ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಮಸ್ಯೆಗಳ ಸರಮಾಲೆ

ಸರಕಾರಕ್ಕೆ ಹುಂಡಿ ಹಣ ಮಾತ್ರ ಬೇಕು : ಅಭಿವೃದ್ದಿ ಬೇಕಿಲ್ಲ..!
ಹೆಣ್ಣುಮಕ್ಕಳ ಶೋಚನೀಯ ಸ್ಥಿತಿ : ಜಿಲ್ಲಾಧಿಕಾರಿಗಳ ಗಮನಕ್ಕೆ..!
ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಜಿಲ್ಲೆಯ ಐತಿಹಾಸಿಕ ಜಾತ್ರೆಗಳಲ್ಲಿ ಬಹುದೊಡ್ಡ ಜಾತ್ರೆಗಳಲ್ಲಿ ಎರಡನೆ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗೌರಸಮುದ್ರ ಮಾರಿ ಹಬ್ಬ ಸೆ.19ಕ್ಕೆ ಜರುಗಲಿದೆ.
ಬುಡಕಟ್ಟು ಸಂಪ್ರಾದಾಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಹೊರಹೊಮ್ಮಿದೆ ಈ ಜಾತ್ರೆಗೆ ವಿಶೇಷವಾದ ಈ ಭಾಗದಲ್ಲಿ ಪ್ರತಿ ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಕರ್ನಾಟಕದಿಂದ, ಆಂಧ್ರಪ್ರದೇಶದವರೆಗೂ ಲಕ್ಷಾಂತರ ಭಕ್ತರನ್ನು ತನ್ನತ ಸೇಳೆಯುವ ಶಕ್ತಿ ಈ ದೇವಿಗಿದೆ.
ಆದರೆ ಗೌರಸಮುದ್ರ ಮಾರಮ್ಮ ದೇವಿಗೆ ಜಾತ್ರೆಗೆ ಬರುವ ಭಕ್ತಾಧಿಗಳು ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಾರೆ ಹೌದು ಸುಮಾರು 500 ವರ್ಷಗಳ ಕಾಲ ಇತಿಹಾಸ ಹೊಂದಿದ ಗೌರಸಮುದ್ರ ಶ್ರೀ ಮಾರಮ್ಮ ದೇವಿಯ ಗ್ರಾಮ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಹೌದು ನಿಜಕ್ಕೂ ಮಧ್ಯ ಕರ್ನಾಟಕದ ಅನೇಕ ಭಾಗಗಳಲ್ಲಿ ಭಕ್ತಿ ಭಾವನೆಗಳು ನೆಲೆಯೂರಿವೆ ಇಂತಹ ದೈವತ್ವ ಸಂಪ್ರಾದಾಯದಲ್ಲಿ ಬೆಳೆದ ಅನೇಕ ಗ್ರಾಮಗಳು ಇಂದು ಮೂಲಭೂತ ಸೌಲಭ್ಯಗಳು ಇಲ್ಲದೆ ಆವಸನದ ಅಂಚಿಗೆ ಸೇರಿವೆ,
ಇನ್ನೂ ಮುಜಾರಾಯಿ ಇಲಾಖೆಗೆ ಒಳಪಟ್ಟಿದ್ದರೂ ನಾಮಕವಸ್ಥೆತೆಗೆ ಮಾತ್ರ ಸೌಲಭ್ಯ, ಆದರೆ ದೇವಾಸ್ಥಾನ ಆದಾಯ ಮಾತ್ರ ಸರಕಾರದ ಖಜಾನೆಗೆ, ಅಭಿವೃದ್ದಿ ಮಾತ್ರ ಮರಿಚೀಕೆ.
ಭಕ್ತಿಯಿಂದ ಪೂಜಿಸಿದರೆ ದೇವತೆ ಸಕಲ ಕಷ್ಟನಷ್ಟಗಳನ್ನು ಈಡೇರಿಸಿ ಆರೋಗ್ಯ ಆಯುಶ್ಸು ನೀಡಿ ಸಮಸ್ಯೆಗಳನ್ನು ಪಾಪಗಳನ್ನು ಪರಿಹಾರ ಮಾಡುತ್ತಾಳೆ ಎಂಬ ನಂಬಿಕೆ ಇದೆ ರಾಜ್ಯಾದ್ಯಂತ ಅಪಾರವಾದ ಭಕ್ತಾದಿಗಳ ಸಮೂಹವನ್ನು ಹೊಂದಿದೆ. ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಈ ಒಂದು ದೇವಿಯ ಜಾತ್ರೆಯು ವರ್ಷದ ಮೊದಲನೇ ಭದ್ರಪದ ಮಾಸದಲ್ಲಿ ಅದ್ದೂರಿಯಾಗಿ ಸುಮಾರು ನಾಲ್ಕರಿಂದ ಐದು ಲಕ್ಷ ಭಕ್ತಾದಿಗಳ ಸಮೂಹದಲ್ಲಿ ಜಾತ್ರೆಯು ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ
ವರಮಾನ ಸರಕಾರಕ್ಕೆ ನಷ್ಟ ಭಕ್ತರಿಗೆ :
ದೇವಿಯ ವಾರ್ಷಿಕ ವರಮಾನವು ಸುಮಾರು 15 ರಿಂದ 20 ಲಕ್ಷ ರೂಗಳು ಸಂಗ್ರಹವಾಗುತ್ತದೆ ಹಣವನ್ನು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಬಂದು ತೆಗೆದುಕೊಂಡು ಹೋಗುತ್ತಾರೆ. ದೇವಿಯ ಗ್ರಾಮದ ವಿಪರ್ಯಾಸ ವಿಷಯ ಏನೆಂದರೆ ಪ್ರತಿ ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಸುಮಾರು ಸಂಖ್ಯೆಯಲ್ಲಿ ಭಕ್ತಾದಿಗಳು ಒಂದು ದಿನ ಮುಂಚಿತವಾಗಿಯೇ ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ ಆದರೆ ಬರುವಂತಹ ಭಕ್ತಾದಿಗಳಿಗೆ ಎಲ್ಲಾ ಭಾಗಗಳಿಂದ ಬರುವಂತಹ ರಸ್ತೆಗಳು ತುಂಬಾ ದುಸ್ಥಿತಿಯಲ್ಲಿವೆ ಅನೇಕ ರೀತಿಯ ಅಪಘಾತಗಳಾಗಿವೆ ತುಂಬಾ ನೋವಿನಿಂದ ದರ್ಶನಕ್ಕೆ ಆಗಮಿಸುವತಹ ಸ್ಥಿತಿ ನಿರ್ಮಾಣವಾಗಿದೆ
ಇದಲ್ಲದೆ ಭಕ್ತಾದಿಗಳು ಮುಂಚಿತವಾಗಿಯೇ ಆಗಮಿಸುವ ಭಕ್ತಾದಿಗಳಿಗೆ ರಾತ್ರಿ ತಂಗಲು ಯಾವುದೇ ರೀತಿಯ ವಸತಿಗಳು ಇಲ್ಲದೆ ಇರುವುದು ಅತಿ ವಿಪರ್ಯಾಸದ ವಿಷಯ ವಸತಿಗೃಹಗಳಿಲ್ಲದೆ ರಸ್ತೆಯಲ್ಲಿ ಮಲಗುವಂತಹ ಸಂದಿಗ್ಧ ಪರಿಸ್ಥಿತಿಯು ಈ ದೇವಿಯ ಗ್ರಾಮದಲ್ಲಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳು ಸಹ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ ಆದರೆ ಹೆಣ್ಣು ಮಕ್ಕಳಿಗೆ ಸ್ನಾನ ಮಾಡಲು, ಶೌಚಾಲಯಕ್ಕೆ ಹೊಗಲು ಯಾವುದೇ ರೀತಿಯ ಸ್ನಾನ ಗೃಹಗಳು ಇಲ್ಲದೇ ಇರುವುದರಿಂದ ಭಕ್ತಾದಿಗಳು ತುಂಬಾ ನೊಂದುಕೊಳ್ಳುತಿದ್ದಾರೆ.
ಹೆಣ್ಣುಮಕ್ಕಳ ಶೋಚನೀಯ ಸ್ಥಿತಿ :
ಹೆಣ್ಣುಮಕ್ಕಳು ಬಯಲಿನಲ್ಲಿಯೇ ತಮ್ಮ ಸೀರೆಗಳನ್ನು ಸ್ನಾನದ ಗೃಹದಂತೆ ಕಟ್ಟಿಕೊಂಡು ಸ್ನಾನವನ್ನು ಮಾಡುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ ನಾನಾಕಡೆಯಿಂದ ದೇವಿಯ ದರ್ಶನಕ್ಕೆ ಆಗಮಿಸುವಾಗ ದರ್ಶನ ಪಡೆದು ಬಸ್ಸುಗಳನ್ನು ಕಾಯುವುದಕ್ಕೆ ಬಸ್ ನಿಲ್ದಾಣವಿಲ್ಲ ಈ ದೇವಿಯ ಗ್ರಾಮದ ರಸ್ತೆಯಲ್ಲಿ ಊರಿನ ಜನರು ಸ್ನಾನದ ನೀರನ್ನು ಬಟ್ಟೆ ತೊಳೆಯುವ ನೀರನ್ನು ರಸ್ತೆಗೆ ಚೆಲ್ಲುವುದರಿಂದ ಬರುವಂತಹ ಭಕ್ತಾದಿಗಳಿಗೆ ತುಂಬಾ ಕಿರಿಕಿರಿ ಉಂಟುಮಾಡಿದೆ ಗ್ರಾಮದಲ್ಲಿ ಕೆಲವು ಕಡೆಗಳಲ್ಲಿ ಚರಂಡಿಗಳಿಲ್ಲ, ರಸ್ತೆಗಳು ಅದಗೆಟ್ಟಿವೆ ಈ ಗ್ರಾಮವು ಅಭಿವೃದ್ಧಿಯಿಂದ ತುಂಬ ಕುಂಠಿತವಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಸರಕಾರಕ್ಕೆ ಸವಾಲು :
ಭಕ್ತಾದಿಗಳು ಹಾಕಿರುವಂತಹ ಕಾಣಿಕೆ ಹುಂಡಿ ಹಣವನ್ನು ಭಕ್ತಾದಿಗಳಿಗೆ ಖರ್ಚು ಮಾಡಿ ಇಲ್ಲದಿದ್ದರೆ ಗ್ರಾಮದೇವತೆಯನ್ನು ಗ್ರಾಮಕ್ಕೆ ಒಪ್ಪಿಸಿ ಅಭಿವೃದ್ಧಿ ಕೆಲಸವನ್ನು ನಾವು ಮಾಡುತ್ತೇವೆ ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯೂ ಸಹ ಸ್ಥಳೀಯರು ನೀಡುತ್ತಿದ್ದಾರೆ.
