ನ.22 ರಂದು ಚಳ್ಳಕೆರೆಗೆ ಮುಖ್ಯಮಂತ್ರಿ ಬೇಟಿ
ರೈಲ್ವೆ ಮೇಲ್ಸುತುವೆ ಒತ್ತಾಯಕ್ಕೆ ರೈತರಿಂದ ಧರಣಿಗೆ ಸಜ್ಜು

ಚಳ್ಳಕೆರೆ : ನಗರದಲ್ಲಿ ಹಾದುಹೊಗಿರುವ ರೈಲ್ವೆ ಮಾರ್ಗದಿಂದ ಸಾರ್ವಜನಿಕರ ಜನ ಜೀವನ ಅಸ್ತವ್ಯಸ್ತವಾಗಿದೆ, ಸರಕಾರ ಗಮನ ಹರಿಸಬೇಕು ಎಂದು ಕಳೆದ 13 ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸಿದರು ಸರಕಾರ ಗಂಭೀರವಾಗಿ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಮುಖ್ಯಮಂತ್ರಿಗೆ ಮನವಿ ನೀಡಲು ಸಜ್ಜಾಗಿದ್ದಾರೆ.
ನಗರದ ಪಾವಗಡ ರಸ್ತೆ ಸಂಚಾರಕ್ಕೆ ಅಡ್ಡ ಮಾರ್ಗವಾಗಿ ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ಚಲಿಸುವ ರೈಲ್ವೆಗಳಿಂದ ಇಲ್ಲಿ ಮೇಲ್ಸುತುವೆ ಇಲ್ಲದೆ ಇರುವುದರಿಂದ ಶಾಲಾ ಮಕ್ಕಳಿಂದ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಕೂಡ ತಾಸು ಗಟ್ಟಲೆ ರೈಲ್ವೆ ಗೇಟ್ ಬಳಿ ಕಾಯುವ ಪರಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ರೈತ ಸಂಘದ ಕೆ.ಪಿ.ಭೂತಯ್ಯ ಆರೋಪ ಮಾಡಿದ್ದಾರೆ.
ತುರ್ತಾಗಿ ರೈಲ್ವೆ ಮೇಲ್ಸುತುವೆ ನಿರ್ಮಿಸಬೇಕು ಎಂದು ಕಳೆದ 2013ರಿಂದ ಸುಮಾರು ಹತ್ತರಿಂದ ಹೈದಿನೈದು ಮನವಿ ಪತ್ರಗಳನ್ನು ಸಂಬAದಿಸಿದ ರೈಲ್ವೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೀಡಿದ್ದೆವೆ ಆದರೆ ಇದುವರೆಗೆ ಯಾವುದೇ ಪ್ರಗತಿ ಖಂಡಿಲ್ಲ ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳ ತುಂಬಾ ಸಾವು ನೋವುಗಳಿಂದ ತೊಂದರೆಗೆ ಇಡಾಗಿದ್ದಾರೆ.
ಆದ್ದರಿಂದ ಇದೇ ನ.22ರಂದು ಚಳ್ಳಕೆರೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ್‌ಬೊಮ್ಮಯಿಗೆ ಪ್ರತಿಭಟಿಸಿ ಮನವಿ ಸಲ್ಲಿಸಲು ತಾಲೂಕಿನ ವಿವಿಧ ಸಂಘಟನೆಗಳ ಹಾಗೂ ರೈತ ಸಂಘಗಳು ಸಜ್ಜು ಗೊಂಡಿವೆ ಎನ್ನಲಾಗಿದೆ.

1.ಕೆ.ಪಿ.ಭೂತಯ್ಯ
ರೈತ ಸಂಘದ ರಾಜ್ಯಉಪಾಧ್ಯಕ್ಷ

2.ಪರೀದ್ ಖಾನ್
ನೆತಾಜೀ ಸ್ನೇಹಬಳಗ ಕಾರ್ಯದರ್ಶಿ

3.ಪೂಜಾರಿ ಪರಸಪ್ಪ
ನಗರಸಭೆ ಮಾಜಿ ಸ್ಥಾಯಿ ಸಮಿತಿ ಸದಸ್ಯ

4.ಹೆಚ್.ಎಸ್.ಸೈಯದ್
ಸಾಮಾಜಿಕ ಕಾರ್ಯಕರ್ತ

5.ಚೇತನ್ ಕುಮಾರ್
ಮಾಜಿ ಅಧ್ಯಕ್ಷರು, ನಗರಸಭಾ ಸ್ಥಾಯಿ ಸಮಿತಿ

About The Author

Namma Challakere Local News
error: Content is protected !!