ಚಳ್ಳಕೆರೆ: ರಾಷ್ಟ್ರೀಯ ಡೆಂಗಿ ದಿನದ ಘೋಷ ವಾಕ್ಯವನು ಚಳ್ಳಕೆರೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಡೆಂಗೀ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ರೆಹಾನ್ ಪಾಷಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಕಾಶಿ, ಡಾಕ್ಟರ್ ಶ್ರೀನಿವಾಸ್ , ಡಾಕ್ಟರ್ ಮೇಘನಾ ತಿಪ್ಪೇಸ್ವಾಮಿ ಬಿಎಚ್ಇಒ ತಾಲೂಕು ಆರೋಗ್ಯ ಅಧಿಕಾರಿಗಳು ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಜಯಣ್ಣ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು
ಇನ್ನೂ ಡೆಂಗೀ ಜಾತ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿದ ತಹಶೀಲ್ದಾರ್ ರೆಹಾನ್ ಪಾಷಾ, ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು, ರಾಷ್ಟ್ರೀಯ ಡೆಂಗಿ ದಿನ ಘೋಷ ವಾಕ್ಯ ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗಿಯನ್ನು ಸೋಲಿಸೋಣ ಡೆಂಗಿ ರೋಗ ನಿಯಂತ್ರಣಕ್ಕೆ ಮುಂಜಾಗ್ರತ ಕ್ರಮಗಳು ಎಲ್ಲಾ ನೀರಿನ ತೊಟ್ಟಿ ಡ್ರಮ್ ಬ್ಯಾರೆಲ್ ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡುವುದು ತ್ಯಾಜ್ಯ ವಸ್ತುಗಳಾದ ಟೈರ್, ಎಳನೀರು ಚಿಪ್ಪು ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದAತೆ ಎಚ್ಚರ ವಹಿಸುವುದು ಹಾಗೂ ವಿಲೇವಾರಿ ಮಾಡುವುದು ಎಂದರು.
ಇನ್ನೂ ವಿದ್ಯಾರ್ಥಿಗಳಿಂದ ಡೆಂಗೀ ಘೋಷ ವಾಕ್ಯಗಳ ಮೂಲಕ ಚಳ್ಳಕೆರೆ ನಗರದ ನೆಹರು ಸರ್ಕಲ್, ರಹೀಮ್ ನಗರದಿಂದ ಶಾಂತಿನಗರ ಮೂಲಕ ಜಾತ ಸಾಗಿತು.
ಇನ್ನೂ ತಾಲೂಕು ಆಡೋಗ್ಯ ಅಧಿಕಾರಿ ಡಾ.ಕಾಶಿ ಮಾತÀನಾಡಿ, ಈ ಡೆಂಗ್ಯೂ ಈ ರೋಗ ಹರಡಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೋಳ್ಳಬೇಕು, ಮನೆಯಲ್ಲಿ ತೋಟ್ಟಿ, ಇದ್ದರೆ ಎರಡು ದಿನಕ್ಕೋಮ್ಮೆಯಾದರು ಸ್ವಚ್ಚ ಮಾಡಬೇಕು, ಮನೆ ಸುತ್ತಮುತ್ತ ನಿಲ್ಲುವ ನೀರಿನಲ್ಲಿ ಲಾರ್ವಗಳು ಹೆಚ್ಚಾಗಿ ಸೊಳ್ಳೆಗಳು ಉತ್ಪತಿಯಾಗುತ್ತವೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯಂತೆ ಮಲೇರಿಯಾ ರೋಗದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯ ಮೇಲ್ವಿಚಾರಕ ಎಸ್.ಬಿ.ತಿಪ್ಪೇಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ಮಲೇರಿಯಾ ಡೆಂಗೆ ರೋಗರಹಿತ ಸಮಾಜ ನಿರ್ಮಾಣ ಗುರಿಯನ್ನು ಆರೋಗ್ಯಇಲಾಖೆ ಹೊಂದಿದೆ. ಮಳೇಗಾಲವಾದುದ್ದರಿಂದ ಮಲೇರಿಯಾ, ಡೆಂಗೆ ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ನಗರದ ಪ್ರತಿಶಾಲೆಯಿಂದ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಮಲೇರಿಯಾ ಹಬ್ಬಿಸುವ ಸೊಳ್ಳೆಗಳು ಹೆಚ್ಚಾಗಿ ತಗ್ಗು ಪ್ರದೇಶಗಳಲ್ಲಿ ಇರುತ್ತವೆ ಇಂತಹ ತಗ್ಗು ಪ್ರದೇಶಗಳನ್ನು ಮಣ್ಣಿನಿಂದ ಮುಚ್ಚುವುದರ ಮೂಲಕ ಕೊಳಚೆ ನೀರು ಹರಿದು ಹೋಗುವಂತೆ ಕಾಲುವೆಗಳನ್ನು ನಿರ್ಮಿಸವ ಅಗತ್ಯವಿದ್ದು ಇದರಿಂದ ಮಲೇರಿಯಾ ಹರಡದಂತೆ ನೋಡಿಕೊಳ್ಳಬೇಕು ಎಂದರು.