ಚಳ್ಳಕೆರೆ : ಭಾರೀ ಮಳೆ ಗಾಳಿಗೆ ತಾಲೂಕಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಇಂದು ಸುರಿದ ಮಳೆಗೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಕಾಟಹಳ್ಳಿಯಲ್ಲಿ ನಿರ್ಮಿಸಿದ್ದ ಶುದ್ದ ನೀರಿನ ಘಟಕ ಗಾಳಿಗೆ ಮೇಲ್ಚಾವಣಿ ಹಾರಿಹೊಗಿ ಅಪಾರ ಹಾನಿಯಾಗಿದೆ
ಅದರಂತೆ ಗಿರಿಯಮ್ಮನಹಳ್ಳಿ ವ್ಯಾಪ್ತಿಯ ನಾಗರಾಜ್ ಎಂಬುವವರಿಗೆ ಸೇರಿದ ಕೋಳಿ ಪಾರಂ ಗಾಳಿಗೆ ಹಾನಿಯಾಗಿದೆ
ಸುಮಾರು ಐದು ಸಾವಿರ ಕೋಳಿ ಸಾಕಾಣಿಕೆ ಮಾಡುತ್ತಿದ್ದರು ಎನ್ನಲಾಗಿದೆ , ಇನ್ನೇನು ಮುಂದಿನ ವಾರ ಮಾರುಕಟ್ಟೆಗೆ ಕಳಿಸಬೆಕಾದ ಐದು ಸಾವಿರ ಕೋಳಿಗಳು ಇರುವ ಶೇಡ್ ಮಳೆ ಗಾಳಿಗೆ ಹಾರಿಹೊಗಿದೆ.
ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಸರಕಾರದಿಂದ ಸಿಗುವ ಪರಿಹಾರ ಮೊತ್ತಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ನೊಂದ ಮಾಲೀಕರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ.