ಚಳ್ಳಕೆರೆ : ಉದ್ಯೋಗ ಸ್ಥಳದಲ್ಲಿ ಉದ್ಯೋಗ ಮಾಡುವ ಕಾರ್ಮಿಕರಿಗೆ ನೆರಳು, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಚಿಕಿತ್ಸೆ ಕಿಟ್ ಈಗೇ ಉದ್ಯೋಗದಾತರಿಗೆ ಸ್ಥಳದಲ್ಲೆ ಸೌಲಭ್ಯ ಸಿಗುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೊದಗಿಸಿರಬೇಕು ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ನಂದೀನಿದೇವಿ ಹೇಳಿದ್ದಾರೆ.
ಅವರು ತಾಲೂಕಿನ ಎನ್.ದೇವರಹಳ್ಳಿ ಹಾಗೂ ಹಿರೆಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಕಾಮಗಾರಿ ಸ್ಥಳಗÀಳನ್ನು ಪರೀಶೀಲನೆ ನಡೆಸಿ ನಂತರ ಮಾತನಾಡಿದರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೊಳಗೆ ನಿಮ್ಮ ಸ್ಥಳದಲ್ಲಿ ವೈಯಕ್ತಿ ಹಾಗೂ ಸಮುದಾಯ ಆಧಾರಿತ ಕೆಲಸ ಮಾಡಿ ಉದ್ಯೊಗ ಪಡಿಯಿರಿ, ಉದ್ಯೊಗ ಖಾತ್ರಿ ಹೊಂದಿದ ಎಲ್ಲಾ ಫಲಾನುವಿಗಳಿಗೆ ಆರೋಗ್ಯ ಇತ ದೃಷ್ಠಿಯಿಂದ ಆಯುಷ್ಮನ್ ಆರೋಗ್ಯ ಕಾರ್ಡ್ ನೀಡಬೇಕು, ನೂರು ದಿನಗಳ ಉದ್ಯೋಗ ಪೂರೈಸಲು ಅಧಿಕಾರಿಗಳು ಕಾಮಗಾರಿ ನಿಗಧಿ ಮಾಡಬೇಕು,
ಕಾಮಗಾರಿ ಸ್ಥಳದಲ್ಲಿ ಉದ್ಯೋಗ ನಿರತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಇತ ದೃಷ್ಠಿಯಿಂದ ಪ್ರಾಥಮಿಕ ಕಿಟ್ ವ್ಯವಸ್ಥೆ ಒಳಗೊಂಡಿರಬೇಕು, ಉದ್ಯೋಗ ಬಯಸಿ ಬರುವ ವಿಕಲ ಚೇತನ ಹಾಗೂ ಹಿರಿಯ ನಾಗರೀಕರಿಗೆ ಉದ್ಯೋಗದಲ್ಲಿ ಶೇ.50 ರಷ್ಟು ವಿನಾಯಿತಿ ನೀಡಬೇಕು ಎಂದರು.
ಈದೇ ಸಂಧರ್ಭದಲ್ಲಿ ತಾಪಂ.ಸಹಾಯಕ ನಿದೇರ್ಶಕ ಸಂತೋಷ್, ತಾಂತ್ರಿಕ ಸಹಾಯಕ ಪ್ರಶಾಂತ್, ಕಾರ್ಯಾದರ್ಶಿ ಪಾಲಯ್ಯ, ಡಿಎಇ ಮಹಂತೇಶ್ ನಾಯಕ, ಗ್ರಾಪಂ.ಅಧ್ಯಕ್ಷೆ ಮಂಜಮ್ಮ, ಸದಸ್ಯರು ಹಾಗೂ ಕಾರ್ಮಿಕರು ಹಾಜರಿದ್ದರು.