ವಿದ್ಯುತ್ ತಗಲಿ 27 ವರ್ಷದ ಯುವಕ ಸಾವು
ಮುಗಿಲುಮಟ್ಟಿದ ಕುಟುಂಬಸ್ಥರ ಆಕ್ರಂದನ
ಚಳ್ಳಕೆರೆ ತಾಲೂಕಿನ ಎನ್ ಮಹದೇವಪುರ ಗ್ರಾಮದ ಈಶ್ವರ್‌ಪ್ರಸಾದ್ ಎಂಬುವವರು ತೋಟದಲ್ಲಿ ಮೋಟಾರ್ ಸ್ಟಾರ್ಟ ಮಾಡುವ ವೇಳೆ ವಿದ್ಯುತ್ ತಗಲಿ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.
ತೋಟದಲ್ಲಿ ಇತ್ತಲಿನಲ್ಲಿ ವಿದ್ಯುತ್ ವೈರ್‌ಗಳು ಡಾಮೆಜ್ ನಿಂದ ಈ ಘಟನೆ ಜರುಗಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ
ಇನ್ನು ಘಟನೆಗೆ ಸಂಬAಧಿಸಿದAತೆ ಮಾಜಿ ಶಾಸಕ ತಿಪ್ಪೇಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸ್ವಾತಾನ ಹೇಳಿದ್ದಾರೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಮೂರು ತಿಂಗಳಿAದ ನಮ್ಮ ನಾಯಕನಹಟ್ಟಿ ವ್ಯಾಪ್ತಿಯಲ್ಲಿ ಮೂರು ಯುವಕರು ವಿದ್ಯುತ್ ತಗಲಿ ಸಾವನಪ್ಪಿದ್ದಾರೆ ಹಿರೇಹಳ್ಳಿ ವ್ಯಾಪ್ತಿಯಲ್ಲಿ , ಮಲ್ಲೂರಹಳ್ಳಿ ಗ್ರಾಮದಲ್ಲಿ 19 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಇವೆಲ್ಲವಕ್ಕೂ ನೆರಹೊಣೆ ಬೆಸ್ಕಾಂ ಇಲಾಖೆ ಎಂದು ಆರೋಪ ಮಾಡಿದ್ದಾರೆ.
ಮೃತ ದೇಹವನ್ನು ನೋಡಲು ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ.ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯ ಕೆಪಿ.ತಿಪ್ಪೇಸ್ವಾಮಿ, ಹಾಗೂ ಕನ್ನಯ್ಯ, ಬಡಿಗಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಗುಂಡಯ್ಯ, ಡಿ ತಿಪ್ಪೇಸ್ವಾಮಿ, ಓಬಳೇಶ್ ದಾಸರ ಮುತ್ತೈನಹಳ್ಳಿ, ತಿಪ್ಪೇಸ್ವಾಮಿ, ಇತರರು ಕಂಬಿನಿ ಮಿಡಿದ್ದಾರೆ.