ಅಧಿಕಾರಿಗಳು ಒಂದು ದಿನ ದೇವಿಯ ಗಡಿ ಗ್ರಾಮದ ಗೌರಸಮುದ್ರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡಿ ಗ್ರಾಮಕ್ಕೆ ಬೇಕಾಗುವಂತಹ ಮತ್ತು ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಮೂಲಭೂತ ಸೌಕರ್ಯಗಳಾದ ಭಕ್ತಾದಿಗಳಿಗೆ ವಸತಿಗೃಹಗಳು. ಶೌಚಾಲಯಗಳು, ಬಸ್‌ನಿಲ್ದಾಣ, ರಸ್ತೆಗಳು, ಹಾಗೂ ಯಾತ್ರಿನಿವಾಸ, ಕೆರೆ ಕಾಲುವೆಯ, ಒತ್ತುವರಿಯನ್ನು ತೆರವುಗೊಳಿಸಿ ಚರಂಡಿಯನ್ನು ನಿರ್ಮಿಸುವುದು, ರಸ್ತೆ ಅಗಲೀಕರಣ ಮಾಡುವುದು ಇನ್ನೂ ಅನೇಕ ರೀತಿಯ ಭಕ್ತಾದಿಗಳಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ಬಾಕ್ಸ್ ಮಾಡಿ :
1.ಈಗಾಗಲೇ ಜಾತ್ರೆಗೆ ಸಕಲ ಸಿದ್ದತೆಗಳೊಂದಿಗೆ ತಯಾರಿ ಮಾಡಲಾಗಿದೆ ಅದರಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಸಹ ನಿಡಿದೆ, ಇನ್ನೂ ತಾತ್ಕಲಿಕವಾಗಿ ಭಕ್ತಾಧಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ, ಇನ್ನೂ ರ್ದುದೈವ ಸಂಗತಿ ಎಂದರೆ ಮುಜರಾಯಿ ಇಲಾಖೆಯವರು ಹುಂಡಿ ಹಣ ಬ್ಯಾಂಕ್‌ಗೆ ಕಟ್ಟುತ್ತಾರೆ ಆದರೆ ದೇವಾಸ್ಥಾನ ಅಭಿವೃದ್ದಿ ಬಗ್ಗೆ ಚಿಂತಿಸುವುದಿಲ್ಲ, ಆದರೆ ನಾವು ಕಂಡ ಹಾಗೇ ತಿರುಪತಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಈಗೇ ಹಲವು ದೇವಾಸ್ಥನಗಳಲ್ಲಿ ಹುಂಡಿಗೆ ಹಾಕಿರುವ ಹಣ ಸಾರ್ವಜನಿಕರವಾಗಿ ಉಪಯೋಗ ಮಾಡುತ್ತಾರೆ, ಆದರೆ ಈ ಮುಜರಾಯಿ ಇಲಾಖೆಗೆವರಿಗೆ ಯಾವ ಕಾನೂನು ಗೊತ್ತಿಲ್ಲ, ಇರುವ ಹಣದಲ್ಲಿ ಜಾತ್ರೆಗೆ ಸಿದ್ದತೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಮಾತನಾಡುವೆ, ಇನ್ನೂ ಕೊಡ್ಲಹಳ್ಳಿಗೆ ಹೋಗುವ ದಾರಿ ಪಕ್ಕದ ಪಾಳು ಬಿದ್ದ ಬಾವಿ ಮುಚ್ಚಲು ಅಗತ್ಯ ಕ್ರಮ ವಹಿಸಲಾಗಿದೆ.— ಎನ್.ವೈ.ಗೋಪಾಲಕೃಷ್ಣ ಶಾಸಕರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

2.ಗ್ರಾಮದ ಸ್ವಥ್ಯ ಕಾಪಾಡುವ ನಿಟ್ಟಿನಲ್ಲಿ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಶ್ರಮಿಸಬೇಕು, ಅದರಂತೆ ಗ್ರಾಮದಲ್ಲಿ ಒಂದು ವಾರಗಳ ಕಾಲ ನಡೆಯುವ ಜಾತ್ರೆಗೆ ಹೊರ ರಾಜ್ಯದಿಂದ ಬರುವ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಗ್ರಾಮ ಪಂಚಾಯಿತಿಯಿAದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಗ್ರಾಮದಲ್ಲಿ ಚರಂಡಿ, ಸ್ವಚ್ಚತೆ ವ್ಯವಸ್ಥೆ, ಬೀದಿದೀಪ, ಈಗೇ ವಿವಿಧ ಅಭಿವೃದ್ದಿಗಳನ್ನು ಸ್ಥಳೀಯ ಶಾಸಕರ ಸಹಕಾರದಿಂದ ಮಾಡಲಾಗುತ್ತಿದೆ ಇನ್ನೂ ಹೆಚ್ಚಿನ ಅನುದಾನಕ್ಕೆ ಜಿಲ್ಲಾಡಳಿತ ಇತ್ತ ದಾವಿಸಬೇಕು.
