ಚಳ್ಳಕೆರೆ : ತಾಲೂಕಿನ ಕುರುಡಿಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಪ್ರತಿ ವರ್ಷದಂತೆ ಯುಗಾದಿ ಹಬ್ಬದ ಪ್ರಯುಕ್ತ ಸ್ವಾಮಿಯ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮತ್ತು ಬಾವಾಜಿ ಸೇವಾಶ್ರಮದ ವತಿಯಿಂದ ನೆರವೇರಿಸಲಾಯಿತು.
ನೂರಾರು ಭಕ್ತರ ಸಮ್ಮುಖದಲ್ಲಿ ಕಲಾತಂಡಗಳಾದ ಕೊಂಬು, ಕಹಳೆ, ಧಾರಾಡಿಗೊಂಬೆ, ದೈತ್ಯಗೊಂಬೆ, ಊರಿಮೆ ಕಲಾತಂಡಗಳ ಮೂಲಕ ಕುರುಡಿಹಳ್ಳಿ ಲಂಬಾಣಿಹಟ್ಟಿಯ ಪ್ರಮುಖ ಬೀದಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣಿಯಿAದ ನೆರವೇರಿಸಲಾಯಿತು.
ಶ್ರೀಮಠದ ಸ್ವಾಮೀಜಿಯವರಾದ ಶ್ರೀ ಶಿವ ಸಾಧು ಸ್ವಾಮೀಜಿ, ನೇತೃತ್ವದಲ್ಲಿ ರಾಮನಾಯಕ್, ತಿಮ್ಮನಾಯಕ್, ರಂಗನಾಯಕ್ ಮನುಪಾಲನಾಯಕ, ಸತೀಶ್, ನೇತು, ಸೋಮು ಪುರುಷೋತ್ತಮ್, ದೇವಲನಾಯಕ್, ಹೇಮಂತ್‌ಕುಮಾರ್, ಭಾಗ್ಯ ಡಕ್ಯಾನಾಯ್ಕ, ಕೃಷ್ಣ ನಾಯಕ ಮತ್ತು ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು