ಚಳ್ಳಕೆರೆ : ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಳೆರಾಯನಿಗೆ ರೈತರು ಎದುರು ನೋಡುವ ದೃಶ್ಯಗಳು ಒಂದೆಡೆಯಾದರೆ, ವರುಣ ಕೃಪೆ ತೋರಿ ಮಳೆ ಸುರಿಸಲಿ ಎಂದು ವಿವಿಧ ಹೋಮ ಹವನಗಳ ಮೊರೆ ಹೋಗುವ ಜನರು ಇಂದು ಹೊಳಿಗಮ್ಮ ಎಂಬ ಹೆಸರಿನ ಹಬ್ಬವನ್ನು ಪ್ರತಿವರ್ಷದ ವಾಡಿಕೆಯಂತೆ ಈ ವರ್ಷವೂ ಕೂಡ ಬಹಳ ಸಂಭ್ರಮ ಸಡಗರದಿಂದ ಆಚರಿಸಿದರು.
ಅದರಂತೆ ಚಳ್ಳಕೆರೆ ನಗರದ 31 ವಾರ್ಡ್ಗಳಲ್ಲಿ ಇಂದು ವರುಣನ ಕೃಪೆಗೆ ಹೋಳಿಗಮ್ಮ ದೇವಿಯನ್ನು ಮುಂಜಾನೇ ಪ್ರತಿಷ್ಠಾಪಿಸಿ ಆ ಭಾಗದ ಮನೆಗಳಿಂದ ದೇವಿಗೆ ನೈವಿದ್ಯ ಹೆಡೆಯನ್ನು ತಂದು ಹರಕೆ ತೀರಿಸಿ ಪೂಜೆ ಸಲ್ಲಿಸುತ್ತಾರೆ ನಂತರ ಅಲ್ಲಿನ ಪ್ರಮುಖರು ಊರಿನ ಗಡಿ ಭಾಗಕ್ಕೆ ಹೋಳಿಗಮ್ಮ ದೇವಿಯನ್ನು ಬಿಟ್ಟು ಬರುತ್ತಾರೆ ಈ ವಾಡಿಕೆ ಪದ್ದತಿ ಅನಾದಿ ಕಾಲದಿಂದಲೂ ಆಚರಣೆಗೆ ಬಂದಿತ್ತಾದರೂ ಹೊಳಿಗಮ್ಮ ಹಬ್ಬದ ದಿನ ಮಳೆಯಾರ ಬರುವುದು ಮಾತ್ರ ಸತ್ಯವಾಗಿದೆ.