ಚಳ್ಳಕೆರೆ : ಈಡೀ ರಾಜ್ಯದ ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ ಮಾಡುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸೊಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜಿಲ್ಲೆಯಲ್ಲಿ ನಡೆಯುವ ಈ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಶಕ್ತಿ ಪ್ರದರ್ಶನ ತೋರಬೇಕು ಎಂದರು.
ತಾಪA.ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರ ಸಾಧನೆಯನ್ನು ಮೆಚ್ಚಿ ಇಂದು ಮೇಲ್ಜಾತಿಯ ವರ್ಗಗಳು ಸಂತಸ ವ್ಯಕ್ತಪಡಿಸುತ್ತಾರೆ, ಆದ್ದರಿಂದ ಶಾಸಕರ ಕೈ ಬಲಪಡಿಸಲು ಜ.8ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ನಂತರ ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಒಂದು ಕಾಲದಲ್ಲಿ ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್‌ನ ಉಕ್ಕಿನಕೋಟೆ ಯಾಗಿತ್ತು ಅಂದಿನಿAದ ಇಂದಿನವರೆಗೆ ಕೋಟೆ ನಾಡಿನಲ್ಲಿ ಕಾಂಗ್ರೇಶ್ ಮೊಳಗುತ್ತಿವೆ ಆದರೆ ಬದಲಾದ ಕಾಲ ಗಟ್ಟದಲ್ಲಿ ನಮ್ಮ ಶಕ್ತಿ ಕುಂದಿದೆ ಆದ್ದರಿಂದ ನಮ್ಮ ಶಕ್ತಿ ಪ್ರದರ್ಶನಕ್ಕೆ ಜ.8ರಂದು ಸುಸಂಧರ್ಭ ಸರ್ವರೂ ಭಾಗವಹಿಸಬೇಕು ಎಂದು ಹೇಳಿದರು.
ನಗರಸಭೆ ಸದಸ್ಯೆ ಕವಿತಾಬೋರಯ್ಯ ಮಾತನಾಡಿ, ಚಳ್ಳಕೆರೆ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ, ಆದ್ದರಿಂದ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಿಕ್ಕೆ ತರಲು ಹಾಗು ಎಸ್ಟಿ ಹಾಗೂ ಎಸ್ಸಿ ಮೀಸಲು ಪಡೆಯಲು ಐಕ್ಯತಾ ಸಮಾವೇಶದ ಮೂಲಕ ಪಣತೊಡೊಣ, ಆರು ಕ್ಷೇತ್ರಗಳಲ್ಲಿ ಏಕೈಕ ಶಾಸಕ ಟಿ.ರಘುಮೂರ್ತಿ ಗೆ ಸಾಥ್ ನೀಡಿ ಎಂದರು.

ಈದೇ ಸಂಧರ್ಭದಲ್ಲಿ ಮುಖ್ಯ ಅತಿಥಿ ಆನಂದ್, ನಗರಸಭೆ ಅಧ್ಯಕ್ಷೆಸುಮಕ್ಕ,ಉಪಾಧ್ಯಕ್ಷೆ ಮಂಜುಳಾ, ಸದಸ್ಯೆ ಕವಿತಾ, ಸುಮಾ ಭರಮಣ್ಣ, ಸುಜತಾ ಪಾಲಯ್ಯ, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಚಳ್ಳಕೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ, ಕಿರಣ್ ಶಂಕರ್, ಬಸವರಾಜ್, ಕೃಷ್ಣಮೂರ್ತಿ, ಪಾಲಯ್ಯ, ನವೀನ್ ಕುಮಾರ್, ಆನಂದ್, ದೊಡ್ಡ ರಂಗಪ್ಪ, ರೆಡ್ಡಿಹಳ್ಳಿಶಿವಣ್ಣ, ಪಿ.ಟಿ.ತಿಪ್ಪೇಸ್ವಾಮಿ, ಅಂಜಿನೇಯ್ಯ, ಮೈತ್ರಿ ದ್ಯಾಮಣ್ಣ, ಕೆ.ವೀರಭದ್ರಪ್ಪ, ಭರಮಣ್ಣ, ಸೈಯದ್, ಹಳೆನಗರ ವೀರಭದ್ರ, ರಾಜು, ಚೌಳೂರು ಪ್ರಕಾಶ್, ಜಗದೀಶ್, ಉಷಾ, ಸರಸ್ವಪತಿ, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!