ಚಳ್ಳಕೆರೆ : ಮಕರ ಸಂಕ್ರಾAತಿ ಹಬ್ಬವಾಗಿ ಶಾಲೆಯಿಂದ ಮಾಡುತ್ತಿರುವ ಕಾರ್ಯಕ್ರಮ ತುಂಬಾ ಅದ್ಭುತವಾಗಿದೆ ಇಂತಹ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ಹಾಗೂ ಗೃಹಿಣಿಯರು ಮಕ್ಕಳ ಪೋಷಕರು ಹೆಚ್ಚಿನದಾಗಿ ಭಾಗವಹಿಸಬೇಕು ಎಂದು ಗ್ರೇಡ್2 ತಹಶಿಲ್ದಾರ್ ಸಂಧ್ಯಾ ಹೇಳಿದ್ದಾರೆ.
ಅವರು ನಗರದ ಈ ಕಿಡ್ಸ್ ಶಾಲೆಯಲ್ಲಿ ಆಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗಹಿಸಿ ಮಾತನಾಡಿದರು, ರಂಗೋಲಿ ಹಾಕುವುದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಮರೆತೇ ಬಿಟ್ಟಿದ್ದಾರೆ, ರಂಗೋಲಿ ಹಾಕುವುದು ಒಂದು ಕಲೆ ನಮ್ಮ ಹಿಂದಿನ ಪೂರ್ವಜ ಹೆಣ್ಣು ಮಕ್ಕಳು ಮನೆಯ ಮುಂದೆ ಸಗಣಿ ಸಾರಿಸಿ ರಂಗೋಲಿ ಹಾಕುತಿದ್ದರು, ಅದರಲ್ಲಿ ವೈಜ್ಞಾನಿಕ ಅಂಶವಿತ್ತು, ಆಯುರ್ವೇದ ಗುಣಗಳಿತ್ತು ಸಗಣಿ ಸಾರಿಸುವುದು ಅದರಲ್ಲಿ ಆಯುರ್ವೇದ ಅಂಶವನ್ನು ನಾವು ಹಿಂದಿಗೂ ಕಾಣಬಹುದು ಎಂದರು.
ಚುನಾವಣೆ ಶಿರಸ್ತೆದಾರ್ ಶಕುಂತಲಾ ಮಾತನಾಡಿ, ಮಕ್ಕಳಲ್ಲಿ ನಮ್ಮ ಧಾರ್ಮಿಕ ಸಂಪ್ರಾದಾಯಗಳನ್ನು ಮನನ ಮಾಡುವ ಮುಲಕ ಹಿಂದಿನ ಕಾಲದಿಂದಲೂ ರೂಡಿಸಿಕೊಂಡು ಬಂದ ಹಬ್ಬ ಜಾತ್ರೆಗಳಿಗೆ ನಾವು ಪುಷ್ಠಿ ನೀಡಬೇಕು ಅದರಂತೆ ಮುಂಬುರವ ಮಕರ ಸಂಕ್ರಾತಿ ಹಬ್ಬ ಮಹಿಳೆಯರ ಹಬ್ಬವೆಂದೆ ಕರೆಯುತ್ತಾರೆ, ಮನೆ ಮುಂದೆ ರಂಗೋಲಿ ಚಿತ್ರ ಬಿಡಿಸುವುದೋ ಒಂದು ಸೋಜಿಗ ಉತ್ತಮವಾದ ಚಿತ್ರ ಬಿಂಬಿಸಿ ರಂಗೋಲಿಯಿAದ ಲಕ್ಷ್ಮಿ ಮನೆಗೆ ಬರುತ್ತಾಳೆ ಒಂದು ನಂಬಿಕೆ, ಈಗಲೂ ಸಹ ಹಳ್ಳಿಗಳಲ್ಲಿ ನಾವು ನೋಡಬಹುದು ಎಂದರು.

ಈ ಸಂದರ್ಭದಲ್ಲಿ ಈ ಕಿಡ್ಸ್ ಶಾಲೆಯ ಕಾರ್ಯದರ್ಶಿಯಾದ ಶಶಿಕುಮಾರ್ ಜೆ ಸಿ, ವೈ.ಕಾಂತರಾಜ್, ಓಬಳೇಶ, ಶಾಲೆಯ ಮುಖ್ಯ ಶಿಕ್ಷಕರಾದ ಮಮತಾ ಬಿ, ರಮ್ಯಾ ಬಿ.ಸ್ಪೂರ್ತಿ, ಯಶೋದಮ್ಮ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!