ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪ ರವರ ಮನೆಗೆ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಬೇಟಿ.

ನಾಯಕನಹಟ್ಟಿ: 2023ರಲ್ಲಿ ನೆಡೆಯುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು.
ವಿವಿಧ ರಾಜಕಾರಣಿಗಳು ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪನವರ ಮನೆಗೆ ಬೇಟಿ ನೀಡುವುದು ಸಂಪ್ರದಾಯವಾಗಿದೆ.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಅಲ್ಲಿಂದ ನೇರವಾಗಿ ನಲಗೇತನಹಟ್ಟಿ ಗ್ರಾಮಕ್ಕೆ ಬೇಟಿ ನೀಡಿದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಪಕ್ಷ ಸಂಘಟನೆ ಬಗ್ಗೆ ಮತದಾರರಲ್ಲಿ ಮನವಿ ಮಾಡಿದರು. ಇದೆ ವೇಳೆ ದಿವಂಗತ ಮಾಜಿ ಶಾಸಕ ಪೂರ್ಣ ಮುತ್ತಪ್ಪ ಅವರ ಮನೆಗೆ ಬೇಟಿ ನೀಡಿ.ಅವರ ಪುತ್ರ ಪೂರ್ಣ ಓಬಯ್ಯ ಅವರಿಗೆ ಗೌರವ ಸಮರ್ಪಣೆ ಮಾಡಿ. ಜೆಡಿಎಸ್ ಪಕ್ಷದ ಸಂಘಟನೆ ಕುರಿತು ಚರ್ಚಿಸಿದರು. ಈ ಸಂಧರ್ಭದಲ್ಲಿ ನಲಗೇತನಹಟ್ಟಿ ಗ್ರಾಮಸ್ಥರಾದ ಪೂಜಾರಿ ಬೋರ್ ಮುತ್ತೆ, ಕಂಪಲಿ ಬೋರಯ್ಯ, ಚನ್ನನ ಬೋರಯ್ಯ, ಗೌಡ್ರು ಬೋರೆಯ್ಯ, ಜಿ ಬಿ ಜಲಂಧರ ಮುತ್ತಯ್ಯ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಿ.ಬಿ.ಕರಿಬಸಪ್ಪ, ಓಬಿಸಿ ಘಟಕ ಅಧ್ಯಕ್ಷ ಚೆನ್ನಬಸಪ್ಪ, ಸಂಘಟನಾ ಕಾರ್ಯದರ್ಶಿ ಸುರೇಂದ್ರಪ್ಪ, ತಾಲೂಕು ಉಪಾಧ್ಯಕ್ಷ ಮಲ್ಲೂರಹಳ್ಳಿ ಸೆಳ್ಳೆ ಗೌಡ, ಬೋರೇಶಿ, ಮಹಾಂತೇಶ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!