ಚಳ್ಳಕೆರೆ : ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನರೇಗಾ ಇಂಜಿನಿಯರ್, ಬಿಎಫ್‌ಟಿ ಗಳಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ತಾಪಂ ಇಒ ಶಶಿಧರ್, ಜಿಲ್ಲೆಯಲ್ಲಿ ಅತೀ ಹೆಚ್ಚಿನ ಮಳೆ ಕೊರೆತೆ ಇರುವ ತಾಲೂಕು ಚಳ್ಳಕೆರೆ ಇಂತಹ ತಾಲೂಕನ್ನು ಬರಗಾಲ ಎಂದು ಸರಕಾರ ಘೋಷಣೆ ಮಾಡಿರುವುದರಿಂದ 100 ರಿಂದ 150 ಮಾನವ ದಿನಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದು ಕನಿಷ್ಟ ಒಂದು ಪಂಚಾಯಿತಿಗೆ 500 ಮಾನವ ದಿನಗಳನ್ನು ಸೃಷ್ಠಿಯಾಗುವಂತೆ ಕೆರೆ, ಕಾಲುವೆ, ಗೋಕಟ್ಟೆ ಹೂಳೆತ್ತುವ ಕಾಮಗಾರಿ ರೈತರ ಬದು ನಿರ್ಮಾಣ, ತೋಟಗಾರಿಕೆ, ಅರಣ್ಯಸಸಿಗಳ ಬೆಳೆಸಲು ಕೂಲಿ ಕಾರ್ಮಿಕರು ಹೆಚ್ಚು ಭಾಗವಹಿಸಂತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಇನ್ನೂ ತಾಪಂ ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಮಾತನಾಡಿ, ನರೇಗಾ ಕಾಮಗಾರಿಗಳಲ್ಲಿ ಯಂತ್ರಗಳ ಬಳಕೆ ನಿಶೇಷದವಿದ್ದು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು, ನರೇಗಾ ಕಾಮಗಾರಿಗಳಲ್ಲಿ ಹೆಚ್ಚು ಮಹಿಳಾ ಕೂಲಿಕಾರ್ಮಿಕರು ಭಾಗವಸುವಂತೆ ನೋಡಿಕೊಳ್ಳಬೇಕು ಕಾಮಗಾರಿಗಳ ಗುಣಮಟ್ಟ ನೋಡಿಕೊಳ್ಳ ಬೇಕು ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡುವಂತಿಲ್ಲ, ಕಾಮಗಾರಿ ಸ್ಥಳ ಪರಿಶೀಲನೆ ಮಾಡದೆ ಎಂ.ಬಿ ದಾಖಲಿಸುವಂತಿಲ್ಲ ನರೇಗಾ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿದೆ ಕಟ್ಟು ನಿಟ್ಟಾಗಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ತಾಂತ್ರಿಕ ಸಹಾಯಕರು, ಬಿ ಎಫ್ ಟಿ ಹಾಗೂ ಜಿ ಕೆ ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!