ಚಳ್ಳಕೆರೆ : ಮಕ್ಕಳಿಗೆ ಬೆಸಿಗೆಯ ರಜಾ ದಿನಗಳಲ್ಲಿ ಅವರ ಕೌಶಲ್ಯ ಅಭಿವೃದ್ಧಿಗೆ ತಕ್ಕಂತೆ ಪೂರಕ ಚಟುವಟಿಕೆಗಳನ್ನು ಮಾಡಿಸಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯಲ್ಲಿ ರಾಜ್ಯ ಬಾಲಭವನ ಸೊಸೈಟಿ ತಾಲ್ಲೂಕು ಬಾಲಭವನ ಸಮಿತಿ ಚಳ್ಳಕೆರೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿರು.

ಮಕ್ಕಳಿಗೆ ಮನರಂಜನೆ ನೀಡುವ ಮೂಲಕ ಮಕ್ಕಳಿಗೆ ಸೃಜನಶೀಲ ಆಸಕ್ತಿ ಮೂಡಿಸುವಲ್ಲಿ ಬೆಸಿಗೆ ಶಿಬಿರಗಳು ಮಾದರಿಯಾಗುತ್ತವೆ ಮಕ್ಕಳಿಗೆ ನೃತ್ಯ, ಡ್ರಾಯಿಂಗ್, ಸಂಗೀತ ಈಗೇ ಕರಕುಶಲ ತರಬೇತಿ ನೀಡಿ ಬೆಸಿಗೆ ದಿನಗಳ ಕಾಲವನ್ನು ಸದುಪಯೊಗ ಪಡಿಸಿಕೊಳ್ಳಿತ್ತಿರುವುದು ಶ್ಲಾಘನೀಯ ಎಂದರು.

ಸಿಡಿಪಿಓ ಕೃಷ್ಣಪ್ಪ ಮಾತನಾಡಿ, ಮಕ್ಕಳಿಗೆ ಪಠ್ಯಚಟುವಟಿಕೆ, ಪಠ್ಯತೇರ ಚಟುವಟಿಕೆ ಕಲಿಸುವ ಮೂಲಕ ಮಕ್ಕಳ ಮಾನಸಿಕವಾಗಿ ವೃದ್ದಿಯಾಗಬೇಕು, ಇದರಿಂದ ಮುಂದಿನ ವ್ಯಾಸಂಗಕ್ಕೆ ಪ್ರೇರಣೆ ಯಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯೆ ಸುಮಾ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕೃಷ್ಣಾಪ್ಪ, ಸತೀಶ್, ಜಯಲಕ್ಷ್ಮಿ, ಚಿತ್ರಕಲಾ ಮಂಜುನಾಥ್, ನವೀನ್, ಬಸವರಾಜ್, ಇತರರು ಪಾಲ್ಗೊಂಡಿದ್ದರು

Namma Challakere Local News
error: Content is protected !!