ಚಳ್ಳಕೆರೆ: ಬೆಳೆ ವಿಮೆಯಲ್ಲಿ ಅವ್ಯವಹಾರ ಕ್ರಮಕ್ಕೆ
ಆಗ್ರಹ
ಚಳ್ಳಕೆರೆ ತಾಲೂಕಿನಾದ್ಯಂತ ರೈತರು ಬೆಳೆ ವಿಮೆಯನ್ನು ಕಟ್ಟಿದ್ದು,
ಅದರಲ್ಲಿ ಅವ್ಯವಹಾರವಾಗಿದ್ದು, ಜಿಲ್ಲಾಧಿಕಾರಿಗಳು ವರದಿಯನ್ನು
ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಬರೆದಿದ್ದು,
ಕ್ರಮವನ್ನು ತೆಗೆದುಕೊಂಡಿಲ್ಲ.
ಇತ್ತ ಬೆಳೆ ವಿಮೆಯ ಹಣವೂ
ವಾಪಾಸ್ಸು ಬಂದಿಲ್ಲ. ಇದರಿಂದ ಕೂಡಲೇ ಸರ್ಕಾರ ತಪ್ಪಿತಸ್ಥರ
ವಿರುದ್ಧ ಕ್ರಮ ತೆಗೆದುಕೊಂಡು ರೈತರಿಗಾದ ಅನ್ಯಾಯವನ್ನು
ಸರಿಪಡಿಸಬೇಕೆಂದು ರೈತ ಮುಖಂಡ ಲಕ್ಷ ಕಾಂತ್
ಒತ್ತಾಯಿಸಿದ್ದಾರೆ.