ಚಿತ್ರದುರ್ಗ: ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ 2017-18 ರಿಂದ 2020-21ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಗ್ರಾಜ್ಯೂಯೇಟ್ ಮೀಟ್ ಕಾರ್ಯಕ್ರಮವನ್ನು ಶ್ರೀಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ರೀ ಪಿ.ಎಸ್.ವಸ್ತçದ್ ಮಾತನಾಡಿ, ಕಳೆದ 15-20 ವರ್ಷಗಳಲ್ಲಿ ವಾಣಿಜ್ಯೋದ್ಯಮದÀಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಎಲ್ಲ ಖರೀದಿ ಮಾರಾಟಗಳು ಆನ್‌ಲೈನ್ ಶಾಪಿಂಗ್‌ನಲ್ಲಿ ನಡೆಯುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಕಲಿಕೆ ನಿರಂತರ. ಜೀವನ ಕಲಿಕೆಯನ್ನು ಎಂದಿಗೂ ನಿಲ್ಲಿಸುವುದಿಲ್ಲ. ಈ ಕಾಲಮಾನ ಸಾಮಾಜಿಕ ಜಾಲತಾಣದ ಯುಗವಾಗಿದೆ. ವಿಜ್ಞಾನಿಯೊಡನೆ ಹತ್ತು ನಿಮಿಷ ಕಳೆದರೆ ನಮ್ಮಲ್ಲಿರುವ ಅಜ್ಞಾನವನ್ನು ಅಳಿಸಬಹುದು. ಶಿಕ್ಷಕರೊಡನೆ ಸಮಯ ಕಳೆದಲ್ಲಿ ಏನಾನ್ನದಾರೂ ಹೊಸದನ್ನು ಕಲಿಯುತ್ತೇವೆ. ಒಬ್ಬ ವ್ಯಾಪಾರಿಯೊಡನೆ ಸಮಯ ಕಳೆದಲ್ಲಿ ವ್ಯಾಪಾರದ ಬಗ್ಗೆ ತಿಳಿಯಬಹುದು. ಆದರೆ ಸ್ನೇಹಿತರೊಡನೆ ಕಳೆಯುವ ಸಮಯ ಅದ್ಭುತವಾದದ್ದು, ಸ್ವರ್ಗದ ಅನುಭವವನ್ನು ನೀಡುವಂತದ್ದು ಹಾಗೂ ಅವಿಸ್ಮರಣೀಯವಾದುದು. ನಾವು ಪ್ರತಿನಿತ್ಯ ಕನಿಷ್ಟ ಎರಡು ಪುಟಗಳನ್ನಾದರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರತಿನಿತ್ಯ ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜೀವನ ಚಿಕ್ಕದು, ಪ್ರತಿಕ್ಷಣವು ಅಮೂಲ್ಯವಾದದು. ಜೀವನದ ಪ್ರತಿಕ್ಷಣವನ್ನು ಸಂತೋಷದಿAದ ಕಳೆಯಲು ಯತ್ನಿಸಬೇಕು. ಯುವ ಮತದಾರರಾದ ನೀವುಗಳೆಲ್ಲರೂ ಮುಂಬರುವ ಚುನಾವಣೆಗಳಲ್ಲಿ ತಪ್ಪದೇ ಮಾತದಾನವನ್ನು ಮಾಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿ ಶ್ರಮಾ ಟೆಕ್ನಾಲಜೀಸ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮರ್‌ಜೀತ್ ಕುಮಾರ್ ಮಾತನಾಡಿ, ಯುವಪದವೀಧರರಾದ ನೀವು ಮೊದಲು ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ನಾವು ಬಾಲ್ಯದಿಂದ ಹಲವಾರು ಘಟ್ಟಗಳನ್ನು ದಾಟಿ ನಮ್ಮ ಶಿಕ್ಷಣ ಪೂರೈಸುತ್ತೇವೆ. ನಂತರದಲ್ಲಿ ನಮ್ಮ ಬದುಕಿನ ನಿಜವಾದ ಹೋರಾಟ ಪ್ರಾರಂಭವಾಗುತ್ತದೆ. ನಮಗೆ ನಾವೇ ಮಾರ್ಗದರ್ಶನ ಮಾಡಿಕೊಳ್ಳಬೇಕು. ನಮ್ಮ ಸಾಮರ್ಥ್ಯ ಗುರುತಿಸಿಕೊಂಡು ಮುಂದೆ ಸಾಗಬೇಕು. ಕೇವಲ ಹಣ ಗಳಿಕೆಯ ಹಿಂದೆ ಬೀಳದೆ ಗುಣಮಟ್ಟದ ಕೆಲಸದ ಕಡೆ ಗಮನ ಹರಿಸಬೇಕು. ಗುಣಮಟ್ಟದ ಕೆಲಸದ ಅನುಭವ ನಮ್ಮನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ನಮ್ಮನ್ನು ನಾವು ತಯಾರಿ ಮಾಡಿಕೊಳ್ಳಬೇಕು. ನಾವು ಮಾಡುವ ವೃತ್ತಿಯನ್ನು ನಾವು ಪ್ರೀತಿಸಬೇಕು ಎಂದು ತಿಳಿಸಿದರು.
