ನಾಯಕನಹಟ್ಟಿ::ಜ.18. ಜಿಲ್ಲಾ ನ್ಯಾಯಾಧೀಶರಾದ ವಿಜಯ ರವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ವೀಕ್ಷಣೆ ಮಾಡಿ
ಸೂಕ್ತ ವೈದ್ಯರನ್ನು ನೇಮಿಸುವಂತೆ ಜಿಲ್ಲಾ ಆರೋಗ್ಯ
ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾದ ಸನ್ಮಾನ್ಯ ವಿಜಯ ರವರು
ಸೂಚನೆ ನೀಡಿದರು.
ಗುರುವಾರ ಪಟ್ಟಣದ ಸಮುದಾಯ ಆರೋಗ್ಯ
ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಆರೋಗ್ಯ ಕೇಂದ್ರದ
ಒಳರೋಗಿಗಳೊಂದಿಗೆ ಮಾತನಾಡಿದ ಅವರು
ಈ ಆಸ್ಪತ್ರೆಯಲ್ಲಿ
ವೈದ್ಯರು ಸರಿಯಾದ ಚಿಕಿತ್ಸೆ
ಆಸ್ಪತ್ರೆಯಲ್ಲಿ,ವ್ಯವಸ್ಥಿತವಾದ ಸೌಲಭ್ಯಗಳು
ಸಿಗುತಿವ್ಯೆಯೇಎಂದು ರೋಗಿಗಳನ್ನು ಪ್ರಶ್ನಿಸಿದರು? ಒಳ ರೋಗಿಗಳು ಹೌದು ಸ್ವಾಮಿ ಎಲ್ಲಾ ರೀತಿಯಿಂದಲೂ ಡಾಕ್ಟರ್
ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಮಾತ್ರೆ ಇಂಜೆಕ್ಷನ್
ಯಾವುದೇ ದುಡ್ಡು ಇಲ್ಲದೆ ಕೊಡುತ್ತಾರೆ. ನಮ್ಮ ಕಾಯಿಲೆ ವಾಸಿ
ಆಗುತ್ತೆ ಎಂದು ಒಳ ರೋಗಿಗಳು ಉತ್ತರಿಸಿದರು.
ಇದೇ ವೇಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ವಿಕಾಸ್
ಮಾತನಾಡಿ
ಆರೋಗ್ಯ ಕೇಂದ್ರದಲ್ಲಿ ಮಕ್ಕಳು ತಜ್ಞರು, ಸ್ತ್ರೀರೋಗ
ತಜ್ಞರು, ಹೆರಿಗೆ ತಜ್ಞರು, ಆಂಬುಲೆನ್ಸ್ ಕೊರತೆ ಇದೆ ಎಂದು
ನ್ಯಾಯಾಧೀಶರಿಗೆ ಸಮಸ್ಯೆಯನ್ನು ಹೇಳಿಕೊಂಡರು.
ತಕ್ಷಣವೇ ನ್ಯಾಯಾಧೀಶರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಅತಿ ಶೀಘ್ರದಲ್ಲಿ ಆರೋಗ್ಯ ಕೇಂದ್ರಕ್ಕೆ
ಕೊರತೆ ಇರುವ ವೈದ್ಯರನ್ನು ನೇಮಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಧಿಕಾರಿ,
ಎಂ,ಶಿವಕುಮಾರ್ ,ಆರೋಗ್ಯ ನಿರೀಕ್ಷಕ ತಿಪ್ಪೇಶ್,
ದ್ವಿತೀಯ ದರ್ಜೆ ಸಹಾಯಕ ಟಿ.ತಿಪ್ಪೇಸ್ವಾಮಿ ,ಆರೋಗ್ಯ
ಕೇಂದ್ರದ ವೈದ್ಯರುಗಳಾದ ಡಾ. ವಿಕಾಸ್, ಡಾ. ಸಣ್ಣ ಓಬಯ್ಯ, ಡಾ.
ಅಶೋಕ್, ಅಪ್ರೋಚ್, ಆರೋಗ್ಯ ಕೇಂದ್ರದ ಕಚೇರಿಯ
ಮೇಲ್ವಿಚಾರಕ ಮಲ್ಲಿಕಾರ್ಜುನ್, ದ್ವಿತೀಯ ದರ್ಜೆ ಸಹಾಯಕ
ಲೋಕೇಶ್, ಹಾಗೂ ಇನ್ನೂ ಇತರರು ಇದ್ದರು