ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ
ಚಿತ್ರದುರ್ಗ : ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ ಮಾತನಾಡಿ, ಕರ್ನಾಟಕ ಹೆಸರು ನಾಮಕರಣವಾಗಿ 50ವರ್ಷಗಳು ಸಂದಿವೆ. ಕನ್ನಡ ಭಾಷೆಗೆ ದೊಡ್ಡ ಶ್ರೀಮಂತಿಕೆ ಇದೆ. ಶಾಸ್ತಿçÃಯ ಸ್ಥಾನಮಾನ ಸಿಕ್ಕಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಭಾಷೆ ನಮ್ಮದಾಗಿರುವುದು ಹೆಮ್ಮೆಪಡುವಂಥÀದ್ದು ಎಂದರು.
ಪ್ರಾಧ್ಯಾಪಕ ಎಂ.ಎಸ್.ಪರಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಒಂದುದಿನದ ಹಬ್ಬವಾಗಬಾರದು. ಅದು ದಿನನಿತ್ಯದ ಹಬ್ಬವಾಗಬೇಕು. ಹಂಪಿ, ಮೈಸೂರು ಸಂಸ್ಥಾನ ಮೊದಲಾದುವು ನಾಡಿಗೆ ನೀಡಿದ ಕೊಡುಗೆ ಅಪಾರವಾದುದು. ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ, ಪುಟ್ಟಪ್ಪ ಮೊದಲಾದವರನ್ನು ನಾವೆಲ್ಲ ಸದಾ ಪ್ರೀತಿಯಿಂದ ಸ್ಮರಿಸಬೇಕೆಂದರು.
ಸೃಷ್ಟಿ ಎಂ., ನಯನ, ಸಿಂಧು ಬಿ, ಗ್ರಂಥಾಲಯದ ಮುಖ್ಯಸ್ಥ ಎನ್. ಚಲುವರಾಜು, ಡಾ. ಸಿ.ಟಿ. ಜಯಣ್ಣ, ಉಷಾ, ಅಮೃತಸಿರಿ, ಚಂದನ ಇತರರು ಇದ್ದರು.