ದೊಡ್ಡೆರಿ ಗ್ರಾಮವನ್ನು ಸಮೀಕ್ಷೆ ಮಾಡಿದ ಎನ್‌ಎಸ್‌ಎಸ್ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ : ಶಾಸಕ ಟಿ.ರಘುಮೂರ್ತಿ ಹೇಳಿಕೆ

ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಕೋವಿಡ್-19ರ ಸಮಯದಲ್ಲಿ ಮುಖ್ಯಮಂತ್ರಿಗಳ ಅಮೃತ ಸಮುದಾಯ ಯೋಜನೆ ಅಡಿಯಲ್ಲಿ ಗ್ರಾಮವನ್ನು ಸಮೀಕ್ಷೆಗೆ ಒಳಪಡಿಸಿ ಮಾಹಿತಿ ಕೃಡೀಕರಿಸಿದ ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕಿನ ದೊಡ್ಡೆರಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮದ ಸ್ವಯಂ ಸೇವಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು,
ಒಂದು ಗ್ರಾಮವನ್ನು ಸಮೀಕ್ಷೆಗೆ ಒಳಪಡಿಸಿ ಮೂಲ ಭೂತ ಸೌಲಭ್ಯಗಳಿಂದ ಪ್ರತಿಯೊಂದು ಸಮಸ್ಯೆಯನ್ನು ಪಟ್ಟಿ ಮಾಡಿ ಕೃಡೀಕರಿಸುವ ಮಹತ್ವದ ಈ ಸಮಕ್ಷೆ ಮಾಡಿರುವುದು ಸಂತಸದಾಯಕ ಎಂದರು.

ಎನ್.ಎಸ್.ಎಸ್.ಕಾರ್ಯಕ್ರಮದ ಅಧಿಕಾರಿ ಶಾಂತಕುಮಾರಿ ಮಾತನಾಡಿ, ಚಳ್ಳಕೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ತಾಲೂಕಿನ ದೊಡ್ಡೇರಿ ಗ್ರಾಮವನ್ನು ಜನವರಿ 5-2021ರಿಂದ ಜನವರಿ 12-2021ರವರೆಗೆ ದತ್ತು ಗ್ರಾಮವಾಗಿ ಸ್ವೀಕರಿಸಲು ಇಲಾಖೆ ಸೂಚನೆ ನೀಡಿತ್ತು, ಇದರ ಅನ್ವಯ ಗ್ರಾಮದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ಸುಮಾರು 50ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು ದೊಡ್ಡೇರಿ ಗ್ರಾಮದಲ್ಲಿ ಸಮೀಕ್ಷೆ ಮಾಡುವ ಮೂಲಕ ಮಾಹಿತಿ ಕೃಡೀಕರಿಸಿದ್ದರು.
ಈ ಮಾಹಿತಿ ಆಧಾರಿತವಾದ ವರಿದಿಯನ್ನು ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರಿಗೆ, ತಹಶೀಲ್ದಾರ್‌ಗೆ ಹಾಗೂ ಇಲಾಖವಾರು ಎಲ್ಲಾ ತಾಲೂಕು ಮುಖ್ಯಸ್ಥರಿಗೆ ತಲುಪಿಸಲಾಗಿದೆ ಎಂದು ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಾಂತಕುಮಾರಿ ಹೇಳಿದ್ದಾರೆ.
ಪೋಟೋ ಚಳ್ಳಕೆರೆ ತಾಲೂಕಿನ ದೊಡ್ಡೆರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ” ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಿಗೆ ಪ್ರಶಸ್ತಿ ಪತ್ರಗಳನ್ನು ಶಾಸಕ ಟಿ.ರಘುಮೂರ್ತಿ ವಿತರಿಸಿದರು.

Namma Challakere Local News
error: Content is protected !!