ನಾಯಕನಹಟ್ಟಿ : ಜಾಗನೂರಹಟ್ಟಿ ಕ್ರಾಸ್ ನಿಂದ ಮಲ್ಲೂರಹಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಅಕ್ಕ-ಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದು ವಾಹನ ಸಾವರೆ ತುಂಬಾ ಅನಾನುಕೂಲವಾಗಿದೆ ಎಂದು ಮಲ್ಲೂರಹಟ್ಟಿ ರಾಜಣ್ಣ ದೂರಿದರು.
ನಂತರ ಮಾತನಾಡಿದ ಅವರು ಪ್ರತಿದಿನ ನಮ್ಮ ಹಳ್ಳಿಗಳಿಂದ ಚಳ್ಳಕೆರೆ ಹಾಗೂ ನಾಯಕನಹಟ್ಟಿ ಪಟ್ಟಣಕ್ಕೆ ವಿದ್ಯಾರ್ಥಿಗಳು ಶಾಲಾ ವಾಹನಗಳಲ್ಲಿ ಹೋಗುತ್ತಾರೆ. ಈ ರಸ್ತೆಯಲ್ಲಿ ಹೋಗುವಾಗ ಎದುರುಗಡೆಯಿಂದ ಬಾರಿ ಗಾತ್ರದ ವಾಹನಗಳು ಬಂದರೆ ವಾಹನಗಳು ಹೋಗಲು ಜಾಗವಿಲ್ಲದ ಕಾರಣ ಅರ್ಧ ಕಿಲೋಮೀಟರ್ ನಷ್ಟು ಹಿಂದಕ್ಕೆ ಹೋಗಿ ಬರುವ ಪರಿಸ್ಥಿತಿ ಉದ್ಭವಿಸಿದೆ. ಲೋಕಪಯೋಗಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಹಿತ್ ಮಾತನಾಡಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಿದ್ದರೆ ಪರವಾಗಿಲ್ಲ, ಮೊದಲು ಅಕ್ಕ ಪಕ್ಕ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಜಿಲ್ಲಾಧಿಕಾರಿಗಳು ಲೋಕಪಯೋಗಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.