ಚಳ್ಳಕೆರೆ : ಪ್ರತಿ ತಿಂಗಳ ಮೂರನೇ ಶನಿವಾರ ರಾಜಾದ್ಯಾಂತ ನಡೆಯುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯಕ್ಕೆ ಗ್ರಾಮೀಣ ಸೊಗಡಿನ ಮೂಲಕ ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಗ್ರಾಮದ ಸಾರ್ವಜನಿಕರು ಭರಮಾಡಿಕೊಡಿಕೊಂಡರು.
ತಾಲೂಕಿನ ಎನ್.ಮಹದೇವಪುರ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯಕ್ಕೆ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ, ಕಂದಾಯ ಇಲಾಖೆ ಆಯೋಜಿಸಿದ್ದ ಸಮಾರಂಭ ಈಡೀ ಗ್ರಾಮದಲ್ಲಿ ಹಬ್ಬದ ವಾತವರಣ ಮನೆ ಮಾಡಿತ್ತು,
ಇನ್ನೂ ಗ್ರಾಮದ ಹೊರ ವಲಯದಿಂದ ಸಮಾರಂಭದ ವೇದಿಕೆಗೆ ಜಿಲ್ಲಾಧಿಕಾರಿಗಳನ್ನು ಹೂವಿನ ಅಲಂಕೃತಗೊAಡ ಜೋಡೆತ್ತು ಬಂಡಿಯಲ್ಲಿ ಮೆರವಣೆಗೆ ಮೂಲಕ ಜಾನಪದ ನೃತ್ಯದ ಕಹಳೆ, ಕೊಂಬು, ಹಾಗೂ ಮ್ಯಾಸಬೇಡರ ಪಡೆ, ಹಾಗೂ ಬುಡಕಟ್ಟು ಸಮುದಾಯದ ಲಂಬಾಣಿ ಮಹಿಳೆಯರ ವೇಶ ತೊಟ್ಟ ಯುವ ನಾರಿಯರ ಪೂರ್ಣಕುಂಭ ಈಗೇ ವಿವಿಧ ಕಲಾ ತಂಡಗಳ ಗೆಜ್ಜೆ ನಾದಕ್ಕೆ ಜಿಲ್ಲಾಧಿಕಾರಿ ಮನಸೋತು ಬಂಡಿಯಲ್ಲಿ ಸಾರ್ವಜನಿಕರನ್ನು ವಿಕ್ಷಿಸುತ್ತ ಸಮಾರಂಭದ ವೇದಿಕೆಯತ್ತ ಸಾಗಿದರು, ದಾರಿಯುದ್ದಕ್ಕೂ ಗ್ರಾಮದ ಮಹಿಳೆರು ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಆತ್ಮಿಯವಾಗಿ ಸಂತಸ ವ್ಯಕ್ತಪಡಿಸಿ ತಾವುಗಳು ಕೂಡ ಸಮಾರಂಭದ ವೇದಿಕೆಯತ್ತಾ ಹೆಜ್ಜೆ ಹಾಕಿದರು.
ಒಟ್ಟಾರೆ ಗ್ರಾಮವಾಸ್ತವ್ಯ ಈಡೀ ಗ್ರಾಮದ ಸಂಪೂರ್ಣ ಚಿತ್ರಣ ಹಾಗೂ ಗ್ರಾಮ ಆಚಾರ ವಿಚಾರ, ಸಂಪ್ರಾದಯಗಳು ಹಾಗೂ ಜೀವನ ಶೈಲಿಯ ಪದ್ದತಿಗಳನ್ನು ಕೂಡ ಈ ಜಾನಪದ ಶೈಲಿಯ ಸ್ವಾಗತದಲ್ಲಿ ಒಳಗೊಂಡಿತ್ತು.