ಚಳ್ಳಕೆರೆ:
ಹಣದಿಂದ ಸಂತೋಷ ನಿದ್ರೆ ನೆಮ್ಮದಿ
ಕೊಂಡುಕೊಳ್ಳಲಾಗದು
ಮನುಷ್ಯ ಯಾವಾಗಲೂ ಹೇಡಿ ಆಗಬಾರದು. ಎಂಥ ಸಂದರ್ಭ
ಬಂದರೂ ಮನಸ್ಸನ್ನ ದುರ್ಬಲಮಾಡಿಕೊಳ್ಳ ಬಾರದು ಎಂದು
ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಸಾಣೆಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಒಲಿದಂತೆ ಹಾಡುವೆ
ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರಿಗೆ ಸಮಸ್ಯೆ
ಸವಾಲುಗಳು ಇದ್ದೇ ಇರುತ್ತೆ ಇಂತಹ ಸಮಯದಲ್ಲಿ ಕೈಯಲ್ಲಿ
ಬುದ್ಧಿಯನ್ನ ಕೊಡದೆ ವಿವೇಕದ ಮೂಲಕ ಮನದ ಮೇಲೆ
ಹತೋಟಿ ಸಾಧಿಸಬೇಕು,
ಹಣ ಅಧಿಕಾರ ಕೀರ್ತಿ ಯಾವುದು
ಸಂತೋಷದಿಂದ ಇರಲು ಸಾಧ್ಯವಿಲ್ಲ. ಹಣದಿಂದ ಸಂತೋಷ
ಕೊಂಡುಕೊಳ್ಳಾಗದೆಂದರು.