ಚಳ್ಳಕೆರೆ : ಚಳ್ಳಕೆರೆ ನಗರದ ಸಹಾಯಕ ಕೃಷಿ ಇಲಾಖೆ ಆವರಣದಲ್ಲಿ ನಡೆದ ಭಿತ್ತನೆ ಬೀಜ ವಿತರಣ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ರೈತರಿಗೆ ಬೀಜ ವಿತರಣೆ ಮಾಡಿ ಮಾತನಾಡಿದರು.
ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ನಡೆದ 2023-24ನೇ ಸಾಲಿನ ಮುಂಗಾರು ಹಂಗಾಮಿನ ಭಿತ್ತನೆ ಬೀಜ ವಿತರಣ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕೇಂದ್ರ ಸರಕಾರದ ವೈಪಲ್ಯ ಎಷ್ಟಿದೆಯಂದರೆ ರಾಜ್ಯದ ಜನತೆಗೆ ಆಹಾರ ಭದ್ರತಾ ಯೋಜನೆಯಲ್ಲಿ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡುವ ಮಹತ್ವ ಯೋಜನೆಗೆ ಅಕ್ಕಿ ನೀಡದೆ ಇರುವುದು ಕೇಂದ್ರ ಸರಕಾರದ ವೈಪಲ್ಯವಾಗಿದೆ, ಇದನ್ನು ವಿರೋಧ ಪಕ್ಷದವರು ಜನರಿಗೆ ತಪ್ಪು ಸಂದೇಶ ರವಾನೆ ಮಾಡುವ ಮೂಲಕ ಜನರಿಗೆ ಮಂಕು ಬೂದಿ ಬಳಿಯುತ್ತಿದ್ದಾರೆ. ಇನ್ನೂ ಗ್ಯಾರಂಟಿ ಯೋಜನೆಗೆ ಹಣವನ್ನು ಸರಿಹೊಂದಿಸಿ ನಮ್ಮ ಕಾಂಗ್ರೇಸ್ ನ ರಾಜ್ಯ ಸರಕಾರದ ಮುಖ್ಯ ಮಂತ್ರಿಗಳು ಜೂನ್ ತಿಂಗಳ ಒಂಬತ್ತನೆ ತಾರೀಕು ಕೇಂದ್ರ ಸರಕಾರಕ್ಕೆ ಅಕ್ಕಿ ನೀಡಲು ಪತ್ರ ಬರೆದರೆ ಜೂನ್ 12 ರಂದು ಕೊಡುತ್ತೆವೆ ಎಂದು ಹೇಳಿ ನಂತರ ಜೂನ್ 13 ರಂದು ಕೊಡುವುದಿಲ್ಲ ಎಂದು ಪತ್ರ ಕಳಿಸುತ್ತಾರೆ ಎಂದರೆ ಇವರಿಗೆ ಬಡ ಜನರ ಬಗ್ಗೆ ಕಾಳಜಿ ಇಲ್ಲದೆ ಇರುವುದು ಕಂಡು ಬರುತ್ತದೆ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು,
ಇನ್ನೂ ಫಸಲ ಭಿಮ್ ಯೋಜನೆಯನ್ನು ಸುಮಾರು ಏಳು ವರ್ಷದ ಅವಧಿ ಸರಾಸರಿ ನಿಯಮ ಸರಿಯಲ್ಲ ಇಂತಹ ಯೋಜನೆ ತಂದಿರುವುದು ಕೇಂದ್ರ ಸರಕಾರ ಆಯಾ ಕಾಲಕ್ಕೆ ಆಯಾ ಪ್ರದೇಶಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಿದ್ದು ಕೇಂದ್ರ ಸರಕಾರ ಎಂದು ದೂರಿದರು.
