ಮೇಳನದ ಪ್ರಮುಖ ಆಕರ್ಷಣೆಯಾದ ಸಮ್ಮೇಳನ ಅಧ್ಯಕ್ಷರ ಮೆರವಣಿಯು ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಆರಂಭವಾಗಿ ತೇರುಬೀದಿ, ಒಳಮಠ, ನಾಗರಕಟ್ಟೆ, ಅಂಬೇಡ್ಕರ್ ವೃತ್ತದ ಮೂಳಕ ದಾವಣಗೆರೆ-ಚಳ್ಳಕೆರೆ ರಸ್ತೆಯ ಮಾರ್ಗದಲ್ಲಿ ಸಾಗಿ ವಾಲ್ಮೀಕಿ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ. ಹಾಗಾಗಿ ಆ ಮಾರ್ಗವನ್ನು ಹಸಿರು ತೋರಣ ಮತ್ತು ಬಾಳೆಕಂದುಗಳಿAದ ಸಿಂಗಾರ ಮಾಡಲಾಗುವುದು.
ಗೋಷ್ಟಿಗಳೇ ಪ್ರಮುಖ ಆಕರ್ಷಣೆ
16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಟಿಗಳೇ ಆಕರ್ಷಣೆಯಾಗಿವೆ. ಶನಿವಾರ ಬೆಳಿಗ್ಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಂತರ ಸಮ್ಮೇಳನಾಧ್ಯಕಣ್ಣೆ ಬಿ.ತಿಪ್ಪಣ್ಣ ಮರಿಕುಂಟೆಯವರ ಭಾಷಣ, ನಂತರ ಗಣ್ಯವ್ಯಕ್ತಿಗಳು, ಮುಖ್ಯಅಥಿತಿಗಳ ಭಾಷಣ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನದಲ್ಲಿ ಚಿತ್ರದುರ್ಗ ಜಿಲ್ಲೆ ಸಾಹಿತ್ಯ ಮತ್ತು ಸಂಶೋಧನೆಯ ಅಸ್ಮಿತೆ, ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಳು, ಸಮಸ್ಯೆಗಳು ಮತ್ತು ಸವಾಲುಗಳು, ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಪ್ರಾತಿನಿಧಿಕತೆ, ಚಿತ್ರದುರ್ಗ ಜಿಲ್ಲೆ ಜಾನಪದ ಸಂಸ್ಕೃತಿಯ ಅನನ್ಯತೆ, ಕವಿಗೋಷ್ಟಿ ಹೀಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅದರಲ್ಲಿ ಶನಿವಾರ ಮಧ್ಯಾಹ್ನ 2ರಿಂದ ನಡೆಯುವ ಭದ್ರಾಮೇಲ್ದಂಡೆ ಯೋಜನೆಯ ಅನುಷ್ಠಾನ ಮತ್ತು ಭವಿಷ್ಯದ ಪಥ ಎಂಬ ಪ್ರಚಲಿತ ವಿದ್ಯಾಮಾನ ಕುರಿತ ಗೋಷ್ಟಿಯು ಆಕರ್ಷಕವಾಗಿದ್ದು, ಕುತೂಹಲವನ್ನು ಮೂಡಿಸಿದೆ. ಈ ಗೋಷ್ಟಿಯಲ್ಲಿ ಭದ್ರಾಮೇಲ್ದಂಡೆ ಯೋಜನೆಯ ನಿವೃತ್ತ ಮುಖ್ಯ ಎಂಜಿನಿಯರ್ ಚಲುವರಾಜು ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಂಸದ ಪಿ.ಕೋದಂಡರಾಮಯ್ಯನವರು ವಹಿಸಲಿದ್ದಾರೆ.
ಹೀಗೆ 16ನೇ ಜಿಲ್ಲಾ ಕನ್ನಡವು ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ಮತ್ತು ಅರ್ಥಗರ್ಭೀತವಾಗಿ ನಡೆಸಲು ಭರದ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.

About The Author

Namma Challakere Local News
error: Content is protected !!