ಚಳ್ಳಕೆರೆ :
ತಾಲ್ಲೂಕಿನಾದ್ಯಂತ ಡೆಂಘೀ ಜ್ವರ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಇಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಶಶಿಧರ್ ರವರ ಅಧ್ಯಕ್ಷತೆಯಲ್ಲಿ , ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಕರವಸೂಲಿಗಾರರ ಸಭೆ ಏರ್ಪಡಿಸಲಾಗಿತ್ತು.
ರಾಜ್ಯಾದ್ಯಂತ ಡೆಂಘೀ ಜ್ವರ ಹೆಚ್ಚಾಗುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ರಮವಹಿಸಬೇಕಾದ ಜವಾಬ್ದಾರಿ ಗ್ರಾಮ ಪಂಚಾಯತ್ ಗಳದ್ದಾಗಿರುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ಮನೆಗಳ ಸುತ್ತಮುತ್ತ ಟೈರ್ ಗಳು, ತೆಂಗಿನ ಚಿಪ್ಪುಗಳು, ಹಾಳಾದ ಮಡಕೆಗಳು, ಒಡೆದ ಕೊಡ-ಬಕೆಟ್ ಗಳು ಇದ್ದಲ್ಲಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುವುದರಿಂದ ಅಂತಹ ಸಂದರ್ಭಗಳನ್ನು ತಪ್ಪಿಸಬೇಕು.
ಡೆಂಘೀ ಜ್ವರ ಬಂದಾಗ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಆರೋಗ್ಯವಂತರು ಚೇತರಿಸಿಕೊಳ್ಳುತ್ತಾರೆ, ವಯಸ್ಸಾದವರು, ಮಕ್ಕಳು ಮೃತ್ಯುವಿಗೀಡಾಗುವ ಸಂಭವವೂ ಇರುತ್ತದೆ. ನಿರ್ದಿಷ್ಟ ಔಷಧಿಯಿಲ್ಲದ ಕಾರಣ ಮುನ್ನೆಚ್ಚರಿಕೆಯೇ ಪರಿಣಾಮಕಾರಿ ಎಂದು ತಿಳಿಸಿದರು.
ಆಶಾ ಕಾರ್ಯಕರ್ತರ ನೆರವಿನಿಂದ ಲಾರ್ವ ಸಮೀಕ್ಷೆ ಮಾಡುವುದೂ ಸೇರಿದಂತೆ ನೀರಿನ ಟ್ಯಾಂಕ್, ತೊಟ್ಟಿ, ಚರಂಡಿಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಸ್ವಚ್ಚ ವಾಹಿನಿಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು.