ಅಕ್ರಮ ಮಧ್ಯಮರಾಟ : ಅಬಕಾರಿ ಬಲೆಗೆ ಬಿದ್ದ ಓರ್ವ ವ್ಯಕ್ತಿ
ಚಳ್ಳಕೆರೆ : ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಳ್ಳಕೆರೆ ಅಬಕಾರಿ ನಿರೀಕ್ಷಕರು ಇಂದು ಭರ್ಜರಿ ಬೇಟೆಯಾಡಿದ್ದಾರೆ.
ಹೌದು ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ರವರ ಮಾರ್ಗದರ್ಶನದಲ್ಲಿ ಹಾಗೂ
ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ರವರ ನಿರ್ದೇಶನದಂತೆ ಆ.
18 ರಂದು ಅಬಕಾರಿ ಉಪ ನಿರೀಕ್ಷಕರಾದ ನಾಗರಾಜ್ ಹಾಗೂ ಸಿಬ್ಬಂದಿಯೊಂದಿಗೆ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ, ಗ್ರಾಮದಲ್ಲಿ ಗಸ್ತು
ನಿರ್ವಹಿಸುತ್ತಿರುವ ಸಮಯದಲ್ಲಿ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಪುದೀಪ ಬಿನ್ ಓಬಳೇಶಪ್ಪ
ಇವರಿಗೆ ಸೇರಿದ ಟೀ ಹೋಟೆಲ್ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ
ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಪ್ರದೀಪ ಬಿನ್ ಓಬಳೇಶಪ್ಪ ಇವರಿಗೆ ಸೇರಿದ ಟೀ ಹೋಟೆಲ್
ಪರಿಶೀಲಿಸಿ ನೋಡಲಾಗಿ ಮದ್ಯ ಹೊಂದಿರುವುದು ಕಂಡು ಬಂದಿದೆ.
ಹೋಟೆಲ್ ನಲ್ಲಿ ದೊರೆತ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ
ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ
ಹೈವಾರ್ಡ್ ಚಿಯರ್ಸ್ ವಿಸ್ಕಿ 90 ಮಿಲಿಯ
43 ಟೆಟ್ರಾ
ಪ್ಯಾಕ್ ಗಳು,
ಓಲ್ ಟಾವರಿನ್ ವಿಸ್ಕಿ 180 ಮಿಲಿಯ
8 ಟೆಟ್ರಾ ಪ್ಯಾಕ್ ಗಳು ಹಾಗೂ ಒರಿಜಿನಲ್ ಚಾಯ್ಸ್ ವಿಸಿ 90
ಮಿಲಿಯ
8 ಟೆಟ್ರಾ ಪ್ಯಾಕ್ ಗಳು
ಒಟ್ಟು-6.030 ಲೀಟರ್ ಮದ್ಯ ಕಂಡು ಬಂದಿದ್ದೆ.
ದೊರೆತ ಮದ್ಯವನ್ನು ಅಬಕಾರಿ ಜಪ್ತಿಪಡಿಸಿಕೊಳ್ಳಲಾಯಿತು.
ಸದರಿ ಆರೋಪಿತನಿಗೆ ಸಿ.ಆರ್.ಪಿ.ಸಿ ಕಲಂ-41(ಎ)/1 ರಡಿ ನೋಟೀಸ್ ನೀಡಲಾಗಿ
ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಇಧೇ ಸಂಧರ್ಭದಲ್ಲಿ ಉಪ ನಿರೀಕ್ಷಕರಾದ ರಂಗಸ್ವಾಮಿ, ತಿಪ್ಪಯ್ಯ,
ನಾಗರಾಜ್, ಶಾಂತಣ್ಣ, ಡ್ರೈವರ್ ನಾಗರಾಜ್, ಇತರರು ಇದ್ದರು