ಚಳ್ಳಕೆರೆ : ಕಛೇರಿಯ ಸೀಟಿಗೆ ಅಧಿಕಾರಿಗಳು ಸೀಮಿತವಾಗದೆ ಸಾರ್ವಜನಿಕರ ಸೇವೆಗೆ ಮುಂದಾಗಿ, ಪ್ರಗತಿ ಪರೀಶಿಲನೆಗೆ ಮಾಹಿತಿ ಸಹಿತಿ ಹಾಜರಾಗಿ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿವಾರದ ಅಧಿಕಾರಿಗಳ ಪ್ರಗತಿ ಪರೀಶಿಲನ ವರದಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಳ್ಳಕೆರೆ ಕ್ಷೇತ್ರದ ಇಪ್ಪತ್ತು ಗ್ರಾಮ ಪಂಚಾಯತಿಗಳಲ್ಲಿ ಸ್ಮಶಾನ ಹಾಗೂ ನಿವೇಶನ ರಹಿತರ ಪಟ್ಟಿ ತಯಾರಿಸಿ ಕಾರ್ಯಗತಗೊಳಿಸಿ, ಮಾರ್ಚ್ ಒಳಗೆ ನಿವೇಶನ ರಹಿತರ ಮಾಹಿತಿ ನೀಡಿ ಇಲ್ಲವಾದರೆ ನಮ್ಮ ಕ್ಷೇತ್ರಕ್ಕೆ ನಿಗಧಿ ಪಡಿಸುವ ವಸತಿಗಳು ಏರುಪೇರುರಾಗುತ್ತಿವೆ, ಆದ್ದರಿಂದ ಪ್ರತಿ ಗ್ರಾಮದಲ್ಲಿ ಸ್ಮಶಾನ ಹಾಗೂ ನಿವೇಶನ ರಹಿತರ ಪಟ್ಟಿ ತಯಾರಿಸಿ ಅತೀ ಶೀಘ್ರದಲ್ಲಿ ವರದಿ ಸಲ್ಲಿಸಿ ಎಂದರು.
ಚೌಳೂರು ಗ್ರಾಮ ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನ ಹಾಗೂ ನಿವೇಶನಕ್ಕೆ ಭೂಮಿಯ ಕೊರತೆಯಿದೆ. ಗ್ರಾಮದ ಇಪ್ಪತ್ತು ಜನರಿಗೆ ಭೂಮಿ ಮಂಜೂರಾತಿ ಯಾಗಿ ಪಹಣಿಗಳ ಬಂದಿವೆ ಆದರೆ ರೈತರು ಮಂಜೂರಾದ ಭೂಮಿಗಿಂತ ಹೆಚ್ಚಾಗಿ ಅನುಭವರಲ್ಲಿ ಇರುವುದರಿಂದ ಭೂಮಿಯ ಕೊರತೆಯಿದೆ ಎಂದು ಸರ್ವೆ ಅಧಿಕಾರಿ ಪ್ರಸನ್ನ ಸಭೆಗೆ ಮಾಹಿತಿ ನೀಡಿದರು,
ಕೂಡಲೇ ತಹಶೀಲ್ದಾರ್ ಸಮ್ಮುಖದಲ್ಲಿ ಹೆಚ್ಚಿನ ಭೂಮಿ ಉಳುಮೆ ಮಾಡುವವರನ್ನು ಮನವೊಲಿಸಿ ತೆರುವುಗೊಳಿಸಿ ಸ್ಮಶಾನ ಜಾಗ ಅಭಿವೃದ್ದಿಪಡಿಸಿ ಎಂದು ಶಾಸಕರು ಹೇಳಿದರು.
ತಾಲೂಕಿನ ಜುಂಜರುಗುAಟೆ ಗ್ರಾಮದಲ್ಲಿ ಅನುಭವ ಉತ್ತರಕ್ಕೆ, ಸರಕಾರ ಮಂಜುರಾತಿ ದಕ್ಷಿಣಕ್ಕೆ ಇದೆ ಇದರಿಂದ ಭೂಮಿಯ ಕೊರತೆ ತುಂಬಾ ಇದೆ ಎಂದರು.
ಕ್ಯಾತಪ್ಪನ್ನ ಜಾತ್ರೆಗೆ ಜಾಗ ಮಂಜೂರಾತಿ ಮಾಡಬೇಡಿ ಎಂದು ನಾವು ಎಲ್ಲೂ ಹೇಳಿಲ್ಲ ಆದರೆ ಕೆಲವರು ಮಾತ್ರ ಅಪಪ್ರಚಾರ ಮಾಡುತ್ತಿದ್ದಾರೆ, ನಮಗೂ ಕೂಡ ದೇವರ ಬಗ್ಗೆ ಭಕ್ತಿ, ಗೌರವ ಇದೆ ಆದರೆ ಸುಖ ಸುಮ್ಮನೆ ರಾಜಾಕೀಯ ಬೆರೆಸಿ ಶಾಸಕರ ಹೆಸರು ತಳಕು ಹಾಕುವಂತೆ ಕೆಲವರು ಮಾಡುತ್ತಿದ್ದಾರೆ, ಆದ್ದರಿಂದ ಅಧಿಕಾರಿಗಳು ಇಂತಹ ಪ್ರಕರಣಗಳಿಗೆ ಕಿವಿಗೊಡದೆ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನಲ್ಲಿ ಪೌತಿಖಾತೆ, ಹಾಗೂ ಸಾರ್ವಜನಿಕರ ಕೆಲಸ ಮಾಡಿರುವುದು ಗ್ರಾಮ ವಾಸ್ತವ್ಯ ಮಾಡಿರುವ ಗ್ರಾಮಗಳ ವರದಿ ಕೊಡಿ, ನಗರಸಭೆ ರೀತಿಯಲ್ಲಿ ಪ್ರತಿವಾರ ನಿಮ್ಮ ತಾಲೂಕು ಕಛೇರಿಯಲ್ಲಿ ಪ್ರಗತಿ ಪರೀಶೀಲನೆ ಸಭೆ ಮಾಡುತ್ತೆವೆ ಎಂದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ಸಂಧ್ಯಾ, ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ, ತಾಪಂ.ಸಹಾಯಕ ನಿದೇರ್ಶಕ ಸಂತೋಷ ಕುಮಾರ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!