ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಬರಲಿ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ
ಚಳ್ಳಕೆರೆ : ಗಡಿ ಗ್ರಾಮೀಣ ಭಾಗದ ವಿದ್ಯಾರ್ಥಿ ತನ್ನ ಚಿಕ್ಕ ವಯಸ್ಸಿನಲ್ಲೇ ಹಲವು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಕ್ರೀಡಾ ಪಟುವಾಗಿ ರಾಜ್ಯಕ್ಕೆ ಕಿರ್ತಿ ತಂದಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕ್ರೀಡಾ ಪಟುವಿಗೆ ಸನ್ಮಾನ ಮಾಡಿ ನಂತರ ಮಾತನಾಡಿದ ಅವರು ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ಆಲ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿ ಇತ್ತೀಚಿಗೆ ಅ.15 &16 ರಂದು ತಮಿಳುನಾಡಿನ ಕೊಯಮತ್ತೂರ್‌ನಲ್ಲಿ ನಡೆದ 15ನೇ ರಾಷ್ಟೀಯ ಓಪನ್ ಕರಾಟೆ ಚಾಂಪಿಯನ್ ಷಿಪ್‌ನಲ್ಲಿ ಭಾಗವಹಿಸಿ 14 ವರ್ಷಗಳ ಒಳಗಿನ ಬಾಲಕರ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಹಾಗೂ ಕತಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿ ನಾಡಿಗೆ ಕೀರ್ತಿ ತಂದಿರುತ್ತಾನೆ.
ಈ ಪ್ರತಿಭೆಗೆ ಶಾಲೆಯ ಆಡಳಿತ ಮಂಡಳಿ, ಎಲ್ಲಾ ಶಿಕ್ಷಕರು ಮತ್ತು ಕರಾಟೆ ಹಾಗೂ ಕಿಕ್‌ಬಾಕ್ಸಿಂಗ್ ಕೋಚ್ ಆದಂತಹ ಕೆ.ರಂಗಸ್ವಾಮಿ, ಮುಖ್ಯ ತರಬೇತಿದಾರರು, ಬಿ.ಎಸ್.ಶಿಟೋರಿಯೂ ಕರಾಟೆ ಡೂ ಇಂಡಿಯಾ, ಇವರು ಈಹಳ್ಳಿ ಪ್ರತಿಭೆಗೆ ಮುಂದಿನ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಇದೆ ರೀತಿ ಪದಕ ಪ್ರಶಸ್ತಿ ಪಡೆದು ಗೆದ್ದು ಬರಲಿ ಎಂದು ಅಭಿನಂದಿಸಿದರು.

About The Author

Namma Challakere Local News
error: Content is protected !!