ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚೆಯಾಗದೆ ಕಾಮಗಾರಿಗಳಿಗೆ ಸೀಮಿತವಾದ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ.
ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಮಂಜುಳ ಶ್ರೀಕಾಂತ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯದ ಬಗ್ಗೆ ಚರ್ಚೆಯಾಗದೆ ಅಜಂಡದಲ್ಲಿನ 31 ವಿಷಯಗಳಾದ ರಸ್ತೆ ಚರಂಡಿ ಸಿಸಿ ರಸ್ತೆಗಳ ವಿಷಯದ ಬಗ್ಗೆ ಚರ್ಚಿಸದೆ ಸಭೆಯನ್ನು ಮುಕ್ತಾಯಗೊಳಿಸಿದರು.
ಇನ್ನೂ ಸಭೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ನಗರುತ್ತಾನ ಯೋಜನೆಯಲ್ಲಿ ಮಂಜೂರಾದ ₹5. ಕೋಟಿ ಹಣ ಯಾವ ಯಾವ ಯಾವುದಕ್ಕೆ ಕಾಮಗಾರಿಯನ್ನ ಮಾಡಿದ್ದೀರಿ ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣ ಪಂಚಾಯತಿಗೆ ಸಂಬಂಧಿಸಿದ ಮಳಿಗೆಗಳು ಎಷ್ಟು ಇವೆ ಅದರಿಂದ ಬರುವ ಆದಾಯ ಎಷ್ಟು ವಿಚಾರ ಮಾಡಿದರು ಪಟ್ಟಣದಲ್ಲಿ ಎಷ್ಟು ಅಸೆಸ್ಮೆಂಟುಗಳು ಇವೆ ಎಂದು ಚರ್ಚಿಸಿದರು.
ಈ ವಿಷಯಕ್ಕೆ ಸಂಬಂಧಿಸಿದ ಮುಖ್ಯಧಿಕಾರಿಯಾದ ಓ. ಶ್ರೀನಿವಾಸ್ ಮಾತನಾಡಿ 24,000 ಖಾತೆಗಳಿದ್ದು ಅದರಲ್ಲಿ 12,000 ಅಸಿಸ್ಮೆಂಟಿವೆ ಎಂದು ಉತ್ತರಿಸಿದರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 20 ಮಳಿಗೆಗಳಿವೆ 9 ಮಳಿಗೆಗಳು ನ್ಯಾಯಾಲಯದಲ್ಲಿದೆ. 4. ಮಳಿಗೆಗಳು ಬೀಡ್ಡುದಾರರು ಡೆಪಾಸಿಟ್ ಮಾಡಿದ್ದಾರೆ. 6. ಮಳಿಗೆಗಳು ಹರಾಜ್ ಆಗಬೇಕಾಗಿದೆ ಎಸ್ ಟಿ ಎಸ್ ಸಿ ಮೀಸಲಾತಿ ಇರುವುದರಿಂದ 4. ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು ಎಂದು ತಿಳಿಸಿದರು.
8 ವರ್ಷಗಳ ನಂತರ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಮೊದಲ ಬಾರಿಗೆ ಸಾಮಾನ್ಯ ಸಭೆಗೆ ಆಗಮಿಸಿದ ಮೊಣಕಾಲ್ಮುರು ಕ್ಷೇತ್ರದ ಶಾಸಕರಾದ ಎನ್.ವೈ. ಗೋಪಾಲಕೃಷ್ಣ ಮಾತನಾಡಿ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್ .ರವಿಕುಮಾರ್ ಮಾತನಾಡಿ ಒಂಬತ್ತನೇ ವಾರ್ಡ್ ಗಳ ವಿವಿಧ ಜ್ವಲಂತರ ಸಮಸ್ಯೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಭವನ ಮುಂಭಾಗದಲ್ಲಿ ನಿರ್ಮಾಣ ಮಾಡುವ ಬಗ್ಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಸರ್ ರವರಿಗೆ ಬೇಡಿಕೆ ಇಟ್ಟರು ಮತ್ತು ಪಟ್ಟಣ ಪಂಚಾಯತಿ ಎಲ್ಲಾ ಖಾತೆಗಳ ವಸ್ತುಗಳ ಸಂಗ್ರಹ ವರದಿ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಮತ್ತು ಪಟ್ಟಣ ಪಂಚಾಯಿತಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಪಟ್ಟಣ ಪಂಚಾಯತಿಗೆ ನೀಡಿದರೆ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಹೆಚ್ಚು ಅನುದಾನವನ್ನು ತಂದರೆ ಪಟ್ಟಣ ಪಂಚಾಯತಿ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಎಂದು ಹೇಳಿದರು.
ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಎಷ್ಟು ಜನ ಪೌರಕಾರ್ಮಿಕರಿದ್ದಾರೆ ಕಚೇರಿಯಲ್ಲಿ ಎಷ್ಟು ನೌಕರರ ಕೆಲಸ ಮಾಡುತ್ತಾರೆ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗೆ ಪ್ರಶ್ನಿಸಿದರು.
ಇದಕ್ಕೆ ಸಂಬಂಧಿಸಿದ ಮುಖ್ಯಧಿಕಾರಿ ಓ.ಶ್ರೀನಿವಾಸ್ ಮಾತನಾಡಿ ಪೌರಕಾರ್ಮಿಕರು 20 ಜನ ವಾಟರ್ ಮ್ಯಾನ್ 3 ಜನ ಕಚೇರಿಯಲ್ಲಿ ಕೆಲಸ ಮಾಡುವವರು 10 ಜನ ಇದ್ದಾರೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷ ಸರ್ವಮಂಗಳ ಉಮಾಪತಿ, ಸದಸ್ಯರಾದ ಕೆ ಪಿ ತಿಪ್ಪೇಸ್ವಾಮಿ ಟಿ .ಮಹೇಶ್ವರಿ ರಾಜಯ್ಯ, ಸುನಿತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಜೆ ಆರ್ ರವಿಕುಮಾರ್, ಪಾಪಮ್ಮ, ಅಬಕಾರಿ ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಪಿ ಬೋಸಮ್ಮ ಮಂಜುನಾಥ್, ಪಿ ಓಬಯ್ಯ ದಾಸ್, ಗುರು ಶಾಂತಮ್ಮ, ಹಾಗೂ ಪಟ್ಟಣ ಪಂಚಾಯತಿ ನೌಕರರು ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು