ಚಳ್ಳಕೆರೆ :
ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ
ಪ್ರವೇಶ ನೀಡಲಾಗುತ್ತದೆ
ಚಿತ್ರದುರ್ಗದ ಸರ್ಕಾರಿ ಜಿಟಿಟಿಸಿ ಕಾಲೇಜಿನಲ್ಲಿ ಮೊದಲು
ಬಂದವರಿಗೆ ಮೊದಲ ಆದ್ಯತೆ ನೀಡಿ, ಮೊದಲ ವರ್ಷದ
ತಂತ್ರಜ್ಞಾನದ ತರಗತಿಗಳಿಗೆ ಪ್ರವೇಶ ಕೊಡಲಾಗುತ್ತದೆ
ಎಂದು ಕಾಲೇಜಿನ ಆಡಳಿತಾಧಿಕಾರಿಗಳಾದ ಕೆಪಿ ಕಾಳೇಗೌಡ
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು. ಪರೀಕ್ಷಾ ಪ್ರಾಧಿಕಾರ ನಮಗೆ ಮೇಲಿನಂತೆ
ಅವಕಾಶ ನೀಡಿದೆ ಅದರಂತೆ ನಾವು ಪ್ರವೇಶ ಕೊಡುತ್ತಿದ್ದೇವೆ.
ಆದ್ದರಿಂದ ಇಂತಹ ಅವಕಾಶವನ್ನು ವಿದ್ಯಾರ್ಥಿಗಳು
ಸದುಪಯೋಗಪಡಿದಿಕೊಳ್ಳಬೇಕೆಂದು ಹೇಳಿದರು.