ಚಳ್ಳಕೆರೆ : ಭಾರತೀಯರಾದ ನಮಗೆ ನಮ್ಮ ಪರಂಪರೆ ಮತ್ತು ಇತಿಹಾಸವೇ ನಮ್ಮ ಉಸಿರಾಗಿದೆ ಸಿಂಧೂ ನದಿಯ ನಾಗರಿಕತೆ ಹರಪ್ಪ ಮತ್ತು ಮಹೇಜದರೋ ನಾಗರಿಕತೆ ಇವುಗಳ ಸಮ್ಮಿಲನದಿಂದ ಈಗಿನ ಭಾರತೀಯರ ಸಂಸ್ಕೃತಿ ಶ್ರೀಮಂತ ಗೊಂಡಿದೆ ಮತ್ತು ಉತ್ಕೃಷ್ಟವಾಗಿದೆ ಎಂದು ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಚಳ್ಳಕೆರೆ ತಾಲೂಕಿನ ಮಹದೇವಪುರ ಗ್ರಾಮದ ಲಂಬಾಣಿ ಜನಾಂಗದವರು ಆಯೋಜಿಸಿದಂತಹ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಅದರಲ್ಲೂ ಕೂಡ ನಮ್ಮ ನಮ್ಮ ಚಿತ್ರದುರ್ಗ ಜಿಲ್ಲೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಸಾಂಸ್ಕೃತಿಕ ಆಚಾರ ವಿಚಾರಗಳಿಗೆ ಹಿಡಿದ ಕೈಗಡಿಯಾಗಿದೆ, ಈ ಭಾಗದಲ್ಲಿರುವಂತಹ ಬುಡಕಟ್ಟು ಸಂಸ್ಕೃತಿಗಳು ಬಂಜಾರ ಜನಾಂಗದ ವೈವಿಧ್ಯಮಯವಾದಂತಹ ಬದುಕು ಸಮಾಜದ ವೈಶಿಷ್ಟ್ಯತೆಗೆ ದಾರಿ ದೀಪವಾಗಿದೆ, ಇದೆಲ್ಲವೂ ಕೂಡ ನಮ್ಮ ಪೂರ್ವಜರ ಬಳುವಳಿಯಾಗಿದೆ ಮುಂದಿನ ಪೀಳಿಗೆಗೆ ಈ ಎಲ್ಲ ಸಂಸ್ಕೃತಿಯನ್ನು ನಾವು ಕೊಂಡಯ್ಯ ಬೇಕಾಗಿದೆ ಇದರ ಜೊತೆಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾಗಿದೆ ಜನಾಂಗದ ಪ್ರತಿ ಕುಟುಂಬದಲ್ಲಿ ಮಕ್ಕಳಿಗೆ ಅಗತ್ಯವಾಗಿ ಉನ್ನತ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಒದಗಿಸಬೇಕಾಗಿದೆ ಇದರಿಂದ ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಲು ಸಹಕಾರಿಯಾಗುವುದು ಗಾದಲ್ಲಿ ಸ್ವಾವಲಂಬನೆಯನ್ನು ಕೂಡ ಹೊಂದಲು ಸಾಧ್ಯವಾಗುತ್ತದೆ.
ಹಾಗಾಗಿ ಪ್ರತಿ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಕೊಡುವುದರ ಜೊತೆಗೆ ನಮ್ಮ ಭವ್ಯ ಭಾರತದ ಪರಂಪರೆಯ ಸಾಂಸ್ಕೃತಿಕ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಒಂದು ಕಂಕಣ ಪಡೆಯೋಣ ಸಂತ ಸೇವಾಲಾಲ್ ರವರು ಬಂಜಾರ ಜನಾಂಗದ ಸಾಮಾಜಿಕ ಜನಜೀವನದ ಬದಲಾವಣೆಗೆ ದಾರಿದೀಪವಾದಂತವರು ಇವರ ಆದರ್ಶಗಳನ್ನು ಎಲ್ಲ ಜನಾಂಗದವರು ಮೈಗೂಡಿಸಿಕೊಳ್ಳಬೇಕು ಸಮಾಜದಲ್ಲಿ ಇದ್ದಂತ ಮೌಡ್ಯತೆಯನ್ನು ತೊಡಗಿಸಲು ಅಂತ ಸೇವಾಲಾಲ್ ರವರು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಇಡೀ ಸಮಾಜದವರ ಸ್ವಾಭಿಮಾನಿಗಳಾಗಿ ಬದುಕಲು ದಾರಿದೀಪವಾಗಿದ್ದಾರೆ ಹಾಗಾಗಿ ಸಮಾಜಕ್ಕೆ ಸಂತ ಸೇವಾಲಾಲ್ ರವರ ಕೊಡುಗೆ ಅನನ್ಯವಾದಂತದ್ದು ಎಂದು ಹೇಳಿದರು.

ದೇವರಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಕಾಟಂಲಿAಗಯ್ಯ ಮಾಜಿ ತಾಪಂ ಸದಸ್ಯ ತಿಪ್ಪೇಸ್ವಾಮಿ, ಸಮಾರಂಭ ಉದ್ದೇಶಿಸಿ ಮಾತನಾಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಸುಮಾಚಂದ್ರ ಬೋಸ್, ಕವಿತಾ ಮತ್ತು ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ನಾಗೇಂದ್ರಪ್ಪ ಉಪಸ್ಥಿತರಿದ್ದರು

Namma Challakere Local News

You missed

error: Content is protected !!