ರಾಮದುರ್ಗ ಗ್ರಾಮಸ್ಥರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಅಗಸ್ಟ್ 7. ಗ್ರಾಮದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರೆ.

ಬುಧವಾರ ನಲಗೇತನಹಟ್ಟಿ ಗ್ರಾ.ಪಂ ವ್ಯಾಪ್ತಿಯ ರಾಮದುರ್ಗ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 2021- 22ನೇ ಸಾಲಿನ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ.
₹ 20.38. ಲಕ್ಷ ವೆಚ್ಚದ.
2- ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಗ್ರಾಮದ ಪ್ರತಿಯೊಬ್ಬ ಪೋಷಕರು ಬಡತನ ಎಂದು ನೆಪ ಹೇಳಿ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಬಡತನ ಮೀರಿದ ಬದುಕನ್ನು ಕಟ್ಟಿಕೊಳ್ಳಲು ಉತ್ತಮ ಶಿಕ್ಷಣವನ್ನು ಕೊಡಿಸಿ
ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸಿಸ್ತು ಮತ್ತು ಸಂಸ್ಕಾರವನ್ನು ಕಲಿಸಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಎಂದು ಗ್ರಾಮಸ್ಥರಲ್ಲಿ ಮನವಿಯನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡ ನೇರಲಗುಂಟೆ ಸೂರನಾಯಕ , ಪ್ರಭುಸ್ವಾಮಿ, ಬಂಡೆ ಕಪಿಲೆ ಓಬಣ್ಣ, ಚೌಳಕೆರೆ ಸಿ.ಬಿ ಮೋಹನ್, ಬಗರ್ ಹುಕಂ ಕಮಿಟಿ ಸದಸ್ಯ ಪಿ.ಜಿ ಬೋರನಾಯಕ, ಜಿ.ಬಿ ಮುದಿಯಪ್ಪ, ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಉಪಾಧ್ಯಕ್ಷ ಈಗಲ ಬೋರಯ್ಯ,
ಸದಸ್ಯರಾದ ಪಿ.ಎನ್ ಮುತ್ತಯ್ಯ, ಬಂಗಾರಪ್ಪ, ಗೌಡ್ರು ಬೋರಯ್ಯ, ಕೆ.ಬಿ. ಬೋಸಯ್ಯ ದ್ರಾಕ್ಷಾಯಿಣಿ ಚಿದಾನಂದ,

ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ರೇಖಲಗೆರೆ ಅಶೋಕ್, ಜೋಗಿಹಟ್ಟಿ ಎಚ್ ಬಿ.ತಿಪ್ಪೇಸ್ವಾಮಿ, ನಾಯಕನಹಟ್ಟಿ ಓಬಳೇಶ್,

ನಲಗೇತನಹಟ್ಟಿ ಗ್ರಾಮಸ್ಥರಾದ ಜಿ.ಸಿ ಗೌಡ್ರು ಬೋರಯ್ಯ, ನಿಂಗರಾಜ್, ಎಸ್ ಜಿ ಸಣ್ಣ ಬೋರಯ್ಯ, ಎಂ. ಬಿ. ಸಣ್ಣ ಬೋರಯ್ಯ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ಪಿಡಿಓ ರಾಜಣ್ಣ, ಕಾರ್ಯದರ್ಶಿ ಕೆಂಚಪ್ಪ, ರಾಮದುರ್ಗ ಹಾಗೂ ನಲಗೇತನಹಟ್ಟಿ ಸಮಸ್ತ ಊರಿನ ಗ್ರಾಮಸ್ಥರಿದ್ದರು

About The Author

Namma Challakere Local News
error: Content is protected !!