ಎಂ.ಓಬಣ್ಣ, ಗ್ರಾಪಂ.ಅಧ್ಯಕ್ಷ ಗೌರಸಮುದ್ರ

3.ಜಾತ್ರೆಗೆ ಬರುವ ಭಕ್ತಾಧಿಗಳಿಗೆ ರಸ್ತೆ ಅಗಲೀಕರಣ, ಶೌಚಾಲಯ, ಯಾತ್ರೆ ನಿವಾಸ, ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಘಟಕ, ಬಸ್ ನಿಲ್ದಾಣ, ಇನ್ನೂ ದೇವಾಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಶುಧ್ದ ನೀರಿನ ಘಟಕ, ಕಾಯಂ ಪೊಲೀಸ್ ಉಪ ಠಾಣೆ, ಭಕ್ತಾಧಿಗಳ ವಾಹನ ಪಾರ್ಕಿಂಗ್ ವ್ಯವಸ್ಥೆ, ಜಾತ್ರೆ ಸಂದರ್ಭದಲ್ಲಿ ಗ್ರಾಮದ ನಾಲ್ಕು ದಿಕ್ಕೂಗಳ ರಸ್ತೆ ಅಗಲೀಕರಣ ಈಗೇ ಹೊರ ರಾಜ್ಯದಿಂದ ಬರುವ ಭಕ್ತಾಧಿಗಳಿಗೆ ಸಮಸ್ಯೆ ತಲೆದೂರದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯ
ಟಿ.ಶಶಿಕುಮಾರ್ ವಕೀಲರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು

4.ಸ್ವಾಮಿ ನಾವು ಬಹು ದಿನಗಳಿಂದ ಈ ದೇವಿ ಜಾತ್ರೆಗೆ ಆಗಮಿಸುತ್ತೆವೆ ಇನ್ನೂ ಜಾತ್ರೆ ನಂತರವು ಇಲ್ಲಿಗೆ ಬಂದು ದೇವಿ ದರ್ಶನ ಮಾಡಿಕೊಂಡು ರಾತ್ರಿವೇಳೆ ಇಲ್ಲೆ ತಂಗುತ್ತೆವೆ ಆದರೆ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ, ಶೌಚಲಾಯವಂತೂ ಮೊದಲೆ ಇಲ್ಲ, ಈಗೇ ಕುಡಿಯುವ ನೀರು, ವಸತಿ ಗೃಹ ಈಗೇ ಹಲವು ಸಮಸ್ಯೆಗಳು ತಾಡವಾಡುತ್ತಿವೆ ಆದರೆ ಇದರ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಕೇವಲ ಹುಂಡಿಗೆ ಮಾತ್ರ ಸಿಮಿತವಾಗದೇ ಅಭಿವೃದ್ದಿಯತ್ತ ಮುಖಮಾಡಬೇಕು.–ಮಂಜುನಾಥ್ ದೇವಿಯ ಭಕ್ತ

1.ಪೋಟೋ. ಎನ್.ವೈ.ಗೋಪಾಲಕೃಷ್ಣ ಶಾಸಕರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ
2.ಪೋಟೋ ಎಂ.ಓಬಣ್ಣ, ಗ್ರಾಪಂ.ಅಧ್ಯಕ್ಷ ಗೌರಸಮುದ್ರ
3.ಟಿ.ಶಶಿಕುಮಾರ್ ವಕೀಲರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು
4.ಗೌರಸಮುದ್ರ ಮಾರಮ್ಮ ದೇವಿ
5.ತುಮಲುನಲ್ಲಿ ಸೀರೆಯ ಮರೆಮಾಚಿ ಸ್ನಾನಮಾಡುವ ಭಕ್ತಾಧಿಗಳು

About The Author

Namma Challakere Local News
error: Content is protected !!