ಚಳ್ಳಕೆರೆ ನ್ಯೂಸ್ : ಬರನಾಡಿನಲ್ಲಿ ಯುವಕರು ಜೀವನ ಕಟ್ಟಿಕೊಳ್ಳÀಲು ಜಿಟಿಟಿಸಿ ಕೇಂದ್ರ ವರದಾನವಾಗಿದೆ ಕೇವಲ ಮೂರು ವರ್ಷ ಅವಧಿಯಲ್ಲಿ ತರಬೇತಿ ಪಡೆದರೆ ಉತ್ತಮವಾದ ಕಂಪನಿಯಲ್ಲಿ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬಹುದು ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.


ಅವರು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಸರ್ಕಾರಿ ಉಪಕರಣಗಾರ ಮತ್ತು ತರಭೇತಿ ಕೇಂದ್ರದ ಮೊದಲನೇ ವರ್ಷದ ಪ್ರಾರಂಭೋತ್ಸವ ಹಾಗೂ ಅಂತಿಮ ವರ್ಷದ ತರಬೇತಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಕ್ಯಾಂಪಸ್‌ನಲ್ಲಿ ನಿಯೋಜನೆಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಪ್ರಮಾಣ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು.
ನಮ್ಮ ಕಾಂಗ್ರೇಸ್ ಪಕ್ಷದ ನೇತೃತ್ವದ ಸರಕಾರದ ಅವಧಿಯಲ್ಲಿ ಚಳ್ಳಕೆರೆ ನಗರಕ್ಕೆ ಜಿಟಿಟಿಸಿ ಕೇಂದ್ರ ಮಂಜೂರಾಗಿ ಬಂದು ಇಲ್ಲಿಗೆ ಮೂರು ವರ್ಷ ತುಂಬಿದೆ. ಇಂದು ಸು.68 ವಿದ್ಯಾರ್ಥಿಗಳು ತರಬೇತಿ ಪಡೆದು ಉದ್ಯೋಗಕ್ಕಾಗಿ ಕಂಪನಿಗಳಿಗೆ ತೆರಳುತ್ತಿರುವುದು ಸಂತಸಕರ ವಿಷಯ, ಇನ್ನೂ ಪ್ರಸ್ತುತ ವರ್ಷದಲ್ಲಿ ನಾಲ್ಕು ಕೋರ್ಸ್ಗಳು ಲಭ್ಯವಿದ್ದು ಸುಮಾರು 240 ವಿದ್ಯಾರ್ಥಿಗಳು ಏಕಕಾಲಕ್ಕೆ ತರಬೇತಿ ಪಡೆದು ತೆರ್ಗಡೆಯಾಗಬಹುದು, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ದೊರಕಿಸಕೊಡಲಾಗುವುದು, ಒಟ್ಟಾರೆ ಬಯಲು ಸೀಮೆಯ ಯುವಕರು ನಿರುದ್ಯೋಗಿಗಳಾಗಿ ಇರದೆ ಉದ್ಯೋಗದಲ್ಲಿ ತೊಡಗಿ ಜೀವನ ಕಟ್ಟಿಕೊಳ್ಳಲು ವರದಾನವಾಗಿದೆ.


ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ಪಡೆದು ದೂರದ ಕಂಪನಿಗಳಲ್ಲಿ ಸಂಬಳಕ್ಕಾಗಿ ದುಡಿಯುವುದನ್ನು ತಪ್ಪಿಸಲು ಅವರಿಗೆ ಸಣ್ಣ ಕೈಗಾರಿಕೆಗಳ ಯೋಜನೆಯಲ್ಲಿ ಮಾಲೀಕರನ್ನಾಗಿ ಮಾಡಲು ಈಗಾಗಲೇ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಕಾವಲ್‌ನಲ್ಲಿ ಹಾಗೂ ಕುದಾಪುರದ ಬಳಿಯಲ್ಲಿ ಸಣ್ಣ ಕೈಗಾರಿಕಗಳ ಸಹಯೊಗದೊಂದಿಗೆ ಶೆಡ್ಡ್ಗಳ ನಿರ್ಮಾಣ ಮಾಡಲಾಗಿದೆ, ಇವುಗಳನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಶೇ.90 ರಷ್ಟು ಸಹಾಯದನಲ್ಲಿ ಶೇಡ್ಡ ನೀಡಲಾಗುವುದ ಸಂಬಳಕ್ಕೆ ಇರುವುದು ಬೇಡ ಮಾಲೀಕತ್ವದ ಮೂಲಕ ಉದ್ಯೋಗ ಸೃಷ್ಟಿಸಿಕೊಂಡು ಬ್ರಾö್ಯಂಡ್ ಚಳ್ಳಕೆರೆ ಮಾಡಬಹುದು ಎಂದರು.


