ಚಳ್ಳಕೆರೆ :
ಚಳ್ಳಕೆರೆ: ಸೋಮಗುದ್ದು ರಂಗಸ್ವಾಮಿ ಮೇಲಿನ
ಆರೋಪ ಖಂಡನೀಯ
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ
ಸೋಮಗುದ್ದು ರಂಗಸ್ವಾಮಿ ಅವರ ಕೊಡುಗೆ ಜಿಲ್ಲೆ ಹಾಗೂ ರಾಜ್ಯಕ್ಕೆ
ಅಪಾರವಾಗಿದೆ. ಇಂತವರ ಮೇಲೆ ಕೆಲವರು ವಿನಾಕಾರಣ ಆರೋಪ
ಹೊರಿಸಿರುವುದು ಖಂಡನೀಯ ಎಂದು ರೈತ ಮುಖಂಡ ರವಿ
ಹೇಳಿದರು.
ಚಳ್ಳಕೆರೆಯಲ್ಲಿ ಬುಧವಾರ ಮಾತಾಡಿ, ಸೋಮಗುದ್ದು
ರಂಗಸ್ವಾಮಿ ಅವರು, ಭದ್ರಾ ಮೇಲ್ದಂಡೆ ಹೋರಾಟ, ರೈತರ ಬೆಳೆ
ವಿಮೆ ಬಗೆಗಿನ ಹೋರಾಟ ಸೇರಿದಂತೆ ಹಲವು ಹೋರಾಟಗಳಲ್ಲಿ
ಭಾಗಿಯಾಗಿ ರೈತರ ಧ್ವನಿಯಾಗಿದ್ದಾರೆ.
ಇಂತವರ ಆಶಯಗಳನ್ನು
ನಾವುಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದರು