ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು — ಗಡಿಭಾಗದ ಕನ್ನಡ ನಶಿಸದಂತೆ ಕಾಪಾಡಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು, ಇಂತಹ ಕನ್ನಡ ನಾಡಿನ ಹಬ್ಬದ ಆಚರಣೆಗೆ ತಾಲೂಕಿನ ಎಲ್ಲಾ ಕನ್ನಡ ಅಭಿಮಾನಿಗಳು ಒಗ್ಗೂಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗಡಿಭಾಗದ ನಮ್ಮ ತಾಲೂಕು ಆಂದ್ರದ ಗಡಿಯ ಎಲ್ಲೆಯನ್ನು ಹಂಚಿಕೊAಡಿದೆ ಆದ್ದರಿಂದ ಪ್ರಮುಖ್ಯವಾಗಿ ಇಲ್ಲಿ ಈ ಗಡಿ ಭಾಗದ ತಾಲೂಕಿನಲ್ಲಿ ಕನ್ನಡ ನಶಿಸದಂತೆ ಕನ್ನಡದ ನೆಲೆದಲ್ಲಿ ಹುಟ್ಟಿದ ಪ್ರತಿಯೊಬ್ಬರು ಒಗ್ಗೂಡಬೇಕು ಎಂದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ ರವರು ಕನ್ನಡ ರಾಜ್ಯೋತ್ಸವದ ಪೂರ್ವ ನಿಯೋಜಿತ ಕಾರ್ಯಗಳ ಬಗೆ ಚರ್ಚಿಸಿದರು. ನಂತರ ಸರಳವಾಗಿ ಸಂಭ್ರಮಿಸುವ ಮೂಲಕ ಕನ್ನಡದ ಸೊಗಡನ್ನು ಎತ್ತಿ ಹಿಡಿಯುವ ಮೂಲಕ ನಾಡಿನ ಸ್ವಥ್ಯ ಕಾಪಾಡೋಣ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಇಓ.ಹೊನ್ನಯ್ಯ, ಇನ್ಸೆಪೆಕ್ಟೆರ್ ದೇಸಾಯಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಪಶುಇಲಾಖೆ ಸಹಾಯಕ ಅಧಿಕಾರಿ ಡಾ.ರೇವಣ್ಣ, ಕೃಷಿಇಲಾಖೆ ಸಹಾಯಕ ಅಧಿಕಾರಿ ಜೆ..ಅಶೋಕ್, ತೋಟಗಾರಿಕೆ ಸಹಾಯಕ ಅಧಿಕಾರಿ ವಿರೂಪಾಕ್ಷ, ಕಾವ್ಯ, ಹರಿಪ್ರಸಾದ್, ತಾಪ. ಸಹಾಯಕ ನಿರ್ದೇಶಕ ಸಂತೋಷ, ಸಂಪತ್, ಕುದಾಪುರ ತಿಪ್ಪೇಸ್ವಾಮಿ, ಅಕ್ಷರ ದಾಸೋಹ ತಿಪ್ಪೇಸ್ವಾಮಿ, ಪಿಡ್ಲೂ ವಿಜಯ್ ಬಾಸ್ಕರ್ , ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮಾ, ಇತರರು ಇದ್ದರು.