ಆಡಳಿತಮಂಡಳಿ ಸದಸ್ಯ ಶ್ರೀ ಬಸವರಾಜ್ ಪಾಟೀಲ್ ಮಾತನಾಡಿ, ಅನ್ನದಾನ ಮಹಾದಾನವಾದರೆ, ವಿದ್ಯಾದಾನ ಪುಣ್ಯವಾದ ದಾನ. ಇಂದು ಎಸ್‌ಜೆಎಂಐಟಿ ಕಾಲೇಜು ಹಲವಾರು ಇಂಜಿನಿಯರುಗಳನ್ನು ಸಮಾಜಕ್ಕೆ ನೀಡಿದೆ. ಪರಿಣಿತವುಳ್ಳ ವ್ಯಕ್ತಿ ಇಂದು ಶ್ರೀಮಂತನಾಗಿ ಬೆಳೆಯುತ್ತಿದ್ದಾನೆ. ವೃತ್ತಿ ನೈಪುಣ್ಯತೆ, ಕೌಶಲ್ಯತೆಯುಳ್ಳ ವ್ಯಕ್ತಿ ಪ್ರಾಮುಖ್ಯತೆ ಪಡೆಯುತ್ತಿದ್ದಾನೆ. ಭಾರತ ಇಂದು ವಿಶ್ವಗುರುವಾಗುತ್ತಾ ಸಾಗಿದೆ. ಈ ನಿಟ್ಟಿನಲ್ಲಿ ಯುವ ಇಂಜಿನಿಯರುಗಳ ಪಾತ್ರ ದೊಡ್ಡದು. ಭಾರತ ವಿಶ್ವಗುರುವಾಗುವಲ್ಲಿ ನಿಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ನುಡಿದರು.
ಪ್ರಾಂಶುಪಾರಾದ ಡಾ.ಭರತ್ ಪಿ.ಬಿ.ಮಾತನಾಡಿ, ಈ ಸಮಾರಂಭವು ವಿದ್ಯಾರ್ಥಿಗಳಿಗೆ ಗೆಳೆಯರೊಂದಿಗೆ ಕಳೆದ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ಮೆಲುಕುಹಾಕಿಸುತ್ತದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಪಡೆಯಲು, ಕೌಶಲ್ಯಾಭಿವೃದ್ಧಿ ತರಬೇತಿ ಹೊಂದಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಕೆ.ವಿ.ಪ್ರಭಾಕರ್, ವಿವಿಧ ಇಲಾಖಾ ಮುಖ್ಯಸ್ಥರುಗಳಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಜಗನ್ನಾಥ ಎನ್, ಪ್ರೊ.ಪೋರಾಳ್ ನಾಗರಾಜ್, ಡಾ.ಸಿದ್ದೇಶ್ ಕೆ.ಬಿ., ಡಾ.ಶ್ರೀಶೈಲ ಜೆ.ಎಂ., ಡಾ.ಲೋಕೇಶ್ ಹೆಚ್.ಜೆ ಕಾರ್ಯಕ್ರಮ ಸಂಚಾಲಕ ಪ್ರೊ.ಲವಕುಮಾರ್ ಟಿ.ಬಿ. ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಸುಷ್ಮಿತಾದೇಬ್ ನಿರೂಪಿಸಿ, ಕು.ಅನನ್ಯ, ಮೋನಿಕ ಪ್ರಾರ್ಥಿಸಿ, ಪ್ರೊ. ಎಸ್ ಚೇತನ್ ಸ್ವಾಗತಿಸಿ, ಪ್ರೊ.ಅನುಷಾ ವಿ ವಂದಿಸಿದರು.