ಚಳ್ಳಕೆರೆ (ಕರ್ನಾಟಕ ವಾರ್ತೆ)ಜ.11: ಚಳ್ಳಕೆರೆ ನಗರಸಭೆಯಲ್ಲಿ ಇಂಜಿನಿಯರಿAಗ್ ಶಾಖೆ, ಕಂದಾಯ ಶಾಖೆ, ಅರೋಗ್ಯ ಶಾಖೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ.
ಸಿವಿಲ್ ಇಂಜಿನಿಯರ್ ಇಂಟರ್ನ್ ಒಂದು ಹುದ್ದೆಗೆ ಡಿಪ್ಲೋಮೋ, ಬಿ.ಇ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು, ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಇಂಟರ್ನ್ ಒಂದು ಹುದ್ದೆಗೆ, ಡಿಪ್ಲೋಮೋ ಬಿ.ಎಸ್.ಸಿ, ಎಂಎಸ್‌ಸಿ, ಬಿ.ಇ ವಿದ್ಯಾರ್ಹತೆ ಹೊಂದಿರುವವರು, ಡಾಟಾ ಅನಾಲಿಸ್ಟ್ ಇಂಡರ್ನ್ ಒಂದು ಹುದ್ದೆಗೆ ಬಿ.ಎಸ್.ಸಿ.ಬಿ.ಸಿ.ಎ,ಬಿಇ ವಿದ್ಯಾರ್ಹತೆ ಹೊಂದಿರುವವರು ಹಾಗೂ ಸರ್ಕಾರಿ ಯೋಜನೆಗಳ ನಿರ್ವಹಣೆ ಇಂಟರ್ನ್ ಒಂದು ಹುದ್ದೆಗೆ ಬಿ.ಎ, ಬಿ.ಎಸ್.ಸಿ, ಬಿ.ಎಂ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ತಾತ್ಕಾಲಿಕವಾಗಿ ಕೆಲಸ ಕಲಿಯಲು ಆಸಕ್ತಿಯುಳ್ಳವರು ಜನವರಿ 19ರಒಳಗೆ
https://internship.aicte-indai.org/moduleulb/Dashboard/tulipmain/2363
ಮೂಲಕ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಯೊಂದಿಗೆ ಕಛೇರಿಗೆ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ
ರೂ.7000/-ಗೌರವಧನ ಮತ್ತು ಕಛೇರಿಯಿಂದ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ನಗರಸಭೆ ಪೌರಯುಕ್ತರು ತಿಳಿಸಿದ್ದಾರೆ.