ಪೋಷಕರಾದ ಮಂಜುನಾಥ್ ಮಾತನಾಡಿ, ಸ್ಥಳಿಯವಾಗಿ ತರಬೇತಿ ಪಡೆದು ಎಲ್ಲೋ ಇರುವ ದೂರದ ಕಂಪನಿಗಳಿಗೆ ಸಂಬಳಕ್ಕಾಗಿ ವಲಸೆ ಹೋಗುವ ಬದಲು ಸ್ಥಳೀಯವಾಗಿ ಶೇಡ್ ನಿರ್ಮಿಸಿದರೆ, ಸ್ವತಃಕ್ಕೆ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಾಡಿ ಸ್ಥಳೀಯವಾಗಿ ಮೇಡ್ ಇನ್ ಚಳ್ಳಕೆರೆ ಮಾಡಲು ಚಳ್ಳಕೆರೆ ಹುಡುಗರು ಕಡಿಮೆ ಇಲ್ಲ. ಇನ್ನೂ ಡಿಆರ್‌ಡಿಓಗೆ ಅಗತ್ಯವಾದ ಉಪಕರಣಗಳನ್ನು ಇಲ್ಲಿಯೇ ತಯಾರು ಮಾಡಲು ಅವಕಾಶ ಕಲ್ಪಿಸಿದರೆ ಉದ್ಯೋಗ ಸೃಷ್ಠಿಯಾಗುವುದು ಎಂದರು.

ಈದೇ ಸಂದರ್ಭದಲ್ಲಿ ಜಿಲ್ಲಾ ಜಂಟಿನಿರ್ದೇಶಕ ಆನಂದ, ಪ್ರಾಂಶುಪಾಲರಾದ ತಿಪ್ಪೆಸ್ವಾಮಿ, ಉಪನ್ಯಾಸಕ ಅಮೇರೇಶ್, ನಗರಸಭೆ ಸದಸ್ಯರಾದ ರಮೇಶ್‌ಗೌಡ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನಕುಮಾರ್, ಭದ್ರಿ, ಹಾಗು ಮುಖಂಡರು, ಕಾರ್ಯಕರ್ತರು ಹಾಗೂ ಶಿಕ್ಷಣ ತರಭೇತಿ ಕೇಂದ್ರದ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಾನು ಕೂಡ ಇಂಜಿನಿಯರಿAಗ್ ವಿದ್ಯಾರ್ಥಿ ನಾನು ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ಸ್ಥಾನ ಪಡೆದಿದ್ದೆ ಆದ್ದರಿಂದ ನೀವು ಕೂಡ ಇಂತಹ ಸ್ಥಳೀಯವಾಗಿ ವ್ಯವಸ್ಥೆ ಕಲ್ಪಿಸಿದೆ ಉತ್ತಮವಾದ ಪರಿಸರವಿದೆ ಶ್ರಮಪಟ್ಟು ತರಬೇತಿ ಪಡೆದರೆ ಮುಂದಿನ ಜೀವನ ಸುಖಕರವಾಗಿರುತ್ತದೆ, ಒಂದು ವರ್ಷದ ನಾಲ್ಕು ಬ್ಯಾಚ್ 240 ವಿದ್ಯಾರ್ಥಿಗಳು ದಾಖಲೆ ಹಾಗುತ್ತಿದ್ದಾರೆ, ಈ ತರಬೇತಿಯಲ್ಲಿ ನೈಪುಣ್ಯತೆಯ ಮೂಲಕ ವ್ಯಾಸಂಗ, ಪರಿಶ್ರಮ ಹಾಕಿ ಇಚ್ಚಾಶಕ್ತಿಯಿಂದ ಮಾಬೇಕು ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸುವುದು ಒಳ್ಳೆಯ ಬೆಳವಣಿಗೆ.–ಶಾಸಕ ಟಿ.ರಘುಮೂರ್ತಿ

About The Author

Namma Challakere Local News
error: Content is protected !!