ಇನ್ನೂ ರಾಜ್ಯದಲ್ಲಿ ಐದು ತಾಲೂಕುಗಳಲ್ಲಿ ಅತೀ ಹೆಚ್ಚಿನದಾಗಿ ಶೇಂಗಾ ಬೆಳೆಯುವ ಪ್ರಮುಖ ತಾಲುಕುಗಳು ಇಲ್ಲಿ ಶೇಂಗಾ ಬೆಳೆಗೆ ಉತ್ತೆಜನ ನೀಡಬೇಕು ರಾಜ್ಯ ಸರಕಾರದ ಗಮನ ಸೆಳೆಯಲಾಗುವುದು ಎಂದರು.
ಜಿಲ್ಲಾ ಕೃಷಿ ಜಂಟಿನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಮುಂಗಾರು ತಡವಾಗಿ ಆರಂಭವಾಗಿದೆ ಆದರೆ ಈ ಭಾಗದಲ್ಲಿ ಬಿತ್ತನೆಗೆ ಸಹಕಾಗುವಷ್ಟು ಮಳೆ ಬಂದಿಲ್ಲ, ಸುಮಾರು 141 ಮಿಲಿ ಮೀಟರ್ ಮಳೆ ಬರಬೇಕಿತ್ತು ಆದರೆ 110ಮಿಲಿ ಮೀಟರ್ ನಷ್ಟು ಮಳೆ ಬಂದಿದೆ ಆದರೆ ಶೇ.20 ರಷ್ಟು ಕೊರೆತೆÀಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ಪ್ರಕಾರ ಈ ಪ್ರದೇಶದಲ್ಲಿ 500 ಮಿಲಿ ಮೀಟರ್ ಮಳೆಯಾಗಬೇಕಿತ್ತು ಆದರೆ ತಡವಾಗಿ ಮಳೆ ಬಂದರೂ ಜಿಲ್ಲೆಗೆ ಮಳೆಬರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ,
ಇನ್ನೂ ಶೇಂಗಾ ಬಿತ್ತನೆ ಬೀಜ ಕಳೆದ ಬಾರಿಗಿಂತ ಈ ಬಾರಿ ದುಬಾರಿ ಯಾಗಿದೆ ಎಂಬ ರೈತ ಮುಖಂಡರುಗಳ ವಾದವಿದೆ ಎಂದರು. ಜಿಲ್ಲೆಯಲ್ಲಿ ಬಿತ್ತನೆಗೆ ಸಕಾಗುವಷ್ಟು ಬಿತ್ತನೆ ಬೀಜ, ಹಾಗೂ ರಸಗೊಬ್ಬರ ದಾಸ್ತನು ಮಾಡಿದೆ ಶೇಂಗಾ ಕ್ವಾಲಿಟಿಗೆ ಕೆಓಎಪ್ ಅಧಿಕಾರಿಗಳ ಮೂಲಕ ಹಾಗು ನಮ್ಮ ಅಧಿಕಾರಿಗಳ ಮೂಲಕ ಉತ್ತಮ ಗುಣ ಮಟ್ಟದ ಬೀಜ ವಿತರಣೆ ಮಾಡಲಾಗುತ್ತದೆ ಎಂದರು.
ಸರಕಾರ ಸಹಾಯಧನ ನೀಡುವ ಸಿರಿದಾನ್ಯ ಬೆಳೆಯಲು ರೈತರು ಮುಂದಾಗಬೇಕು ಜಿಲ್ಲೆಯಲ್ಲಿ ಅತೀ ಸಿರಿ ದಾನ್ಯ ಬೆಳೆಯುವ ಪ್ರದೇಶ ಆದ್ದರಿಂದ ರೈತರು ಸಿರಿಧಾನ್ಯ ಸಂಸ್ಕರಣೆ ಘಟಕಗಳು ಸ್ಥಾಪಿತವಾಗಿವೆ ಇನ್ನೂ ಸಿರಿದಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಹತ್ತು ಸಾವಿರ ಪರಿಹಾರ ನೀಡಲಾಗುತ್ತದೆ ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುಖಂಡ ಕೆ.ಪಿ.ಭೂತಯ್ಯ, ಮಾತನಾಡಿ, ಒಂಬತ್ತು ಸಾವಿರ ಬಿತ್ತನೆ ಬೀಜಕ್ಕೆ ಹಣ ಕೊಡಬೇಕು ಆದರೆ ನಾವು ಮಾರುಕಟ್ಟೆಗೆ ಶೇಂಗಾ ಹಾಕಿದಾಗ ಕೇವಲ ನಾಲ್ಕು ಸಾವಿರ ಮಾತ್ರ ಈಗೇ ರೈತನನ್ನು ಸಂಕಷ್ಟಕ್ಕೆ ದೂಡುತ್ತಿವೆ ಇನ್ನೂ ಸಬ್ಸಿಡಿ ದರ ಕೂಡ ಕಡಿಮೆ ಇನ್ನೂ ಮಧ್ಯ ವರ್ತಿಗಳ ಹಾವಳಿ ಈಗೇ ರೈತ ನಷ್ಟ ಹೊಂದುತ್ತಾನೆ ಎಂದರು.
ಇನ್ನೂ ಅಖಂಡ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಮಾರುಕಟ್ಟೆಯಲ್ಲಿ ಗುಣಮಟ್ಟದ ಶೇಂಗಾ ಏಳು ಸಾವಿರ ಸಿಗುತ್ತದೆ ಆದರೆ ಕೆಎಂಎಪ್ ಬೆಲೆ ಜಾಸ್ತಿ ಇದರಿಂದ ಸರಕಾರ ಯೋಜನೆ ಕೈಗೆಟುಕದ್ದಾಗಿದೆ. ಇನ್ನೂ ಬೆಳೆ ಪರಿಹಾರ ಹಣ ಮಧ್ಯ ವರ್ತಿಗಳ ಕೈ ಸೆರಿದೆ ಎಲ್ಲಾ ಗ್ರಾಮಗಳ ಲೆಕ್ಕಾಧಿಕಾರಿಗಳ ಸಭೆ ಕರೆದು ಕೋಟಿ ಕೋಟಿ ಲೂಟಿ ಹೊಡೆದ ಹಣ ಮರು 52 ಕೋಟಿ ಹಣ ಮಂಜೂರು ಹಾಗಿದೆ ಆದರೆ ರೈತರಿಗೆ ಬಂದಿದೆ ಆದರೆ ಹಾಕಿಲ್ಲ.
ಆಂದ್ರಪ್ರದೇಶದಲ್ಲಿ ಒಂದು ಕಿಟ್ವಾಂಲಗೆ ಐದು ಸಾವಿರ ಮಾಡಿದ್ದಾರೆ.ಆದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿ ಮಾಡಲಿ ಎಂದರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರಿಗೆ ಕೊಡುವ ಸಂಧರ್ಭದಲ್ಲಿ ಎಂಆರ್‌ಪಿ ಇರುತ್ತದೆ ಆದರೆ ರೈತ ಕೊಡುವ ಸಂಧರ್ಭದಲ್ಲಿ ಎಂಆರ್‌ಪಿ ಇರಲ್ಲ ಈಗೇ ರೈತ ನಷ್ಟದಲ್ಲಿ ಇದ್ದಾನೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಅಶೋಕ, ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ಭೂತಯ್ಯ, ನಗರಸಭೆ ಸದಸ್ಯರಾದ ರಮೇಶಗೌಡ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ಸಿರಿಯಣ್ಣ, ಚನ್ನಕೇಶವ, ವಿರೂಪಾಕ್ಷ ಪ್ಪ, ಕೆಂಚಾಜಿರಾವೋ, ರೇವಣ್ಣ, ಮುಖಂಡರು, ಕಾರ್ಯಕರ್ತರು, ಹಾಗೂ ರೈತರು, ಕೃಷಿ ಇಲಾಖೆ ಅಧಿಕಾರಿಗಳು ಉಸ್ಥಿತರಿದ್ದರು