ಶ್ರೀ ವಾಸವಿ ಪದವಿ ಕಾಲೇಜ್ ನಲ್ಲಿ ಆ.24 ರಂದು ಕ್ಯಾಂಪಸ್ ಸೆಲೆಕ್ಷನ್ ..!
ಪ್ರಾಂಶುಪಾಲರಾದ ಜೆ.ಶ್ರೀರಾಮುಲು ಕರೆ.
ಚಳ್ಳಕೆರೆ :
ರಾಜ್ಯದ ಪ್ರತಿಷ್ಠಿತ ಕಂಪನಿಗಳಾದ ಎನ್ಐಐಟಿ ಮುಖಾಂತರ ನೊಂದಾಯಿತ ಬ್ಯಾಂಕಗಳಿಗೆ ಇದೇ ತಿಂಗಳ 24 ಆಗಸ್ಟ್ ರಂದು ಬೆಳಗ್ಗೆ 10.30 ಕ್ಕೆ ಕ್ಯಾಂಪಸ್ ಸೆಲೆಕ್ಷನ್ ಆಯೋಜಿಸಲಾಗಿದೆ ಎಂದು ಶ್ರೀ ವಾಸವಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜೆ.ಶ್ರೀರಾಮುಲು ಹೇಳಿದ್ದಾರೆ.
ಅವರು ನಗರದ ಶ್ರೀ ವಾಸವಿ ಪದವಿ ಕಾಲೇಜ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಉದ್ಯೋಗಕ್ಕಾಗಿ ಎಲ್ಲಿಯೂ ಕೂಡ ಅಲೆಯುವಾಗಿಲ್ಲ ನೀವಿದ್ದಲ್ಲೆಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ಮೇಳ ಆಯೋಜಿಸಲಾಗಿದೆ ಆದ್ದರಿಂದ
ವಾಸವಿ ಕಾಲೇಜಿನ ಆವರಣದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮತ್ತು ಈಗಾಗಲೇ ಮೂರು ವರ್ಷದ ಹಿಂದೆ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ವಿವಿಧ ಕಂಪನಿಗಳಿಂದ ಉದ್ಯೋಗ ಮೇಳದ ಅವಕಾಶವಿದ್ದು ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೊಗವನ್ನು ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಚೈತನ್ಯ ವಿದ್ಯಾ ಸಂಸ್ಥೆ ಹಾಗೂ ಶ್ರೀವಾಸವಿ ಪದವಿ ಪೂರ್ವ ಕಾಲೇಜು ಚಳಕೆರೆ, ಇವರ ಆಶ್ರಯದಡಿಯಲ್ಲಿ ಡಾ. ಬಿ ರಾಧಾಕೃಷ್ಣ ರವರ ನೇತೃತ್ವದಲ್ಲಿ ಶ್ರೀ ವಾಸವಿ ಪದವಿ ಪೂರ್ವ ಕಾಲೇಜು ವತಿಯಿಂದ ಕ್ಯಾಂಪಸ್ ಸೆಲೆಕ್ಷನ್ ನ್ನು ಹಮ್ಮಿಕೊಳ್ಳಲಾಗಿದೆ,
ಅದರಲ್ಲಿ ವಿಶೇಷವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಬೇಕು. ಆಗಸ್ಟ್ 29 ರಂದು ಎಎಲ್ಎಲ್ ಎಸ್ ಇಸಿ ಬೆಂಗಳೂರು ಇವರ ವತಿಯಿಂದ ಇದೇ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಅವಕಾಶ ವಂಚಿತರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದು ಕೋರಿದ್ದಾರೆ