ಚಿತ್ರದುರ್ಗ ಜೂನ್.13:
2023-24ನೇ ಸಾಲಿಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಹಾಯಕ ನಿರ್ದೇಶಕರು ಗ್ರೇಡ್-1, ಕಾರ್ಯಲಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿ ನಿಲಯಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಊಟ, ಸಮವಸ್ತ್ರ ಲೇಖನಾ ಸಾಮಗ್ರಿ ಹಾಗೂ ಇತರೆ ಮೂಲಭೂತ ಸೌಲಭ್ಯ ಮತ್ತು ಉತ್ತಮವಾದ ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುವುದು.
ಹಿರಿಯೂರು ಟೌನ್ ಸರ್ಕಾರಿ ಬಾಲಕರು ವಿದ್ಯಾರ್ಥಿ ನಿಲಯ, ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಗುಯಿಲಾಳು, ಬುರುಜನರೊಪ್ಪ, ಎಂ.ಡಿ.ಕೋಟೆ, ಆಲೂರು, ಐಮಂಗಲ, ಗನ್ನಾಯಕನಹಳ್ಳಿ, ಹೂವಿನಹೊಳೆ, ಹರಿಯಬ್ಬೆ, ಬೇತೂರಪಾಳ್ಯ, ದೇವರಕೊಟ್ಟ, ದಿಂಡಾವರ, ವಿ.ವಿ.ಪುರ, ಧರ್ಮಪುರ, ಕೋಡಿಹಳ್ಳಿ, ಯಲ್ಲದಕೆರೆ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯಗಳು ಹಾಗೂ ಖಂಡೇನಹಳ್ಳಿ, ಧರ್ಮಪುರ, ವಿ.ವಿ.ಪುರ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಮೀಸಲಾತಿ ನಿಯಮಾನುಸಾರ (ಶೇ75 ಮತ್ತು 25 ರಂತೆ) ಸ್ಥಾನಗಳನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಇತರೆ ಗುಂಪುಗಳಿಗೆ ನೀಡಲಾಗುವುದು. 5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ವೆಬ್‍ಸೆಟ್ http://www.sw.kar.nic.in.com/ ಮೂಲಕ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಹ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳ ಆಯ್ಕೆಯನ್ನು ಆಯ್ಕೆ ಸಮಿತಿಯ ಮೂಲಕ ಹಾಗೂ ಕೌನ್ಸಿಲಿಂಗ್ ಮೂಲಕ ನಡೆಸಲಾಗುವುದು.
ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ; 5ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.75 ರಷ್ಟು ಹಾಗೂ ಇತರೆ ಗುಂಪಿಗೆ ಶೇ.25 ರಷ್ಟು ಮೀಸಲಾತಿಯನ್ನು ಮಾತ್ರ ನೀಡಲಾಗುತ್ತಿದೆ. ಹಾಗೆಯೇ ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯ ಜವನಗೊಂಡನಹಳ್ಳಿಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಶೇ.75 ರಷ್ಟು ಹಾಗೂ ಇತರೆ ಗುಂಪಿಗೆ ಶೇ.25 ರಷ್ಟು ಮೀಸಲಾತಿ ಇರುತ್ತದೆ. ವಿದ್ಯಾರ್ಥಿಯು ಜಾತಿ ಅದಾಯ ಪ್ರಮಾಣ ಪತ್ರ, ಅದಾರ್ ಕಾರ್ಡ್, ಎಸ್.ಎ.ಟಿ.ಎಸ್(sಚಿಣs) ಐ.ಡಿ ಹಾಗೂ ಹಿಂದಿನ ವರ್ಷದ ಅಂಕಪಟ್ಟಿ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಅನ್‍ಲೈನ್ ನಲ್ಲಿ ಅರ್ಜಿಯನ್ನು ಅಪ್‍ಲೋಡ್ ಮಾಡಬೇಕು. ಅನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ಪಾಲಕರಿಗೆ ಸಲ್ಲಿಸತಕ್ಕದ್ದು. ಪ್ರವೇಶ ಕೋರಿರುವ ವಿದ್ಯಾರ್ಥಿಯು ಯಾವ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಹಾಕಲು ಇಚ್ಚಿಸುತ್ತಾರೆಯೋ ಅದೇ ಊರಿನಲ್ಲಿ ಶಾಲೆಗೆ ಕಡ್ಡಾಯವಾಗಿ ದಾಖಲಾಗಿರಬೇಕು. ವಿದ್ಯಾರ್ಥಿ ನಿಲಯಗಳಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಪ್ರವೇಶ ಪಡೆಯುವಾಗ ಕನಿಷ್ಠ ರೂ.50 ರೂ ಗಳ ಭದ್ರತಾ ಠೇವಣಿಯಾಗಿ ವಾರ್ಡನ್ ಅವರಿಗೆ ಪಾವತಿಸಬೇಕು ಎಂದು ಹಿರಿಯೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಗ್ರೇಡ್-1 ತಿಳಿಸಿದ್ದಾರೆ.

Namma Challakere Local News
error: Content is protected !!