ಚಳ್ಳಕೆರೆ: ಹಿಂದೂ ಧರ್ಮದಿಂದ ಮಾದಿಗ ಸಮುದಾಯ ಹೊರಬಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ಪ್ರೋ.ಸಿಕೆ.ಮಹೇಶ್ವರಪ್ಪ ಹೇಳಿದರು.
ಅವರು ತಾಲೂಕಿನ ನನ್ನಿವಾಳ ಗ್ರಾಮದ ಬುದ್ದ ಮನೆಯ ಸಭಾಂಗಣದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ವಿಜಯ ಸಂಕಲ್ಪ ದಿನಪತ್ರಿಕೆ ವತಿಯಿಂದ ಬುದ್ದ ಪೂರ್ಣಿಮಾ ಕಾರ್ಯಕ್ರಮದಲ್ಲಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದರು,
ಬುದ್ದನ ಬಗ್ಗೆ ಮಾತನಾಡುವ ಬದಲು ಅವನ ನೀತಿಗಳನ್ನು ಅಳವಡಿಸಿಕೊಂಡು ಬಾಳುವುದು ಎಲ್ಲರ ಧರ್ಮವಾಗಿದೆ ಮಾದಿಗ ಸಮುದಾಯವು ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿದ್ದರೂ ಸಹ ನಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಹಿರಿಯ ಬರಹಗಾರ ಮೈತ್ರಿ ದ್ಯಾಮಣ್ಣ ಮಾತನಾಡಿ ಬುದ್ದನ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿದಾಗ ಮಾತ್ರ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯಯುವ ಜನತೆ ಬುದ್ಧ ಪ್ರಜ್ಞೆಯನ್ನು ಅಳವಡಿಸಿಕೊಂಡಾಗ ಮಾತ್ರ ಬುದ್ಧನ ಸತ್ಸಂಗ ಮಾರ್ಗವನ್ನು ಅನುಸರಿಸುವ ಮೂಲಕ ಬೆಳಕಿನೆಡೆಗೆ ಸಾಗೋಣ ಎಂದು ತಿಳಿಸಿದರು.
ಸಾಹಿತಿ ಹಾಗೂ ಪತ್ರಕರ್ತ ಕೊಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಬುದ್ಧ ಪ್ರಜ್ಞೆಯ ಅವಶ್ಯಕತೆ ಇದೆ ಬುದ್ದನ ನುಡಿಗಳು ಇಂದಿಗೂ ಪ್ರಸ್ತುತವಾಗಿದ್ದು ದ್ವೇಷ ಭಾವನೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಅಷ್ಟಾಂಗ ಮಾರ್ಗಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜವನ್ನು ಶುದ್ದೀಕರಣ ಗೊಳಿಸಲು ಸಾಧ್ಯ, ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತಗೊಳ್ಳುತ್ತಿದ್ದು ವಿಕೃತಿ ಮನಸ್ಥಿತಿಯನ್ನು ಹೊಂದುತ್ತಿದೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಹೀನ ಮನಸ್ಥಿತಿಯವರಿಗೆ ಎಂದು ತಿಳಿಸಿದರು.
ಪತ್ರಕರ್ತದ್ಯಾಮರಾಜ್ ಮಾತನಾಡಿ, ಬೌದ್ಧ ಧರ್ಮದ ಕಡೆಗೆ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ ಹಿಂದೂ ಧರ್ಮದಲ್ಲಿ ಬುದ್ಧನ ಪಂಚಶೀಲ ತತ್ವಗಳಿಗೆ ಬೆಲೆ ಇಲ್ಲದಂತಾಗಿದ್ದು ನಮ್ಮ ಸಮುದಾಯವು ಹಿಂದೂ ಧರ್ಮದಲ್ಲಿ ಇರುವವರೆಗೂ ಅಭಿವೃದ್ಧಿ ಕಾಣಲು ಸಾಧ್ಯವಾಗುವುದಿಲ್ಲ ಹಾಗಾಗಿ ಮಾದಿಗ ಸಮುದಾಯ ಮುಂದಿನ ದಿನಗಳಲ್ಲಿ ಬೌದ್ಧ ಧರ್ಮಕ್ಕೆ ಮರಳುವ ಬಗ್ಗೆ ಚಿಂತಿಸಬೇಕಿದೆ ಎಂದು ತಿಳಿಸಿದರು.
ಇದೇ ವೇಳೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಎನ್ ಪಲ್ಲವಿ ಅಮಿತ್ ಸ್ಫೂರ್ತಿ ಸುಜಿತ್ ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ಸಾಹಿತಿ ಮೂಗೂರು ತೇಜ ನಿವೃತ್ತ ತಹಸಿಲ್ದಾರ್ ಮಲ್ಲಿಕಾರ್ಜುನಾ ಮಾತನಾಡಿದರು.
ಈ ಸಂದರ್ಭದಲ್ಲಿ ಶಾತವಾಹನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ನಾಗರಾಜ್ ಮಲ್ಲಿಕಾರ್ಜುನ ಸಿಕೆ.ಮಹೇಶ್ ಕುಮಾರ್, ಪತ್ರಕರ್ತದ್ಯಾಮರಾಜ್ ಚಿಕ್ಕಣ್ಣ, ತಿಪ್ಪೇಸ್ವಾಮಿ, ಜಯಣ್ಣ, ಶಿವಣ್ಣ, ಪಿಡಿಒ ಇನಾಯಕ್ ಪಾಷಾ, ರೈತಮುಖಂಡ ದಯಾನಂದ ಮೂರ್ತಿ, ಎಟಿ.ಸ್ವಾಮಿ, ಹನುಮಂತಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು