ಚಿತ್ರದುರ್ಗ – ಶರೀರ, ಇಂದ್ರಿಯ ಮತ್ತು ಬುದ್ಧಿಯ ನಡುವೆ ಸಮತೋಲನ ಸಾಧಿಸುವುದೇ ಸ್ಥಿತಪ್ರಜ್ಞೆ. ಜೀವನದಲ್ಲಿ ನೋವು ನಲಿವು, ಹೊಗಳಿಕೆ ತೆಗಳಿಕೆ ಸರ್ವೇಸಾಮಾನ್ಯ. ಹೊಗಳಿಕೆ ಮತ್ತು ತೆಗಳಿಕೆಯನ್ನು ಯಾರು ಸಮಾನವಾಗಿ ಸ್ವೀಕರಿಸುತ್ತಾರೋ ಅವರು ಸ್ಥಿತಪ್ರಜ್ಞರಾಗಿರುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸರ್ದಾರ್ ಅಹಮದ್ ಪಾಷ ಅವರ ಮನೆಯಂಗಳದಲ್ಲಿ ನಡೆದ ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ 16ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ಥಿತ ಪ್ರಜ್ಞೆ ವಿಷಯ ಕುರಿತು ಶ್ರೀಗಳು ಚಿಂತನ ನೀಡಿದರು.
21ನೇ ಶತಮಾನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ, ಸ್ಪರ್ಧೆ ಇದೆ. ಈ ಪೈಪೋಟಿ ಒಮ್ಮೊಮ್ಮೆ ಹಾರ್ದಿಕ, ಅನೇಕ ಸಂದರ್ಭದಲ್ಲಿ ಅನಾರ್ದಿಕವಾಗಿರುತ್ತದೆ. ಪೈಪೋಟಿ ಅನಿವಾರ್ಯ. ಆದರೆ ನಾವೇಕೆ ಪೈಪೋಟಿ ಮಾಡುತ್ತೇವೆ ಎಂಬುದು ಗಮನಾರ್ಹ. ಬಸವಣ್ಣ, ಪೈಗಂಬರ್ ಸೇರಿದಂತೆ ಎಲ್ಲ ದಾರ್ಶನಿಕರ ಬದುಕಿನಲ್ಲಿ ಸಂಘರ್ಷ ಇತ್ತು. ಅವರು ಸಂಘರ್ಷಕ್ಕೋಸ್ಕರ ಸಂಘರ್ಷ ಮಾಡಲಿಲ್ಲ. ಅವರ ಸಂಘರ್ಷದಲ್ಲಿ ಉತ್ಕರ್ಷವಿತ್ತು. ಅವರದು ಅಭಿವೃದ್ಧಿ ಪರ, ಸಮಾನತೆ, ಕ್ಷೇಮಕರವಾದ ಸಂಘರ್ಷ. ಜೀವನದಲ್ಲಿ ನಡೆಯುತ್ತಿದ್ದ ಪ್ರಲೋಭನೆಗಳನ್ನು, ಅಕೃತ್ಯಗಳನ್ನು, ಆಮಿಷಗಳನ್ನು ನಿಲ್ಲಿಸಿದಂತಹ ಕೀರ್ತಿ ಪೈಗಂಬರರಿಗೆ ಸಲ್ಲುತ್ತದೆ. ಅಸ್ಪೃಶ್ಯ ಆಚರಣೆ ಎಂದಿಗೂ ಧರ್ಮವಾಗುವುದಿಲ್ಲ. ಅಸ್ಪೃಶ್ಯತೆ ನಿವಾರಣೆಗೆ ಬಸವಣ್ಣನವರು ಕ್ರಾಂತಿ, ಆಂದೋಲನ ಮಾಡಿದರು. ಆ ದಿಸೆಯಲ್ಲಿ ಬಸವಣ್ಣನವರು ಸಾಕಷ್ಟು ಕ್ಷೋಭೆ ಅವಮಾನಗಳನ್ನು ಅನುಭವಿಸಿದರೂ ಸಹ ತಮ್ಮ ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ ಎಂದು ಶ್ರೀಗಳು ನುಡಿದರು.
ಭರಮಣ್ಣ ನಾಯಕ ನಿರ್ಮಾಣ ಮಾಡಿದ ಕೆರೆಗಳಿಂದಾಗಿ ಜಿಲ್ಲೆಯು ನೀರಿನ ಅಭಾವದಿಂದ ಹೊರಗಡೆ ಬಂದಿದೆ. ಒಂದು ಧರ್ಮಪೀಠವನ್ನು ನಡೆಸುವವರಿಗೆ, ರಾಜಕಾರಣವನ್ನು ಮುನ್ನಡೆಸುವವರಿಗೆ, ಮಾತ್ರವಲ್ಲದೆ ಈ ರೀತಿಯಾದ ಸ್ಥಿತಪ್ರಜ್ಞೆ ಬೇಕು. 21ನೇ ಶತಮಾನದಲ್ಲಿ ಮುರುಘಾಮಠ ಎಲ್ಲ ಧರ್ಮಗಳು, ಮಠಗಳು ಮುಂದೆ ಬರಲಿ ಎಂಬ ಆಶಯದಿಂದ ದೀಕ್ಷೆ ಹಾಗು ಜಾಗ ಕೊಟ್ಟು ಬಸವಣ್ಣನವರ ವಿಚಾರಧಾರೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಸಮಾಜದಲ್ಲಿ ಯಾವುದೇ ಅಶಾಂತಿ ಉಂಟಾಗದAತೆ ಸೌಹಾರ್ದತೆ ನೆಲೆಸುವ ಕಾರ್ಯವನ್ನು ಮುರುಘಾಮಠ ಮಾಡುತ್ತಿದೆ. ನೊಂದವರ, ಶೋಷಿತರ ಸಾಂತ್ವನಕ್ಕಾಗಿ ಪಾದಯಾತ್ರೆ ಮಾಡಿz್ದೆÃವೆ. ಸಹಪಂಕ್ತಿ ಭೋಜನ ಮಾಡಿಸುವ ಮಠ ಮುರುಘಾಮಠ ಎಂದು ತಿಳಿಸಿದರು.
ಮುಖ್ಯಅತಿಥಿ ಭರಮಸಾಗರದ ಬಾಪೂಜಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ. ಎನ್. ಮಮತ ಮಾತನಾಡಿ, ಬೈಬಲ್, ಭಗವದ್ಗೀತೆ ಎಲ್ಲ ಗ್ರಂಥಗಳಲ್ಲು ಕೂಡ ಸ್ಥಿತಪ್ರಜ್ಞೆ ಬಗ್ಗೆ ಉಲ್ಲೇಖವಿದೆ. ನಮ್ಮ ಕರ್ತವ್ಯವನ್ನು ನಾವು ನಿಷ್ಠೆಯಿಂದ ಮಾಡಬೇಕೆನ್ನುವುದು ಭಗವದ್ಗೀತೆಯಲ್ಲಿ ಕಾಣಬಹುದು. ಏಸುವಿಗೆ ಅಂಗೈಗೆ ಮೊಳಗೆಳನ್ನು ಹೊಡೆದಾಗ್ಯು ಆತ ಉದ್ವೇಗಕ್ಕೆ ಒಳಗಾಗದೆ ಸ್ಥಿತಪ್ರಜ್ಞೆಯಿಂದ ನಗುಮುಖದಿಂದಲೇ ದೇವರೆ ಈ ಮುಗ್ಧರನ್ನು ಕ್ಷಮಿಸು ಎನ್ನುತ್ತಾನೆ. ಮಹಮದ್ ಪೈಗಂಬರ್ ಹಸಿವಿನ ಮುಂದೆ ಧರ್ಮ, ಜ್ಞಾನ, ಪರಿಜ್ಞಾನ ಯಾವುದೂ ಇಲ್ಲ. ಹಸಿದವರಿಗೆ ದಾನವನ್ನು ಮಾಡು ಎಂದಿದ್ದಾರೆ. ಅನ್ನವೇ ದೈವ ಜಗಕ್ಕೆಲ್ಲ ಎಂದು ಸರ್ವಜ್ಞ ಅನ್ನದ ಮಹತ್ವವನ್ನು ಹೇಳಿದ್ದಾನೆ. ಯಾರು ಹಸಿವನ್ನು ಅರ್ಥಮಾಡಿಕೊಳ್ಳುತ್ತಾರೊ ಅವರೇ ಧರ್ಮಾತ್ಮರು. ಗುರುಗೋವಿಂದಭಟ್ಟರು ಶಿಶುನಾಳ ಷರೀಫರಿಗೆ ಸಮಾಜದ ಟೀಕೆಯನ್ನೆದುರಿಸಿ ಸಮಚಿತ್ತತೆಯಿಂದ ದೀಕ್ಷೆಯನ್ನು ನೀಡುತ್ತಾರೆ. ಯಾರಲ್ಲಿ ಭಯ, ಕೋಪ, ಆತಂಕ ದ್ವೇಷ ಅಸೂಯೆ ಇರುತ್ತೋ ಅವರ ಬದುಕಿನಲ್ಲಿ ದುರಂತಗಳು ಘಟಿಸುತ್ತವೆ. ಯಾವುದು ಜ್ಞಾನ, ಅಜ್ಞಾನವೆಂಬುದು ಅರಿತು ಜೀವನ ಸಾಗಿಬೇಕು.
ಸ್ಥಿತಪ್ರಜ್ಞೆ ಅನ್ನುವಂಥದ್ದು ಮೂರುದಿನಕ್ಕೆ ರೂಢಿಸಿಕೊಳ್ಳುವಂಥದಲ್ಲ. ಬುದ್ಧನ ಇಡೀ ಜೀವನ ಸ್ಥಿತಪ್ರಜ್ಞೆಗೆ ಸಾಕ್ಷಿಯಾಗಿದೆ. ಅನೇಕ ಕಷ್ಟ ಅನುಭವಿಸಿದಾಗ್ಯು ಕೂಡ ಆತ ತನ್ನ ಚಿಂತನೆಯನ್ನು ಬದಲಾಯಿಸಲಿಲ್ಲ. ಬುದ್ಧ ಸಿದ್ಧನಾಗಿದ್ದಾಗ ಶುದ್ಧನಾಗಿದ್ದ, ನಂತರ ಬುದ್ಧನಾದಾಗ ಪ್ರಬುದ್ಧನಾದ. ಸಮಾಜದ ಟೀಕೆಗಳನ್ನು ಎದುರಿಸಿದರೂ ಸ್ಥಿತಪ್ರಜ್ಞೆಯನ್ನು ಕಳೆದುಕೊಳ್ಳದೆ ಮುರುಘಾಶರಣರು ಎಲ್ಲ ಸಮಾಜಗಳಿಗೆ ಸ್ವಾಮಿಗಳನ್ನು ನೇಮಿಸಿದರು ಎಂದು ಹೇಳಿದರು
ಸಮ್ಮುಖ ವಹಿಸಿದ್ದ ಬೀದರ್‌ನ ಶರಣೆ ವಚನಸಂಸ್ಕೃತಿ ತಾಯಿ ಮಾತನಾಡಿ, ನಾವು ಸ್ಥಿತಪ್ರಜ್ಞಾವಂತರಾಗಲು ಪ್ರಜ್ಞೆ ಬೇಕು. ಮಾನವ ಜೀವನದಲ್ಲಿ ಸಾಮಾನ್ಯ ಪ್ರಜ್ಞೆ ಜೊತೆಯಲ್ಲಿ ಸಂಸ್ಕಾರವAತರಾಗಬೇಕು. ಶರಣರ ಸಂಗದಿAದ ಆಧ್ಯಾತ್ಮ. ಆಧ್ಯಾತ್ಮದಿಂದ ಅನುಭವ. ಅನುಭವದಿಂದ ಅನುಭಾವ. ಹಂತಹAತವಾಗಿ ಸಾಧನೆ ಮಾಡುತ್ತಾ ಹೋದಾಗ ಮನುಷ್ಯ ಸ್ಥಿತಪ್ರಜ್ಞೆಗೆ ಒಳಗಾಗುತ್ತಾನೆ. ಜೀವನದಲ್ಲಿ ಸಕಲ ಕೋಟಿ ಕೋಟಿ ಜೀವಗಳಲ್ಲಿ ಶ್ರೇಷ್ಠವಾದುದು ಮನುಷ್ಯನ ಜೀವನ. ಮಾನವ ಬದುಕಿನಲ್ಲಿ ಪೈಪೋಟಿ, ಸ್ವಾರ್ಥದ ಜೀವನ ನಡೆದಿದೆ.
