ಚಳ್ಳಕೆರೆ : ಸಹಕಾರ ಸಂಘಗಳು ಸರ್ವತೋಮುಖ ಏಳಿಗೆಗೆ ಸದಾ ಶ್ರಮಿಸುವಂತಿರಬೇಕು ಶ್ರಮಿಕ ವರ್ಗದವರ ದುಡಿಮೆಗೆ ಕೈಗನ್ನಡಿಯಾಗಬೇಕು ಎಂದು ಚಳ್ಳಕೆರೆ ಶಿವಶಕ್ತಿ ಸೌಹರ್ದ ಸಹಕಾರಿ ಸಂಘದ
ಉಪಾಧ್ಯಕ್ಷ ಎಂಜೆ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ ಎಸ್ ಆರ್ ಎಸ್ ಕನ್ ವೆನ್ಷನ ಹಾಲನಲ್ಲಿ ಚಳ್ಳಕೆರೆ ಶಿವಶಕ್ತಿ ಸೌಹಾರ್ದ ಸಹಕಾರ ಸಂಘದ 2023-24 ನೇ ದ್ವೀತಿಯ ವರ್ಷದ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾನ ಮನಸ್ಕರು ಒಂದೂಗೂಡಿ ಮಾಡಿದ ಸಹಕಾರ ಸಂಘ ಇತರೆ ಸಂಘಗಳಿಗೆ ಮಾದರಿಯಾಗಿದೆ, ಅದರಂತೆ ಸಂಘದಲ್ಲಿ ಕೈಗೊಂಡ ತೀರ್ಮಾನಗಳು, ಹಾಗೂ ಲಾಭಾಂಶ ಭಾಗದಲ್ಲಿ ಸಂಘವು ಸೇವೆಗೆ ಮುಂದಾಗಲಿದೆ, ಅದರಂತೆ ವಾರ್ಷಿಕವಾಗಿ ಸರ್ವ ಸದಸ್ಯರ ಒಳಗೊಂಡ ಚರ್ಚೆಗಳು ಇಂದು ನಡೆದಿವೆ ಎಂದರು.

ಇನ್ನೂ ಅಧ್ಯಕ್ಷ ಕೆ.ಸಿ.ವಿರೇಶ್ ಮಾತನಾಡಿ, ಈಗಾಗಲೇ ಸಂಘವು ಎರಡನೇ ವರ್ಷ ಪೂರೈಸಿದ್ದು, ಶೇರುದಾರರು ಸಂಖ್ಯೆಯು ಹೆಚ್ಚಳವಾಗಿದೆ, ಸಂಘದ ಅಡಿಯಲ್ಲಿ ಕೆಲವು ಜನಪರ ಸೇವೆ ಮಾಡುವುದರಿಂದ ಸಂಘದ ಕೀರ್ತಿ ಹೆಚ್ಚಾಗಲಿದೆ ಎಂದರು.

ಇದೇ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಸುಧಾಮಣಿ, ಬಾಸ್ಕರ್ ರಾವ್ ಗಾಯಕ್ ವಾಡ್, ಎನ್ ಹೆಚ್ ರಾಜು, ಕುಂದೂರು ಮಹಾಂತೇಶ್ , ಟಿ.ಮಂಜುನಾಥ್ , ಸಿವಿ.ರಮೇಶ್, ದೀಪ ಎಚ್, ಎನ್ ಶ್ವೇತಾ, ಕೆಪಿ.ಶಿವಲಿಂಗಪ್ಪ, ಎಂ ನವೀನ ಗಾಯಕ್ ವಾಡ್, ಕೆ.ಸಿ.ರಾಘವೇಂದ್ರ, ಇತರರು ಭಾಗವಹಿಸಿದ್ದರು

About The Author

Namma Challakere Local News
error: Content is protected !!