ಇಂದು ಚಳ್ಳಕೆರೆ ನಗರಸಭೆ ವತಿಯಿಂದ ಶುದ್ದ ಕುಡಿಯುವ ನೀರು ಹಾಗೂ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಚತಾ ಅಭಿಯಾನ ಕುರಿತು ಇಂದು ನಗರದ ಅಂಬೇಡ್ಕರ್ ನಗರ ಜನತಾ ಕಾಲೋನಿ ಈಗೇ ಹಲವು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
ಇನ್ನೂ ಜಾಗೃತಿ ಜಾಥಕ್ಕೆ ನಗರಸಭೆ ಸ್ಥಾತಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ ಚಾಲನೆ ನೀಡಿ ಮಾತನಾಡಿದರು ವಾರ್ಡ್ ಗಳಲ್ಲಿ ಮೊದಲು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು, ಕುಡಿಯುವ ನೀರನ್ನು ಪರೀಶಿಲಿಸಿಕೊಂಡು ಶುದ್ದ ನೀರನ್ನೇ ಕುಡಿಯಬೇಕು, ಅಧಿಕಾರಿಗಳು ಕೂಡ ಶುದ್ದೀಕರಣ ನೀರನ್ನು ವಾರ್ಡ್ ಗಳಿಗೆ ಸರಬರಾಜು ಮಾಡುವ ಮೂಲಕ ಕ್ರಮಕೈಗೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಪೌರಾಯುಕ್ತ ಸಿ.ಚಂದ್ರಪ್ಪ, ಇಂಜಿನಿಯರ್ ವಿನಯ್, ಆರೋಗ್ಯ ನಿರೀಕ್ಷಕಿ ಗೀತಾ, ಮಹಾ ಲಿಂಗಪ್ಪ, ದಾದಪೀರ್, ಗಣೇಶ್, ಪರಿಸರ ಇಂಜಿನಿಯರ್ ನರೇಂದ್ರ ಬಾಬು, ಇತರ ಸದಸ್ಯರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.