ಚಳ್ಳಕೆರೆ : ಅಕ್ರಮ ಮಧ್ಯೆ ಮಾರಾಟ ಹಾಗೂ ಇನ್ನಿತರೆ ಅಬಕಾರಿ ಪ್ರಕಣಗಳಲ್ಲಿ ವಶಪಡಿಸಿಕೊಂಡ ವಾಹನಗಳನ್ನು ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದರು.
ನಗರದ ಅಬಕಾರಿ ಇಲಾಖೆ ಅವರಣದಲ್ಲಿ ಜಪ್ತಿ ಮಾಡಿದ ಸುಮಾರು 35 ದ್ವಿಚಕ್ರವಾಹನಗಳನ್ನು ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಿದರು. ಇನ್ನೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ಹರಾಜದ ಬೈಕ್‌ಗಳು ಸವಾಲುದರರ ಮಧ್ಯೆ ಪೈಪೋಟಿ ಏರ್ಪಟಿತ್ತು, ಇನ್ನೂ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಹಲವು ಬೈಕ್‌ಗಳನ್ನು ಪಡೆದರು.
ಇನ್ನೂ ಹರಾಜು ಪ್ರಕ್ರಿಯೆಯಲ್ಲಿ ಹಿರಿಯೂರು ಉಪ ವಿಭಾಗದ ಉಪ ಅಧೀಕ್ಷಕರಾದ ಧರ್ಮಪ್ಪ, ಚಳ್ಳಕೆರೆ ವಲಯದ ಅಬಕಾರಿ ನೀರೀಕ್ಷಕರಾದ ನಾಗರಾಜ್, ಹಾಗೂ ಸಿಬ್ಬಂದಿ ದೊಡ್ಡ ತಿಪ್ಪಯ್ಯ, ರಂಗಸ್ವಾಮಿ, ಶಾಂತಪ್ಪ, ನಾಗರಾಜ್, ಸೋಮಶೇಖರ್, ಕುಮಾರ್, ಹಾಗೂ ಸಾರ್ವಜನಿಕರು ಪಾಲ್ಗೋಂಡಿದ್ದರು.