ಬಸವಾದಿ ಶರಣರು ಸಮಚಿತ್ತತೆಗೊಳಗಾಗಿದ್ದರು. ಶರಣಸಿದ್ಧಾಂತದಲ್ಲಿ ಮತ್ತು ಇಸ್ಲಾಂಧರ್ಮದಲ್ಲಿ ಏಕದೇವೋಪಾಸನೆ ಕಾಣಬಹುದು. ದಿನನಿತ್ಯ ಎಲ್ಲರು ಆಯಾ ಧರ್ಮಗ್ರಂಥ ಪಠಣ ಮಾಡಿದಾಗ ತತ್ವಸಂದೇಶಗಳನ್ನು ಅರಿಯಬೇಕು. ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಆಧ್ಯಾತ್ಮಿಕ ಕ್ರಾಂತಿ, ಶೈಕ್ಷಣಿಕ ಕ್ರಾಂತಿ ಮಾಡಿದ ಬಸವಣ್ಣನವರು, ಏಸು, ಪೈಗಂಬರ್ ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಸ್ಥಿತಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯ. 12ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸಿಕೊಂಡು 21ನೇ ಶತಮಾನದಲ್ಲಿ ಮುರುಘಾ ಶರಣರು ಎಲ್ಲರ ಮನೆಮನೆಗೆ ಶರಣರ ತತ್ವಸಿದ್ಧಾಂತಗಳನ್ನು ತಲುಪಿಸುತ್ತಿದ್ದಾರೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್, ವಕೀಲರಾದ ರಹಮತ್‌ವುಲ್ಲಾ ಮಾತನಾಡಿದರು. ಕಾರ್ಯಕ್ರಮದ ದಾಸೋಹಿಗಳಾದ ನಗರಸಭೆ ಮಾಜಿ ಅಧ್ಯಕ್ಷ ಸರ್ದಾರ್ ಅಹಮದ್ ಪಾಷ, ವಕ್ಫ್ ಬೋರ್ಡ್ ಅಧ್ಯಕ್ಷ ಎಂಸಿಒ ಬಾಬು, ಅನ್ವರ್‌ಪಾಷಾ, ಶಂಕರ್ ವೇದಿಕೆಯಲ್ಲಿದ್ದರು.
ಮುಸ್ಲಿಂ ಧರ್ಮಗುರುಗಳಾದ ನಯಿಮುದ್ದೀನ್, ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಎಸ್.ಎನ್.ಶ್ರೀಧರ್ ಸ್ವಾಗತಿಸಿದರು. ಆರ್.ಎಸ್. ಜಯದೇವ ನಿರೂಪಿಸಿದರು.