ನಿವೃತ್ತಿ ಸೈನಿಕನಿಗೆ ಹುಟ್ಟೂರಿನ ಕೂನಬೇವು ಗ್ರಾಮಸ್ಥರು
ಅದ್ದೂರಿ ಸ್ವಾಗತ:

ಸಿಆರ್ಪಿಎಫ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಓ.ಜಯಣ್ಣ.

37 ವರ್ಷ ಸಿ ಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸಿದ ಕೂನಬೇವು ಗ್ರಾಮದ ಸೈನಿಕ ಓ.ಜಯಣ್ಣ.
ಯೋಧನನ್ನು ಬೆಳ್ಳಿ ರಥದಲ್ಲಿ ಕೂರಿಸಿ ಊರ ತುಂಬಾ ಮೆರವಣಿಗೆ.

ತುರುವನೂರು:: ಹೋಬಳಿಯ ಕೂನಬೇವು ಗ್ರಾಮದ 37 ವರ್ಷ ಸಿಆರ್‌ಎಫ್‌ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವ ಓ.ಜಯಣ್ಣ,

ತೆರೆದ ವಾಹನ ಬೆಳ್ಳಿರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ದೂರಿ ಸ್ವಾಗತವನ್ನು ಕೋರಿದರು.

ಗ್ರಾಮದ ಯುವಕ ಯುವತಿಯರು ಕುಣಿದು ಭರ್ಜರಿ ಸ್ಟೆಪ್ಪು ಹಾಕುವ ಮೂಲಕ ಪಟಾಕಿ ಸಿಡಿಸಿ ಮೆರವಣಿಗೆ ಉದ್ದಕ್ಕೂ ಸಂಭ್ರಮಿಸಿದರು.
ಮಂಗಳವಾರ ಕೂನಬೇವು ಗ್ರಾಮದಲ್ಲಿ ಸಿಆರ್ಪಿಎಫ್ ನಲ್ಲಿ 37 ವರ್ಷ ಕಾಲ ಸೇವೆ ಸಲ್ಲಿಸಿದ ಓ ಜಯಣ್ಣನವರ ಅಭಿನಂದನ ಸಮಾರಂಭದಲ್ಲಿ
ಅರೇಸೇನಾ ಪಡೆ ಜಿಲ್ಲಾಧ್ಯಕ್ಷ ನಿಂಗರಾಜ್ ಮಾತನಾಡಿದರು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬರುವ ಸೈನಿಕರು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಯುವಕರಿಗೆ ಮಾರ್ಗದರ್ಶನ ಮಾಡಿ ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ದೇಶದ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ ಮಳೆ ಗಾಳಿ ಶೀತವನ್ನು ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಪ್ರತಿ ಭಾರತೀಯರನ್ನು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರು ದೇವರಿಗೆ ಸರಿಸಮಾನರು ಎಂದು ಹೇಳಿದರು.

ನಿವೃತ್ತ ಸೈನಿಕ ಓ.ಜಯಣ್ಣ ಮಾತನಾಡಿದ ಅವರು ಯುವಕರು ದೇಶ ಸೇವೆ ಸಲ್ಲಿಸಲು ಮುಂದೆ ಬರಬೇಕು ಇದು ಹೆಮ್ಮೆಯ ಕೆಲಸ ಸೈನಿಕರು ಕೇವಲ ಗಡಿ ಕಾಯುವ ಕೆಲಸದ ಜೊತೆಗೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ಸಮಾಜದ ಸದಾ ಋಣಿಯಾಗಿರಬೇಕು ರೈತ ಇಡೀ ದೇಶಕ್ಕೆ ಅನ್ನ ನೀಡಿದರೆ ಸೈನಿಕ ದೇಶ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಿದ್ದಾನೆ ಇವರಿಬ್ಬರೂ ದೇಶದ ಬೆನ್ನೆಲುಬು ಗ್ರಾಮಸ್ಥರು ನನ್ನನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ ಅವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು.

ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಮಾತನಾಡಿದರು ನಿವೃತ್ತ ಸೈನಿಕ ಓ ಜಯಣ್ಣ ಸತತ 37 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಸ್ವ ಗ್ರಾಮಕ್ಕೆ ಆಗಮಿಸಿರುವುದು ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದೆ ಆದರಿಂದ ಗ್ರಾಮ ಯುವಕರು ಓ. ಜಯಣ್ಣನವರ ಕಾರ್ಯ ಸಾಧನೆ ನೋಡಿ ಪ್ರೇರಣೆಯಾಗಬೇಕು ಹಾಗೂ ದೇಶ ಸೇವೆ ಮಾಡಲು ಪ್ರತಿಯೊಬ್ಬರು ಪಣತೊಡಬೇಕು ಎಂದರು.

ವೀರ ಯೋಧರ ಕುರಿತು ದೇಶಭಕ್ತಿ ಗೀತೆಗಳನ್ನು ಹಾಡಿದ ಗಾಯಕ ನಲಗೇತನಹಟ್ಟಿ ಕೆ ಟಿ ಮುತ್ತುರಾಜ್.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಅರಸೇನಾ ಪಡೆ ಜಿಲ್ಲಾ ಉಪಾಧ್ಯಕ್ಷ ಡಿ. ಜಯಣ್ಣ, ಹಾಗೂ ಎಲ್ಲಾ ಸದಸ್ಯರು ಸಮಸ್ತ ಕೂನಬೇವು ಗ್ರಾಮದ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!