ಚಳ್ಳಕೆರೆ : ಎಸ್.ಟಿ ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ
ಹಣ ಪಾವತಿ ಮಾಡದೆ ಸರಕಾರ ನಿರ್ಲಕ್ಷ್ಯ ವಹಸಿದೆ ಎಂದು ಸಾಮಾಜಿಕ ಹಿತಸಕ್ತಿಯ ಜಗನ್ನಾಥ್ ಆರೋಪಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಎಸ್.ಟಿ ವಿದ್ಯಾಥಿಗಳಿಗೆ 6ನೇ ಹಾಗೂ
10 ನೇ ರವರೆಗೆ ಪ್ರತಿಷ್ಠಿತ ಶಾಲೆಗಳ ಶುಲ್ಕ ಪಾವತಿಯಾಗದೇ ಇರುವುದರಿಂದ ಸಾಲ ಮಾಡಿ
ವಿದ್ಯಾರ್ಥಿ ಶುಲ್ಕವನ್ನು ಶಾಲೆಗಳಿಗೆ ನೀಡಿ ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ.
ಕಳೆದ ಮೂರು ವರ್ಷಗಳಿಂದ
ಸರಿಯಾಗಿ ಪಾವತಿಯಾಗಿರುವುದಿಲ್ಲ. ತಾಂತ್ರಿಕ ಕ್ಷೇತ್ರದಲ್ಲಿ ವಿದ್ಯಾಭ್ಯಾಸ (ಐ.ಟಿ.ಐ, ಜಿ.ಟಿ.ಟಿ.ಸಿ)
ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹ ವಿದ್ಯಾರ್ಥಿ ವೇತನ ಬಂದಿರುವುದಿಲ್ಲ.
ಪ್ರತಿಭಾವಂತರ ವಿದ್ಯಾರ್ಥಿಗಳಿಗೆ ಸರ್ಕಾರ ಮೆರಿಟ್ ವಿದ್ಯಾರ್ಥಿ ವೇತನವನ್ನು ಸಹ ನೀಡಿಲ್ಲ
ಆದ್ದರಿಂದ ವಿದ್ಯಾಭ್ಯಾಸ ಮಾಡುವುದೇ ಕಷ್ಟಕರವಾಗಿದೆ. 2023-24 ನೇ ಸಾಲಿಗೆ ಮೆಟ್ರಿಕ್ ನಂತರ
ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಅರ್ಜಿಗಳನ್ನು ವಿದ್ಯಾರ್ಥಿಗಳಿಂದ
ಆಹ್ವಾನಿಸಿ ಶಾಲಾ ಕಾಲೇಜ್‌ಗಳು 3 ತಿಂಗಳು ಪ್ರಾರಂಭವಾದರೂ ಸಹ ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್
ಸೌಲಭ್ಯವನ್ನು ಒದಗಿಸಿಲ್ಲ.
ಇದರ ಬಗ್ಗೆ ಪೋಷಕರು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಭೇಟಿ
ಮಾಡಿದರೆ ಆಯುಕ್ತರು ಕಛೇರಿ ಬೆಂಗಳೂರಿಗೆ ಹೋಗಲು ತಿಳಿಸುತ್ತಾರೆ.
ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಗೂ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಬೇಕು.
ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಜಗನ್ನಾಥ್ , ಗೌರೀಶ್, ನಾಗೇಶ್, ನಾಗರಾಜ್, ಇತರರು ಇದ್ದರು.